ಪಿಂಕ್ ನೋಟ್” ಸಿನಿಮಾದಲ್ಲಿ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ನಟಿ ಭಾವನಾ..!

ಜಾಕಿ ಖ್ಯಾತಿಯ ಭಾವನಾ ಮತ್ತೆ ಸಿನಿಮಾ ರಂಗದಲ್ಲಿ ಸಕ್ರೀಯರಾಗಿದ್ದಾರೆ. ಭಜರಂಗಿ 2 ಸಿನಿಮಾದ ನಂತರ ಅವರಿಗೆ ಮತ್ತಷ್ಟು ಅವಕಾಶಗಳು ಬರುತ್ತಿದ್ದು, ಇದೀಗ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಪಿಂಕ್ ನೋಟ್ ಎಂದು ಹೆಸರು ಇಡಲಾಗಿದೆ.

ದುಡ್ಡಿನ ಹಿಂದೆ ಬಿದ್ದಾಗ ಮನುಷ್ಯ ಏನೆಲ್ಲ ಆಗುತ್ತಾನೆ ಎನ್ನುವ ಕುರಿತಾದ ಕಥಾ ಹಂದರ ಈ ಸಿನಿಮಾದಲ್ಲಿದ್ದು, ಮಂಗಳೂರಿನಲ್ಲಿ ನಡೆದ ನೈಜ ಘಟನೆಯನ್ನು ಈ ಸಿನಿಮಾಗಾಗಿ ಬಳಸಿಕೊಂಡಿದ್ದಾರಂತೆ ನಿರ್ದೇಶಕರು.

ಮಧ್ಯಮ ವರ್ಗದ ಕುಟುಂಬದಲ್ಲಿ ನಡೆದ ಘಟನೆ ಇದಾಗಿದ್ದು, ಭಾವನಾ ಕೂಡ ಮಧ್ಯಮ ವರ್ಗದ ಅಕ್ಕ-ತಂಗಿಯ ಪಾತ್ರವನ್ನು ನಿರ್ವಹಿ ಸುತ್ತಿದ್ದಾರೆ. ದಿಗಂತ್ ಅಲಿಯಾಸ್ ರಕ್ಷಣ್ ಈ ಸಿನಿಮಾದ ನಿರ್ದೇಶಕರಾಗಿದ್ದು, ಅಮ್ಮ ಎಂಟರ್ ಟೇನ್ಮೆಂಟ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ತಯಾರಾಗಲಿದೆ. ಬುಧವಾರವಷ್ಟೇ ಈ ಚಿತ್ರಕ್ಕೆ ಬೆಂಗಳೂರಿನಲ್ಲಿ ಮುಹೂರ್ತವಾಗಿದ್ದು, ಮೊದಲ ದೃಶ್ಯಕ್ಕೆ ಶಿವಮೂರ್ತಿ ಮುರಘಾ ಶರಣರು ಕ್ಲ್ಯಾಪ್ ಮಾಡುವ ಮೂಲಕ ಚಾಲನೆ ನೀಡಿದ್ದಾರೆ. ‘2010ರಂದು ಮಂಗಳೂರಿನಲ್ಲಿ ನಡೆದ ಘಟನೆಯನ್ನು ನಿರ್ದೇಶಕರು ಹೇಳಿದಾಗ ಥ್ರಿಲ್ ಆಯಿತು. ದ್ವಿಪಾತ್ರ ಮಾಡುವುದು ಸವಾಲಿನ ಕೆಲಸವಾದರೂ,

ಇಂತಹ ಪಾತ್ರದಲ್ಲಿ ನಟಿಸುವುದು ಥ್ರಿಲ್ ಅನಿಸುತ್ತದೆ’ ಎಂದಿದ್ದಾರೆ ಭಾವನಾ. ಪಾತ್ರದ ಹಿನ್ನೆಲೆ ಮತ್ತು ಕಥೆಯ ಗುಟ್ಟವನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಸದ್ಯ ನಾಯಕಿಯನ್ನು ಮಾತ್ರ ಆಯ್ಕೆ ಮಾಡಿದ್ದು, ನಾಯಕನ ಪಾತ್ರವನ್ನು ಮುಂದಿನ ದಿನಗಳಲ್ಲಿ ಬಹಿರಂಗ ಮಾಡು ವುದಾಗಿ ಚಿತ್ರತಂಡ ಘೋಷಿಸಿದೆ. ಶ್ರೀನಿವಾಸ್ ಪ್ರಭು, ಪದ್ಮಜರಾವ್ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿದ್ದಾರೆ. ಬಹುತೇಕ ಕಥೆಯು ಅರಬ್ ಪ್ರಾಂತ್ಯದಲ್ಲಿ ನಡೆಯುವುದರಿಂದ ದುಬೈನ ರಸಾಸೆಲ್ ಖೈಮ್ ದಲ್ಲಿ ಶೇಕಡಾ ಅರವತ್ತರಷ್ಟು ಶೂಟಿಂಗ್ ಮಾಡುತ್ತಾರಂತೆ ನಿರ್ದೇಶಕರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸುದೀಪ್‌ಗೆ ರಕ್ಷಿತ್ ಶೆಟ್ಟಿ ನಿರ್ದೇಶನ: ಎಲ್ಲಿ ತನಕ ಬಂತು ಸಿನಿಮಾ!

Sat May 14 , 2022
  ನಟ ರಕ್ಷಿತ್ ಶೆಟ್ಟಿ ಸದ್ಯ ‘777 ಚಾರ್ಲಿ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರ ಜೂನ್ 10ಕ್ಕೆ ರಿಲೀಸ್‌ಗೆ ರೆಡಿಯಾಗಿದೆ. ಈ ಸಿನಿಮಾ ಮುಗಿಯುತ್ತಿದ್ದ ಹಾಗೆ ರಕ್ಷಿತ್ ಶೆಟ್ಟಿಯ ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ ಬರಲಿದೆ. ಈ ಚಿತ್ರದ ಕೆಲಸಗಳು ಕೂಡ ಬಹುತೇಕ ಮುಗಿದಿದ್ದು ‘ಚಾರ್ಲಿ’ ಬಳಿಕ ಈ ಸಿನಿಮಾ ಹೆಚ್ಚು ಸಮಯ ತೆಗೆದುಕೊಳ್ಳದೆ ತೆರೆಗೆ ಬರಲಿದೆ. ಇದರ ನಡುವೆ ರಕ್ಷಿತ್ ಶೆಟ್ಟಿ ಮತ್ತು ಸುದೀಪ್ ಸಿನಿಮಾ ಏನಾಯ್ತು ಎನ್ನುವ ಬಗ್ಗೆ […]

Advertisement

Wordpress Social Share Plugin powered by Ultimatelysocial