ಅಂದಿನ ಮಾಡೆಲ್‌ ಸವಿತಾ ಬಾಯಿಗೆ ಇಂದು ಮಾಯಕೊಂಡ ಕ್ಷೇತ್ರದ ಶಾಸಕಿಯಾಗುವ ಗುರಿ

ದಾವಣಗೆರೆ: ‘ಮಾಯಕೊಂಡ ಎಸ್‌ಸಿ ಮೀಸಲು ಕ್ಷೇತ್ರ ನಾನು ಹುಟ್ಟಿದಾಗಿನಿಂದಲೂ ಅಭಿವೃದ್ಧಿ ಕಾಣದೇ ಮೊದಲಿನಂತೆ ಇದೆ. ಹೀಗಾಗಿ ಇಲ್ಲಿನ ಜನರ ಸಂಕಷ್ಟಗಳಿಗೆ ಸ್ಪಂದಿಸಲು ರೇ ಫೌಂಡೇಷನ್‌ ಎನ್‌ಜಿಒ ಮೂಲಕ ಸಮಾಜ ಸೇವೆ ಮಾಡುತ್ತಿದ್ದೇನೆ.

ಕ್ಷೇತ್ರದ ಜನ ಬಯಸಿದರೆ ಮುಂದಿನ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತೇನೆ’ ಎಂದು ರೇ ಫೌಂಡೇಷನ್‌ನ ಅಧ್ಯಕ್ಷೆ ಸವಿತಾ ಬಾಯಿ ಮಲ್ಲೇಶನಾಯ್ಕ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಡು ಬಡವರು, ಅಂಗವಿಕಲರು, ಬಡ ವಿದ್ಯಾರ್ಥಿಗಳಿಗೆ ನೆರವು ನೀಡುವ ಉದ್ದೇಶದಿಂದ ರೇ ಫೌಂಡೇಷನ್‌ ಸ್ಥಾಪಿಸಿದ್ದೇವೆ. ಸಂಕಷ್ಟದಲ್ಲಿರುವ ಹಳ್ಳಿಯ ಜನರಿಗೆ ವೈದ್ಯಕೀಯ ಚಿಕಿತ್ಸೆ ಹಾಗೂ ಆರ್ಥಿಕ ನೆರವು ನೀಡಲಾಗುವುದು. ಸರ್ಕಾರಿ ಶಾಲೆಗಳಿಗೆ ಶೌಚಾಲಯ, ಡೆಸ್ಕ್‌ಗಳನ್ನು ಕೊಡುಗೆಯಾಗಿ ನೀಡುತ್ತಿದ್ದೇವೆ. ನಮ್ಮ ಸಂಸ್ಥೆಯ ವೆಬ್‌ಸೈಟ್‌ ಅನ್ನು ತರಳಬಾಳು ಸಿರಿಗೆರೆ ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸೋಮವಾರ ಬಿಡುಗಡೆ ಮಾಡಿದ್ದಾರೆ’ ಎಂದು ತಿಳಿಸಿದರು.

‘ಮಾಯಕೊಂಡ ಕ್ಷೇತ್ರ ವ್ಯಾಪ್ತಿಯ ಕಾರಿಗನೂರು ನನ್ನ ಹುಟ್ಟೂರು. ಮಾಡೆಲಿಂಗ್‌ ಮಾಡುತ್ತಿದ್ದೆ. ಅಮೆರಿಕಾದಲ್ಲಿ ಐದು ವರ್ಷ ಕೆಲಸ ಮಾಡಿದ ಬಳಿಕ ದೇಶಕ್ಕೆ ಮರಳಿ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳಬೇಕು ಅನಿಸಿತು. ದೆಹಲಿ, ಚೆನ್ನೈನಲ್ಲೂ ಕೆಲ ಕಾಲ ಕೆಲಸ ಮಾಡಿದ್ದೆ. ನನ್ನ ಹುಟ್ಟೂರು ಇಂದಿಗೂ ಅಭಿವೃದ್ಧಿ ಕಾಣದೇ ಇರುವುದರಿಂದ ಇಲ್ಲಿಯೇ ಸವೆ ಸಲ್ಲಿಸಬೇಕು ಎಂದು ತವರಿಗೆ ಮರಳಿ ಬಂದಿದ್ದೇನೆ’ ಎಂದು ಹೇಳಿದರು.

‘ಮಾಯಕೊಂಡ ಕ್ಷೇತ್ರ ಇನ್ನೂ ಹಿಂದುಳಿದೆ. ನಾಗಮ್ಮ ಕೇಶವಮೂರ್ತಿ ಶಾಸಕರಾಗಿ ಆಯ್ಕೆಯಾದ ಬಳಿಕ ಇಲ್ಲಿಂದ ಮತ್ತೊಬ್ಬ ಮಹಿಳೆ ಆಯ್ಕೆಯಾಗಿಲ್ಲ. ಈಗಾಗಲೇ ಕ್ಷೇತ್ರದ 180 ಹಳ್ಳಿಗಳಿಗೆ ಹೋಗಿ ಬಂದಿದ್ದೇನೆ. ನಾನು ಚುನಾವಣೆಗೆ ಸ್ಪರ್ಧಿಸಬೇಕು ಎಂದು ಕ್ಷೇತ್ರದ ಜನ ಬಯಸಿದರೆ ಖಂಡಿತವಾಗಿಯೂ ಸ್ಪರ್ಧಿಸುತ್ತೇನೆ. ಯಾವ ಪಕ್ಷದಿಂದ ಸ್ಪರ್ಧಿಸಬೇಕು ಎಂದು ಜನರೊಂದಿಗೆ ಚರ್ಚಿಸಿ ಮುಂದೆ ನಿರ್ಧಾರ ಕೈಗೊಳ್ಳುತ್ತೇನೆ’ ಎಂದು ಸವಿತಾ ಬಾಯಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸವಿತಾ ಬಾಯಿ ಪತಿ, ಏರ್‌ ಇಂಡಿಯಾ ಪೈಲಟ್‌ ನಿತಿನ್‌, ಸೇವಾದಳದ ಅಧ್ಯಕ್ಷ ಡೋಲಿ ಚಂದ್ರ, ಮಾಯಕೊಂಡದ ಕಿಸಾನ್‌ ಕಾಂಗ್ರೆಸ್‌ ಉಪಾಧ್ಯಕ್ಷ ರವಿ ಎನ್‌. ಪತ್ರಿಕಾಗೋಷ್ಠಿಯಲ್ಲಿ ಇದ್ದರು

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಡಿಮೆ ಆದಾಯವಿದ್ರೂ ಕಡಿತವಾಗ್ತಿದ್ಯಾ ತೆರಿಗೆ...? ಮರುಪಾವತಿ ಪಡೆಯಲು ಇಲ್ಲಿದೆ ಸುಲಭ ವಿಧಾನ

Tue Mar 29 , 2022
ಎಷ್ಟೋ ಬಾರಿ ಸಂಬಳ ತೆರಿಗೆಗೆ ಒಳಪಡದೇ ಇದ್ರೂ ಟಿಡಿಎಸ್‌ ಕಡಿತವಾಗಿರುತ್ತೆ. ಕೆಲವೊಮ್ಮೆ ತೆರಿಗೆ ವಿಧಿಸಬಹುದಾದ ಸಂಬಳಕ್ಕಿಂತ ಹೆಚ್ಚು ಟಿಡಿಎಸ್ ಕಡಿತಗೊಂಡಿರುತ್ತೆ. ಅದನ್ನು ಮರಳಿ ಪಡೆಯೋದು ಹೇಗೆ ಅನ್ನೋದು ಹಲವರ ಪ್ರಶ್ನೆ. ಈ ವಿಧಾನವು ತುಂಬಾನೇ ಸುಲಭ, ಹೇಗೆ ಅನ್ನೋದನ್ನು ನೋಡೋಣ.ಕಂಪನಿ ತೆರಿಗೆ ವಿಧಿಸಬಹುದಾದ ಸಂಬಳಕ್ಕಿಂತ ಹೆಚ್ಚು ಟಿಡಿಎಸ್‌ ಕಡಿತ ಮಾಡಿದ್ರೆ ನೀವು ರಿಟರ್ನ್‌ ಫಾರ್ಮ್‌ ಅನ್ನು ಭರ್ತಿ ಮಾಡಿ. ಆದಾಯ ತೆರಿಗೆ ಇಲಾಖೆಯು ನಿಮ್ಮ ಸಂಬಳದ ಮೇಲಿನ ಒಟ್ಟು ತೆರಿಗೆಯನ್ನು […]

Advertisement

Wordpress Social Share Plugin powered by Ultimatelysocial