ʼಸೌಂದರ್ಯʼ ವರ್ಧಿಸಲು‌ ಮನೆಯಲ್ಲೇ ಮಾಡಿ ಫೇಸ್ ಕ್ರೀಮ್!

 

ದುಬಾರಿ ಕ್ರೀಮ್ ಗಳನ್ನು ಬಳಸಿ ತ್ವಚೆಯನ್ನು ಹಾಳು ಮಾಡುವ ಬದಲು ಮನೆಯಲ್ಲೇ ಮಾಡಬಹುದಾದ ಒಂದಷ್ಟು ಕ್ರೀಮ್ ಗಳನ್ನು ಬಳಸಿ ಆರೋಗ್ಯವಂತ ತ್ವಚೆ ಪಡೆಯುವುದು ಹೇಗೆಂದು ನೋಡೋಣ.

ಬಾದಾಮಿಯನ್ನು ಒಣ ಬೀಜಗಳ ರಾಜ ಎಂದು ಕರೆಯುತ್ತಾರೆ. ಇದು ದೇಹದ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯವರ್ಧಕವೂ ಹೌದು.

ದಿನ ರಾತ್ರಿ ಎಂಟು ಬಾದಾಮಿ ಬೀಜಗಳನ್ನು ನೀರಿನಲ್ಲಿ ನೆನೆಸಿಡಿ. ಬಳಿಕ ಅದರ ಸಿಪ್ಪೆ ತೆಗೆಯಿರಿ. ಅದನ್ನು ಮಿಕ್ಸಿಗೆ ಹಾಕಿ ಗುಲಾಬಿ ನೀರನ್ನು ಸೇರಿಸಿ ನುಣ್ಣಗೆ ರುಬ್ಬಿ. ಬಳಿಕ ಬಾದಾಮಿ ಪೇಸ್ಟ್ ಹಿಂಡಿ ರಸ ತೆಗೆಯಿರಿ.

ಈ ರಸಕ್ಕೆ ಎರಡು ಚಮಚ ಬಾದಾಮಿ ಎಣ್ಣೆ ಬೆರೆಸಿ. ಎರಡು ವಿಟಮಿನ್ ಕ್ಯಾಪ್ಸೂಲ್ ಒಳಗಿರುವ ದ್ರಾವಣ ಹಾಕಿ ಬೆರೆಸಿ. ತುಸು ಅಲೋವೆರಾ ಜೆಲ್ ಅನ್ನು ಹಾಕಿ ಪೇಸ್ಟ್ ರೀತಿಯಲ್ಲಿ ಮಿಕ್ಸ್ ಮಾಡಿ. ಇದನ್ನು ಸಣ್ಣ ಬಾಕ್ಸಿಗೆ ಹಾಕಿಡಿ.

ಪ್ರತಿದಿನ ರಾತ್ರಿ ಮಲಗುವ ವೇಳೆ ಇದನ್ನು ಮುಖಕ್ಕೆ ಲೇಪಿಸಿ ಮುಂಜಾನೆ ಇದನ್ನು ತೊಳೆಯಿರಿ. ಮಲಗುವ 15 ನಿಮಿಷ ಮುಂಚೆ ಹಾಕಿ ಮಸಾಜ್ ಮಾಡಿ. ಫ್ರಿಡ್ಜ್ ನಲ್ಲಿಟ್ಟು 20 ದಿನಗಳ ತನಕ ಈ ಕ್ರೀಮನ್ನು ಬಳಸಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೇ ತಿಂಗಳಲ್ಲಿ ತೆರೆಗೆ ಬರ್ತಿದೆ 'ಖಾಸಗಿ ಪುಟಗಳು' ಸಿನಿಮಾ.!

Fri Apr 8 , 2022
  ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸಿರುವ “ಖಾಸಗಿ ಪುಟಗಳು” ಸಿನಿಮಾದ ಮತ್ತೊಂದು ಮನಮೋಹಕ ಗಾನಲಹರಿ ಬಿಡುಗಡೆಯಾಗಿದೆ‌. ಅರೆಘಳಿಗೆ ಎಂಬ ಸಾಹಿತ್ಯದಿಂದ ಶುರುವಾಗುವ ಹಾಡಿಗೆ ಕೆ.ಕಲ್ಯಾಣ್ ಚೆಂದದ ಸಾಹಿತ್ಯ ಬರೆದಿದ್ದು, ವಾಸುಕಿ ವೈಭವ್ ಅದ್ಭುತ ಮ್ಯೂಸಿಕ್ ನೀಡಿದ್ದು, ರಘು ರಾಮ್ ಹಾಗೂ ಸುನಿಧಿ ಕಂಠ ಕುಣಿಸಿದ್ದಾರೆ. ಇಬ್ಬರು ಮುದ್ದಾದ ಜೋಡಿಯ ನಡುವಿನ ರೊಮ್ಯಾಂಟಿಕ್ ಗೀತೆ ಇದಾಗಿದ್ದು, ‘ಪರಂವಃ ಮ್ಯೂಸಿಕ್’ ನಲ್ಲಿ ಹಾಡು ಸಖತ್ ಸೌಂಡ್ ಮಾಡ್ತಿದೆ. ಈ ಮೊದಲು ತ್ರಿಲೋಕ್ […]

Advertisement

Wordpress Social Share Plugin powered by Ultimatelysocial