ದೆಹಲಿ ಜನಕ್ಕೆ ಜ್ವರದ ಕಾಟ: ಹೆಚ್ಚುತ್ತಿವೆ ಡೆಂಗ್ಯೂ, ಹಂದಿ, ವೈರಲ್ ಜ್ವರ ಪ್ರಕರಣಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ದೇಶದ ರಾಜಧಾನಿ ದೆಹಲಿ ಜ್ವರದಿಂದ ತತ್ತರಿಸಿದೆ. ದೆಹಲಿ ಮತ್ತು ಎನ್‌ಸಿಆರ್ ಪ್ರದೇಶದಲ್ಲಿ ವೈರಲ್ ಜ್ವರ ಮತ್ತು ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ವೈದ್ಯರು ಆತಂಕ ಹೊರಹಾಕಿದ್ದಾರೆ. ದೆಹಲಿಯಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹದಿಂದ ಕಳೆದ ಮೂರು ವಾರಗಳಲ್ಲಿ ಡೆಂಗ್ಯೂ ಪ್ರಕರಣಗಳು ದ್ವಿಗುಣಗೊಂಡಿವೆ.

ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ ಬಿಡುಗಡೆ ಮಾಡಿದ ಇತ್ತೀಚಿನ ಹೇಳಿಕೆಯಲ್ಲಿ, ಕಳೆದ ಆರು ವರ್ಷಗಳಲ್ಲಿ ಅತಿ ಹೆಚ್ಚು ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ.

ಇನ್ನೂ ಹಂದಿ ಜ್ವರ, ಟೈಫಾಯಿಡ್‌ನಂತಹ ವೈರಲ್ ಕಾಯಿಲೆಗಳ ಪ್ರಕರಣಗಳು ಸಹ ವರದಿಯಾಗುತ್ತಿವೆ. ನೊಯ್ಡಾದ ಫೋರ್ಟಿಸ್ ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್ ನಿರ್ದೇಶಕ ಅಜಯ್ ಅಗರ್ವಾಲ್ ಮಾತನಾಡಿ, ಡೆಂಗ್ಯೂ ಜ್ವರದಿಂದ ಆಸ್ಪತ್ರೆಗಳಿಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ರೋಗಿಗಳಲ್ಲಿ ಪ್ಲೇಟ್‌ಲೆಟ್ ಸಂಖ್ಯೆ ಕಡಿಮೆಯಾಗಿದೆ.

ಅಸ್ವಸ್ಥತೆ, ದೌರ್ಬಲ್ಯ, ಕೀಲು ನೋವು, ಕೆಮ್ಮು, ವಾಂತಿ ಮತ್ತು ಅಧಿಕ ಜ್ವರದಿಂದ ರೋಗಿಗಳು ಆಸ್ಪತ್ರೆಗಳಿಗೆ ದಾಖಲಿಸಲಾಗುತ್ತಿದ್ದಾರೆ. ದೆಹಲಿ, ಗುರುಗ್ರಾಮ್, ಫರಿದಾಬಾದ್, ನೋಯ್ಡಾ ಮತ್ತು ಗಾಜಿಯಾಬಾದ್‌ನ 9 ಸಾವಿರ ನಿವಾಸಿಗಳನ್ನು ಸಮೀಕ್ಷೆಗೆ ಒಳಪಡಿಸಿದಾಗ, ಕಳೆದ ತಿಂಗಳಿಗಿಂತ ಈಗ 50 ಪ್ರತಿಶತ ಕುಟುಂಬಗಳು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ. ಜ್ವರದಿಂದ ಬಳಲುತ್ತಿರುವವರು ತಕ್ಷಣ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ. ಜ್ವರದಿಂದ ತತ್ತರಿಸುತ್ತಿರುವ ದೆಹಲಿಯಲ್ಲಿ ಯಾವುದೇ ಕೊರೊನಾ ಪ್ರಕರಣಗಳಿಲ್ಲ, ಹೀಗಾಗಿ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

Please follow and like us:

tmadmin

Leave a Reply

Your email address will not be published. Required fields are marked *

Next Post

ಕಾರುಗಳಿಗೆ 6 ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸುವುದಿಲ್ಲ: ಹೆದ್ದಾರಿ ಸಚಿವ ನಿತಿನ್ ಗಡ್ಕರಿ

Thu Sep 14 , 2023
ನವದೆಹಲಿ, ಸೆಪ್ಟೆಂಬರ್‌ 14: ಕಾರುಗಳಿಗೆ ಆರು ಏರ್‌ಬ್ಯಾಗ್‌ಗಳನ್ನು ಸರ್ಕಾರ ಕಡ್ಡಾಯಗೊಳಿಸುವುದಿಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ವಾಹನ ಸವಾರರ ಸುರಕ್ಷತೆಗಾಗಿ 2023 ರ ಅಕ್ಟೋಬರ್‌ನಿಂದ ಆರು ಏರ್‌ಬ್ಯಾಗ್‌ಗಳ ಸುರಕ್ಷತಾ ಮಾನದಂಡವನ್ನು ಜಾರಿಗೆ ತರಲು ಸರ್ಕಾರ ಕಳೆದ ವರ್ಷ ಪ್ರಸ್ತಾಪಿಸಿತ್ತು. ಬುಧವಾರ ಈ ಬಗ್ಗೆ ನಿತಿನ್‌ ಗಡ್ಕರಿ ಅವರು ಕಾರುಗಳಿಗೆ ಆರು ಏರ್‌ಬ್ಯಾಗ್‌ಗಳ ನಿಯಮವನ್ನು ಕಡ್ಡಾಯಗೊಳಿಸಲು ನಾವು ಬಯಸುವುದಿಲ್ಲ ಎಂದು ಅವರು ಕಾರ್ಯಕ್ರಮವೊಂದರಲ್ಲಿ […]

Advertisement

Wordpress Social Share Plugin powered by Ultimatelysocial