ಸುದೀಪ್‌ಗೆ ರಕ್ಷಿತ್ ಶೆಟ್ಟಿ ನಿರ್ದೇಶನ: ಎಲ್ಲಿ ತನಕ ಬಂತು ಸಿನಿಮಾ!

 

ನಟ ರಕ್ಷಿತ್ ಶೆಟ್ಟಿ ಸದ್ಯ ‘777 ಚಾರ್ಲಿ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರ ಜೂನ್ 10ಕ್ಕೆ ರಿಲೀಸ್‌ಗೆ ರೆಡಿಯಾಗಿದೆ. ಈ ಸಿನಿಮಾ ಮುಗಿಯುತ್ತಿದ್ದ ಹಾಗೆ ರಕ್ಷಿತ್ ಶೆಟ್ಟಿಯ ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ ಬರಲಿದೆ.

ಈ ಚಿತ್ರದ ಕೆಲಸಗಳು ಕೂಡ ಬಹುತೇಕ ಮುಗಿದಿದ್ದು ‘ಚಾರ್ಲಿ’ ಬಳಿಕ ಈ ಸಿನಿಮಾ ಹೆಚ್ಚು ಸಮಯ ತೆಗೆದುಕೊಳ್ಳದೆ ತೆರೆಗೆ ಬರಲಿದೆ.

ಇದರ ನಡುವೆ ರಕ್ಷಿತ್ ಶೆಟ್ಟಿ ಮತ್ತು ಸುದೀಪ್ ಸಿನಿಮಾ ಏನಾಯ್ತು ಎನ್ನುವ ಬಗ್ಗೆ ಮಾಹಿತಿ ಸಿಕ್ಕಿದೆ. ಸುದೀಪ್‌ಗಾಗಿ ಸಿನಿಮಾ ಮಾಡುವುದಾಗಿ ನಟ ರಕ್ಷಿತ್ ಶೆಟ್ಟಿ ಹೇಳಿಕೊಂಡಿದ್ದರು. ಕಥೆ ರೆಡಿ ಇದೆ. ಆದರೆ ಇದನ್ನು ಸುದೀಪ್ ಒಪ್ಪಿದರಾ, ಇಬ್ಬರು ಒಟ್ಟಿಗೆ ಸಿನಿಮಾ ಮಾಡುವುದು ಪಕ್ಕಾನಾ ಎನ್ನುವ ಬಗ್ಗೆ ಸಾಕಷ್ಟು ಕುತೂಹಲಗಳು ಇವೆ.

ಈಗ ಇದಕ್ಕೆಲ್ಲಾ ಉತ್ತರ ಸಿಕ್ಕಿದೆ. ಗಾಂಧಿ ನಗರದಲ್ಲಿ ಈ ಬಗ್ಗೆ ಹೊಸ ಸುದ್ದಿ ಹರಿದಾಡುತ್ತಾ ಇದೆ. ನಟ ರಕ್ಷಿತ್ ಶೆಟ್ಟಿ ‘777 ಚಾರ್ಲಿ’ ಸಿನಿಮಾ ರಿಲೀಸ್ ಬಳಿಕ ಸುದೀಪ್‌ ಸಿನಿಮಾದ ಕೆಲಸಗಳನ್ನು ಶುರು ಮಾಡಲಿದ್ದಾರಂತೆ. ಸ್ಕ್ರಿಪ್ಟ್ ಕೆಲಸಗಳನ್ನು ಅಂತಿಮಗೊಳಿಸಳಿದ್ದಾರಂತೆ.

ಇನ್ನು ಈ ಹಿಂದೆ ಸುದೀಪ್‌ಗೆ ಸಿನಿಮಾ ಮಾಡುವ ಬಗ್ಗೆ ರಕ್ಷಿತ್ ಶೆಟ್ಟಿ ಮಾತನಾಡಿದ್ದರು. ‘777 ಚಾರ್ಲಿ’ ಬಿಡುಗಡೆಯ ನಂತರ, ‘ಸಪ್ತಸಾಗರದಾಚೆ ಎಲ್ಲೊ’ ಸಿನಿಮಾ ಇದೆ. ಅದರ ನಂತರ ರಿಚ್ಚಿ ಸಿನಿಮಾ ಶುರುವಾಗಲಿದೆ. ಆ ನಂತರ ‘ಪುಣ್ಯಕೋಟಿ’ ಸಿನಿಮಾ ಪ್ರಾರಂಭವಾಗಲಿದೆ. ಸುದೀಪ್‌ ಅವರಿಗಾಗಿ ಕತೆ ತಯಾರು ಮಾಡುತ್ತಿದ್ದೇನೆ. ನನ್ನ ಕೆಲಸಗಳು ಪೂರ್ಣಗೊಂಡ ಬಳಿಕ ಸುದೀಪ್ ಜೊತೆ ಸಿನಿಮಾ ಪ್ರಾರಂಭಿಸುತ್ತೇನೆ ಎಂದಿದ್ದಾರೆ.

ರಕ್ಷಿತ್ ಶೆಟ್ಟಿ ನಿರ್ದೇಶನದಲ್ಲಿ ‘ಥಗ್ಸ್ ಆಫ್ ಮಾಲ್ಗುಡಿ’ ಹೆಸರಿನ ಸಿನಿಮಾದಲ್ಲಿ ಸುದೀಪ್ ನಟಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಸಿನಿಮಾ ಈಗ ಸುದೀಪ್ ಅವರಿಗೆ ರಕ್ಷಿತ್ ಶೆಟ್ಟ ಮಾಡಲು ಹೊರಟಿರುವು ‘ಥಗ್ಸ್ ಆಫ್ ಮಾಲ್ಗುಡಿ’ ಕಥೆಯಾ ಅಥವಾ ಬೇರೆ ಕಥೆಯ ಎನ್ನುವುದನ್ನು ಅವರೇ ಸ್ಪಷ್ಟ ಪಡಿಸಬೇಕು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೆಣಸಿನ ಕಾಯಿ ಕತ್ತರಿಸಿ ಕೈಗಳು ಉರಿಯುತ್ತಿದ್ದರೆ ಹೀಗೆ ಮಾಡಿ.!

Sat May 14 , 2022
  ಅಡುಗೆ ಮಾಡುವಾಗ ಖಾರಕ್ಕಾಗಿ ಮೆಣಸಿನಕಾಯಿಯನ್ನು ಬಳಸುತ್ತೇವೆ. ಆದರೆ ಇದು ತುಂಬಾ ಖಾರವಿರುವುದರಿಂದ ಇದನ್ನು ಕತ್ತರಿಸಿದಾಗ ಕೈಗಳು ಉರಿಯುತ್ತದೆ. ಆಗ ಅದೇ ಕೈಗಳಿಂದ ಮೂಗು, ಬಾಯಿ, ಕಣ್ಣುಗಳನ್ನು ಮುಟ್ಟಿದರೆ ಉರಿಬರುತ್ತದೆ. ಹಾಗಾಗಿ ಈ ಉರಿಯನ್ನು ಕಡಿಮೆ ಮಾಡಲು ಈ ಟಿಪ್ಸ್ ಫಾಲೋ ಮಾಡಿ. *ಅಲೋವೆರಾ ಜೆಲ್ ಬಳಕೆ : ಇದರಿಂದ ಮೆಣಸಿನಕಾಯಿ ಉರಿಯನ್ನು ಕಡಿಮೆ ಮಾಡಿಕೊಳ್ಳಬಹುದು. ಇದನ್ನು ಕೈಗೆ ಹಚ್ಚಿ 2 ನಿಮಿಷಗಳ ಕಾಲ ಮಸಾಜ್ ಮಾಡಿ. ಇದರಿಂದ ಕೈಗಳಲ್ಲಿ […]

Advertisement

Wordpress Social Share Plugin powered by Ultimatelysocial