ಚಿನ್ನದಂಗಡಿಗೆ ಕಳ್ಳತನಕ್ಕೆಂದು ಬಂದವರು ಬರಿಗೈಯ್ಯಲ್ಲಿ ವಾಪಾಸ್;

ಳ್ಳತನಕ್ಕೆಂದು ಆಭರಣ ಅಂಗಡಿಗೆ ಕನ್ನ ಹಾಕಿದವ್ರು ಏನೂ ಸಿಗದ ನಂತರ ಅಂಗಡಿ ಮಾಲೀಕರಿಗೆ ಸಾರಿ ಎಂದು ಟಿಪ್ಪಣಿ ಬರೆದಿಟ್ಟು ಹೋದ‌ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಮೀರತ್‌ನಿಂದ ವರದಿಯಾದ ವಿಲಕ್ಷಣ ಘಟನೆಯೊಂದರಲ್ಲಿ, ಕಳ್ಳರ ಗುಂಪೊಂದು ಆಭರಣ ಅಂಗಡಿಯಲ್ಲಿ ಕಳ್ಳತನ ಮಾಡಲು 15 ಅಡಿ ಸುರಂಗವನ್ನು ಅಗೆದಿದೆ.

ಆದರೆ ಅವರ ಪ್ರಯತ್ನ ವಿಫಲವಾದ ನಂತರ ಅವರು ಅಂಗಡಿ ಮಾಲೀಕರಿಗೆ ‘ಕ್ಷಮಿಸಿ’ ಎಂದು ಬರೆದ ಟಿಪ್ಪಣಿಯನ್ನಿಟ್ಟು ಹೋಗಿದ್ದರು. ಮರುದಿನ ಅಂಗಡಿ ಮಾಲೀಕರು ತಮ್ಮ ಅಂಗಡಿಯ ಶೆಟರ್‌ಗಳನ್ನು ತೆರೆದಾಗ ಕೃತ್ಯ ಬಯಲಾಗಿದೆ.

ಮೊಖಂಪುರ ನಿವಾಸಿಯಾದ ದೀಪಕ್ ಲೋಧಿ ಮೀರತ್‌ನಲ್ಲಿ ದೀಪಕ್ ಜ್ಯುವೆಲರ್ಸ್ ಹೆಸರಿನ ಅಂಗಡಿಯನ್ನು ಹೊಂದಿದ್ದಾರೆ. ಗುರುವಾರ ಅಂಗಡಿ ತೆರೆದಾಗ ನೆಲದಲ್ಲಿ ಆಳವಾದ ಗುಂಡಿ ಬಿದ್ದಿರುವುದು ಕಂಡು ಬಂದಿದೆ. ಅಂಗಡಿಯ ಸಮೀಪವಿರುವ ಚರಂಡಿಯಿಂದ ಕಳ್ಳರು ಸುರಂಗ ಕೊರೆದಿದ್ದ ಬಗ್ಗೆ ನಂತರ ಅವರಿಗೆ ಗೊತ್ತಾಗಿದೆ. ಕಳ್ಳತನ ಯತ್ನದ ಬಗ್ಗೆ ತಕ್ಷಣ ಸ್ಥಳೀಯ ಪೊಲೀಸರಿಗೆ ತಿಳಿಸಿದ್ದು, ಅವರು ಸ್ಥಳಕ್ಕೆ ಧಾವಿಸಿದ್ರು. ಕಳ್ಳರ ಗ್ಯಾಂಗ್ ಅಂಗಡಿಯಲ್ಲಿ 5,000 ರೂಪಾಯಿ ನಗದು ಮತ್ತು 45,000 ರೂಪಾಯಿ ಮೌಲ್ಯದ ಆರ್ಟಿಫಿಷಿಯಲ್ ಆಭರಣಗಳನ್ನು ಕದ್ದು ಸುರಂಗದಲ್ಲಿ ತೆವಳಿಕೊಂಡು ಹೋಗಿದೆ.

ಕಳ್ಳತನದ ಯತ್ನ ವಿಫಲವಾದ ನಂತರ ಕಳ್ಳರು “ನಾವು ಚುನ್ನು-ಮುನ್ನು ಗ್ಯಾಂಗ್‌ಗೆ ಸೇರಿದವರು, ಕ್ಷಮಿಸಿ ನಮಗೆ ದರೋಡೆಯನ್ನು ಯಶಸ್ವಿಯಾಗಿ ನಡೆಸಲು ಸಾಧ್ಯವಾಗಲಿಲ್ಲ. ನಾವು ದರೋಡೆ ಪ್ರಯತ್ನದಿಂದ ಸ್ವಲ್ಪ ಖ್ಯಾತಿಯನ್ನು ಗಳಿಸಲು ಬಯಸಿದ್ದೇವೆ. ನಿಮ್ಮ ಯಾವುದೇ ವಸ್ತುಗಳನ್ನು ನಾವು ತೆಗೆದುಕೊಳ್ಳುತ್ತಿಲ್ಲ.” ಅವರು ಅಂಗಡಿಯ ಕೌಂಟರ್‌ನಲ್ಲಿ ಟಿಪ್ಪಣಿ ಬರೆದಿಟ್ಟು ಹೋಗಿದ್ದರು.

ಅಂಗಡಿ ಮಾಲೀಕರ ಪ್ರಕಾರ, ಇದು ಅವರ ಅಂಗಡಿಯಲ್ಲಿ ಕಳ್ಳತನದ ನಾಲ್ಕನೇ ಯತ್ನವಾಗಿದೆ. ಹೀಗಾಗಿ ಆರೋಪಿಗಳ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಈ ಸಂಬಂಧ ಪೊಲೀಸ್ ತನಿಖೆ ನಡೆಯುತ್ತಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮುಂಬೈನಲ್ಲಿ ಬೃಹತ್‌ ವೇಶ್ಯಾವಾಟಿಕೆ ದಂಧೆ ಪತ್ತೆ;

Fri Feb 3 , 2023
ಮುಂಬೈನಲ್ಲಿ ಸೆಕ್ಸ್ ರಾಕೆಟ್ ಬೇಧಿಸಿರುವ ಪೊಲೀಸರು ಕೆಲ ಮಹಿಳೆಯರನ್ನ ರಕ್ಷಿಸಿದ್ದಾರೆ. ಮೀರಾ ಭಯಂದರ್ ವಸಾಯಿ ವಿರಾರ್ (ಎಂಬಿವಿವಿ) ಪೊಲೀಸ್‌ನ ಮಾನವ ಕಳ್ಳಸಾಗಣೆ ವಿರೋಧಿ ಘಟಕ (ಎಎಚ್‌ಟಿಯು) ಕಾಶಿಮಿರಾದಲ್ಲಿ ಲೈಂಗಿಕ ದಂಧೆಯನ್ನು ಭೇದಿಸಿ ಮಧ್ಯವಯಸ್ಕ ಮಹಿಳೆಯನ್ನು ಬಂಧಿಸಿದೆ. ಇಬ್ಬರು ಯುವತಿಯರನ್ನ ಈ ವೇಳೆ ರಕ್ಷಿಸಲಾಗಿದೆ. ಅವಳಿ ನಗರದಲ್ಲಿ ಮಹಿಳೆಯರ ಅನೈತಿಕ ಕಳ್ಳಸಾಗಾಣಿಕೆ ಬಗ್ಗೆ ಸುಳಿವಿನ ಮೇರೆಗೆ ಪೊಲೀಸ್ ಇನ್ಸ್ ಪೆಕ್ಟರ್ ಸಮೀರ್ ಅಹಿರಾರಾವ್ ಅವರ ಮೇಲ್ವಿಚಾರಣೆಯಲ್ಲಿ ಎಎಸ್‌ಐ-ಉಮೇಶ್ ಪಾಟೀಲ್ ನೇತೃತ್ವದ ತಂಡವು […]

Advertisement

Wordpress Social Share Plugin powered by Ultimatelysocial