ದೇಶದಲ್ಲಿ ನಿನ್ನೆ ದಾಖಲೆಯ ಸೋಂಕು ಪತ್ತೆ

ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಅಟ್ಟಹಾಸ ಹೆಚ್ಚುತ್ತಲೇ ಇದೆ. ಭಾರತದಲ್ಲಿ ನಿನ್ನೆ ಅತಿಹೆಚ್ಚು ಕೊರೊನಾ ಸೋಂಕು ಪತ್ತೆಯಾಗಿದ್ದು, ಕಳೆದ 24 ಗಂಟೆಯಲ್ಲಿ 24,850 ಹೊಸ ಪ್ರಕರಣಗಳು ದೃಢಪಟ್ಟಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 6.73 ಲಕ್ಷಕ್ಕೆ ಏರಿಕೆಯಾಗಿದೆ. ಒಂದೇ ದಿನದಲ್ಲಿ 613 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ದೇಶದಲ್ಲಿ ಈವರೆಗೆ 19,268 ಸೋಂಕಿತರು ಸಾವನ್ನಪ್ಪಿದ್ದಾರೆ. ದೇಶದಲ್ಲಿ ಈಗ 2,44,814 ಪ್ರಕರಣಗಳು ಸಕ್ರಿಯವಾಗಿದ್ದು, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ದೇಶದಲ್ಲಿ 4,09,083 ಕೊರೊನಾದಿಂದ ಚಿಕಿತ್ಸೆ ಪಡೆದು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.ಎಂದು ಹೆಲ್ತ್ ಬುಲೆಟಿನ್ ಮಾಹಿತಿ ನೀಡಿದೆ.

Please follow and like us:

Leave a Reply

Your email address will not be published. Required fields are marked *

Next Post

ಸರ್ಕಾರದ ಆದೇಶಕ್ಕೆ ಜನರ ಸ್ಪಂದನೆ

Sun Jul 5 , 2020
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿ ಕೊರೊನಾ ವೈರಸ್ ಮಹಾಮಾರಿಯ ಅಟ್ಟಹಾಸಕ್ಕೆ ಸಂಡೆ ಬ್ರೇಕ್ ಹಾಕಿದೆ. ಸರ್ಕಾರದ ಆದೇಶದಂತೆ ದೇವದುರ್ಗ ತಾಲೂಕಿನಲ್ಲಿ ಜಾಲಹಳ್ಳಿಯಲ್ಲಿ ಸಂಡೆ ಲಾಕ್ ಡೌನ್ ಮಾಡಲಾಗಿದ್ದು. ದೇವದುರ್ಗ ಪಟ್ಟಣದ ಅಂಬೇಡ್ಕರ್ ಸರ್ಕಲ್ ರಸ್ತೆ, ಪ್ರಮುಖ ರಸ್ತೆ, ಮಾರ್ಕೆಟ್ , ಝಹೀರುದ್ದೀನ್ ಪಾಷಾ ಸರ್ಕಲ್ ಸೇರಿ ಹಲವು ಕಡೆಗಳಲ್ಲಿ ತರಕಾರಿ ಅಂಗಡಿಗಳನ್ನೂ ಮುಚ್ಚಲಾಗಿದೆ. ಮತ್ತು kSRTC ಬಸ್ ನಿಲ್ದಾಣದಲ್ಲಿ ಜನಸಾಮಾನ್ಯರು ಓಡಾಡುವುದು ಕಂಡು ಬಂದಿಲ್ಲ, ಸೋಮವಾರ ಬೆಳಗ್ಗೆ 5 ಗಂಟೆವರೆಗೂ […]

Advertisement

Wordpress Social Share Plugin powered by Ultimatelysocial