ನಾಳೆ ಫೈನಲ್ ಆಗಲಿದೆ ಪರಿಷತ್ ಚುನಾವಣೆ ಪಟ್ಟಿ

ರಾಜ್ಯಸಭೆ ಚುನಾವಣೆಗೆ ಬಿಜೆಪಿ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡಿದ ಬೆನ್ನಲ್ಲೇ ಬಿಜೆಪಿ ಕಚೇರಿ ಬಾಗಿಲು ತಟ್ಟುವವರ ಸಂಖ್ಯೆ ಹೆಚ್ಚಾಗಿದೆ. ಜೂ.29ರಂದು ನಡೆಯುವ ಪರಿಷತ್ ಚುನಾವಣೆಗೆ ಆಕಾಂಕ್ಷಿಗಳು ಮುಗಿಬೀಳುತ್ತಿದ್ದಾರೆ. ವಿಧಾನಸಭೆಯಿಂದ ವಿಧಾನಪರಿಷತ್ ಗೆ ನಡೆಯಲಿರುವ 7 ಸ್ಥಾನಗಳ ಚುನಾವಣೆಗೆ ಆಡಳಿತಾರೂಢ ಬಿಜೆಪಿ ತನ್ನ ಪಾಲಿನ ಅಭ್ಯರ್ಥಿಗಳ ಪಟ್ಟಿಯನ್ನು ನಾಳೆ ಅಂತಿಮಗೊಳಿಸಲಿದೆ. ನಾಳೆ ಪಕ್ಷದ ಪ್ರಮುಖರ ಕೋರ್ ಕಮಿಟಿ ಸಭೆ ನಡೆಯುವ ಸಾಧ್ಯತೆ ಇದ್ದು, ಬಹುತೇಕ ಅಭ್ಯರ್ಥಿಗಳ ಪಟ್ಟಿ, ಅಂತಿಮಗೊಳಿಸುವ ಸಂಭವವಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಒಂದು ವೇಳೆ ನಾಳೆ ಸಭೆ ನಡೆಯದಿದ್ದರೆ ಮಂಗಳವಾರ ಇಲ್ಲವೆ ಬುಧವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸೇರಿದಂತೆ ಕೋರ್ ಕಮಿಟಿ ಸಭೆ ನಡೆಸಿ ನಂತರ ನಾಲ್ಕು ಸ್ಥಾನಗಳ ಅಭ್ಯರ್ಥಿ ಹೆಸರುಗಳನ್ನು ವರಿಷ್ಠರ ಅನುಮೋದನೆಗೆ ಕಳುಹಿಸಿಕೊಡಲಿದ್ದಾರೆ.

 

Please follow and like us:

Leave a Reply

Your email address will not be published. Required fields are marked *

Next Post

24 ಗಂಟೆಯಲ್ಲಿ 11,502 ಮಂದಿಗೆ ಸೋಂಕು

Mon Jun 15 , 2020
ದೇಶದಲ್ಲಿ ಕೊರೊನಾ ವೈರಸ್ ದಿನೆದಿನೆ ರಣಕೇಕೆ ಹಾಕುತ್ತಿದೆ.ಆತಂಕ ಹೆಚ್ಚುತ್ತಿದೆ 24 ಗಂಟೆಯ ಅವಧಿಯಲ್ಲಿ 11,502 ಮಂದಿಗೆ ಸೋಂಕು ವಕ್ಕರಿಸಿದೆ.ಕೊರೊನಾಗೆ ಒಂದೇ ದಿನ ದೇಶದಲ್ಲಿ ಕಿಲ್ಲರ್ ಕೊರೊನಾಗೆ 325 ಮಂದಿ ಮೃತಪಟ್ಟಿದ್ದಾರೆ,ಒಟ್ಟು ಸೋಂಕಿತರ ಸಂಖ್ಯೆ 3,32,424 ಕ್ಕೆ ಏರಿಕೆಯಾಗಿದೆ ಈ ಪೈಕಿ 1,53,106 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 1,69,798ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು ಕಿಲ್ಲರ್ ಕೊರೊನಾಗೆ ದೇಶದಲ್ಲಿ ಬಲಿಯಾದವರ ಸಂಖ್ಯೆ 9,520ಕ್ಕೆ ಏರಿಕೆಯಾಗಿದೆ. ವಿಶ್ವದಲ್ಲಿ […]

Advertisement

Wordpress Social Share Plugin powered by Ultimatelysocial