ದೇಶಾದ್ಯಂತ ಹಲವು ರಾಜ್ಯಗಳ 24 ಸ್ಥಳಗಳಲ್ಲಿ ಇಡಿ ದಾಳಿ

ವದೆಹಲಿ, ಫೆಬ್ರವರಿ 21: ಮಂಗಳವಾರ ದೇಶಾದ್ಯಂತ ಹಲವು ರಾಜ್ಯಗಳ 24 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ.

ಜಾರ್ಖಂಡ್, ಬಿಹಾರ, ದೆಹಲಿ ಮತ್ತು ಹರಿಯಾಣದಲ್ಲಿ ದಾಳಿ ನಡೆಸಲಾಗಿದೆ. ರಾಂಚಿಯಲ್ಲಿ ಜಾರ್ಖಂಡ್ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಮುಖ್ಯ ಇಂಜಿನಿಯರ್ ವೀರೇಂದ್ರ ರಾಮ್ ಅವರ ನಿವಾಸದ ಮೇಲೆ ಜಾರಿ ನಿದೇರ್ಶನಾಲಯ ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

2019 ರಲ್ಲಿ ಜಾರ್ಜಂಡ್‌ನ ಅಧೀನ ಅಧಿಕಾರಿಯೊಬ್ಬರಿಂದ ಅಪಾರ ಪ್ರಮಾಣದ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ನಂತರ ಇಡಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಪ್ರಕರಣವನ್ನು ಕೈಗೆತ್ತಿಕೊಂಡಿದೆ. ರಾಂಚಿಯ ಜೊತೆಗೆ ಜಮ್ಶೆಡ್‌ಪುರದಲ್ಲಿ ದಾಳಿ ನಡೆಸಲಾಗಿದೆ.

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಛತ್ತೀಸ್‌ಗಢದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ನಡೆಸಿದ ದಾಳಿಗಳ ಕುರಿತು ಭಾರತೀಯ ಜನತಾ ಪಕ್ಷ (ಬಿಜೆಪಿ) ವಿರುದ್ಧ ವಾಗ್ದಾಳಿ ನಡೆಸಿದ್ದು, ಇದು ಹಗೆತನದ ರಾಜಕೀಯವಾಗಿದೆ. ಕಾಂಗ್ರೆಸ್‌ನ ಸರ್ವಸದಸ್ಯ ಅಧಿವೇಶನಕ್ಕೂ ಮುನ್ನ ಅವರು (ಬಿಜೆಪಿ) ಯಾವ ಸಂದೇಶವನ್ನು ನೀಡಲು ಪ್ರಯತ್ನಿಸುತ್ತಿದ್ದಾರೆ? ಛತ್ತೀಸ್‌ಗಢದಲ್ಲಿ ದಾಳಿಗಳನ್ನು ನೋಡುವುದು ನೋವಿನ ಸಂಗತಿ ಎಂದು ಹೇಳಿದರು.

ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶಗೊಂಡಿದ್ದಾರೆ. ಇದು ನಾಟಕವಲ್ಲದೆ ಬೇರೇನೂ ಅಲ್ಲ ಎಂದು ದೇಶದ ಜನರು ಅರ್ಥಮಾಡಿಕೊಳ್ಳುತ್ತಿದ್ದಾರೆ. ಇಡಿ ದಾಳಿಯಿಂದ ಕಾಂಗ್ರೆಸ್ ಹೆದರುತ್ತದೆ ಎಂದು ಅವರು ಭಾವಿಸುತ್ತಾರೆ? ಕಾಂಗ್ರೆಸ್ ಪಕ್ಷವು ಬ್ರಿಟಿಷರ ವಿರುದ್ಧ ಹೋರಾಡಿದೆ. ನಮ್ಮ ಅನೇಕ ನಾಯಕರು ಜೈಲಿಗೆ ಹೋಗಿದ್ದಾರೆ. ನಾವು ಅದರ ವಿರುದ್ಧ ಹೋರಾಡುತ್ತೇವೆ ಎಂದರು.

ಸೋಮವಾರ ಮುಂಜಾನೆಯೂ ಗಣಿಗಾರಿಕೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಛತ್ತೀಸ್‌ಗಢದ ಹತ್ತಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ನಡೆಸಿತು. ವಿವಿಧ ಕಾಂಗ್ರೆಸ್ ಮುಖಂಡರ ವಸತಿ ಮತ್ತು ಕಚೇರಿ ಆವರಣ ಸೇರಿದಂತೆ ಶೋಧ ನಡೆಸಲಾಗಿದೆ. ಛತ್ತೀಸ್‌ಗಢ ಕಾಂಗ್ರೆಸ್ ಖಜಾಂಚಿ ರಾಮಗೋಪಾಲ್ ಅಗರ್ವಾಲ್ ಅವರ ಆವರಣದಲ್ಲಿ ಶೋಧ ನಡೆಸಲಾಗಿದೆ. ಭಿಲಾಯಿ ಶಾಸಕ ದೇವೇಂದ್ರ ಯಾದವ್, ಗಿರೀಶ್ ದೇವಾಂಗನ್, ಆರ್ ಪಿ ಸಿಂಗ್, ವಿನೋದ್ ತಿವಾರಿ, ಸನ್ನಿ ಅಗರ್ವಾಲ್ ಮೇಲೆಯೂ ಇಡಿ ದಾಳಿ ನಡೆಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಮೂಲಗಳ ಪ್ರಕಾರ, ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ಸೂರ್ಯಕಾಂತ್ ತಿವಾರಿಯಿಂದ ರಾಮ್‌ಗೋಪಾಲ್ ಅಗರ್ವಾಲ್ 52 ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ ಎಂಬುದಕ್ಕೆ ಜಾರಿ ನಿರ್ದೇಶನಾಲಯವು ಬಲವಾದ ಸಾಕ್ಷ್ಯವನ್ನು ಹೊಂದಿದೆ ಎನ್ನಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಏಪ್ರಿಲ್ 1ರಿಂದ ದುಡಿಯುವ ಹೆಣ್ಣು ಮಕ್ಕಳಿಗೆ ಹಾಗೂ ಶಾಲಾ ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ : ಸಿಎಂ ಬೊಮ್ಮಾಯಿ

Tue Feb 21 , 2023
  ಬೆಂಗಳೂರು: ಏಪ್ರಿಲ್ 1ರಿಂದ ದುಡಿಯುವ ಹೆಣ್ಣು ಮಕ್ಕಳಿಗೆ ಹಾಗೂ ಶಾಲಾ ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ವ್ಯವಸ್ಥೆ ಕಲ್ಪಿಸಲು ಎಲ್ಲ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು. ಅವರು ಇಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವೋಲ್ವೋ ಮಲ್ಟಿ ಆಕ್ಸೆಲ್ ಬಿಎಸ್ 4 -9600 ಸ್ಲೀಪರ್ ಬಸ್ಸುಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು. ಮಹಿಳೆಯರಿಗೆ ಗೌರವದ ಜೊತೆಗೆ ಆರ್ಥಿಕವಾಗಿ ಸ್ವಾವಲಂಬಿಯಾಗಲು ಈ ಯೋಜನೆ ರೂಪಿಸಲಾಗಿದೆ. ಮಿನಿ ಸ್ಕೂಲ್ […]

Advertisement

Wordpress Social Share Plugin powered by Ultimatelysocial