ಮೆಣಸಿನ ಕಾಯಿ ಕತ್ತರಿಸಿ ಕೈಗಳು ಉರಿಯುತ್ತಿದ್ದರೆ ಹೀಗೆ ಮಾಡಿ.!

 

ಅಡುಗೆ ಮಾಡುವಾಗ ಖಾರಕ್ಕಾಗಿ ಮೆಣಸಿನಕಾಯಿಯನ್ನು ಬಳಸುತ್ತೇವೆ.

ಆದರೆ ಇದು ತುಂಬಾ ಖಾರವಿರುವುದರಿಂದ ಇದನ್ನು ಕತ್ತರಿಸಿದಾಗ ಕೈಗಳು ಉರಿಯುತ್ತದೆ. ಆಗ ಅದೇ ಕೈಗಳಿಂದ ಮೂಗು, ಬಾಯಿ, ಕಣ್ಣುಗಳನ್ನು ಮುಟ್ಟಿದರೆ ಉರಿಬರುತ್ತದೆ. ಹಾಗಾಗಿ ಈ ಉರಿಯನ್ನು ಕಡಿಮೆ ಮಾಡಲು ಈ ಟಿಪ್ಸ್ ಫಾಲೋ ಮಾಡಿ.

*ಅಲೋವೆರಾ ಜೆಲ್ ಬಳಕೆ : ಇದರಿಂದ ಮೆಣಸಿನಕಾಯಿ ಉರಿಯನ್ನು ಕಡಿಮೆ ಮಾಡಿಕೊಳ್ಳಬಹುದು. ಇದನ್ನು ಕೈಗೆ ಹಚ್ಚಿ 2 ನಿಮಿಷಗಳ ಕಾಲ ಮಸಾಜ್ ಮಾಡಿ. ಇದರಿಂದ ಕೈಗಳಲ್ಲಿ ಕಂಡುಬಂದ ಸುಡುವ ವೇದನೆ ಕಡಿಮೆಯಾಗುತ್ತದೆ.

*ಮೊಸರು , ಬೆಣ್ಣೆ ಅಥವಾ ಹಾಲಿನ ಬಳಕೆ : ಮೆಣಸಿನ ಕಾಯಿ ಕತ್ತರಿಸಿ ಕೈಯಲ್ಲಿ ಸುಡುವ ವೇದನೆ ಕಾಡಿದರೆ ನಿಮ್ಮ ಕೈಗಳನ್ನು ಮೊಸರಿನಿಂದ ಅಥವಾ ಹಾಲಿನಿಂದ ಅಥವಾ ಬೆಣ್ಣೆಯಿಂದ ಮಸಾಜ್ ಮಾಡಿ. ಬಳಿಕ ನೀರಿನಿಂದ ವಾಶ್ ಮಾಡಿ.

*ಜೇನುತುಪ್ಪ ಬಳಕೆ : ಮೆಣಸಿನಕಾಯಿಯಿಂದ ಕೈಗಳು ಸುಡುತ್ತಿದ್ದರೆ ಜೇನುತುಪ್ಪವನ್ನು ಹಚ್ಚಿ. ಇದು ಉರಿಯನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿದೆ. ಬಳಿಕ ನೀರಿನಿಂದ ಕೈಗಳನ್ನು ತೊಳೆಯಿರಿ.

* ಮಂಜುಗಡ್ಡೆ ಬಳಕೆ : ಮೆಣಸಿನಕಾಯಿ ಕತ್ತರಿಸಿ ಕೈಗಳು ಉರಿಯುತ್ತಿದ್ದರೆ ಕೈಗಳಿಗೆ ಐಸ್ ಕ್ಯೂಬ್ ನಿಂದ ಮಸಾಜ್ ಮಾಡಿ. ಇದರಿಂದ ಉರಿ ತಕ್ಷಣ ಕಡಿಮೆಯಾಗುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮದುವೆ ಡ್ರೆಸ್​ನಲ್ಲಿ ಬಂದ ತನ್ನ ವಧುವನ್ನು ನೋಡಿ ವರ ಫುಲ್ ಪ್ಲ್ಯಾಟ್!

Sat May 14 , 2022
  ಮದುವೆ ಸೀಸನ್ (Marriage Function) ಎಲ್ಲೆಡೆ ಪ್ರಾರಂಭವಾಗಿದೆ. ಹೆಣ್ಣು-ಗಂಡು (Female and male) ಮದುವೆ ಎಂಬ ಪವಿತ್ರ ಬಂಧನದಲ್ಲಿ (Holy bondage) ಬಂಧಿಯಾಗುವ ಅಮೂಲ್ಯ ಕ್ಷಣ ಇದು. ಮದುವೆ ಜೀವನದಲ್ಲಿ ಒಂದೇ ಬಾರಿ ನಡೆಯುವ ಸುಂದರ ಘಳಿಗೆ (Movement). ಕೆಲವರು ಸಂದರ್ಭದಲ್ಲಿ ಇದು ಒಂದಕ್ಕಿಂತ ಹೆಚ್ಚು ಬಾರಿ ನಡೆಯಬಹುದು ಅದು ಬೇರೆ ವಿಚಾರ ಬಿಡಿ. ಮದುವೆ ಎಲ್ಲರ ಜೀವನದ ಕನಸು (Dream of life). ನಾನು ಅಂದಿನ ದಿನ […]

Advertisement

Wordpress Social Share Plugin powered by Ultimatelysocial