24 ಗಂಟೆಯಲ್ಲಿ 11,502 ಮಂದಿಗೆ ಸೋಂಕು

ದೇಶದಲ್ಲಿ ಕೊರೊನಾ ವೈರಸ್ ದಿನೆದಿನೆ ರಣಕೇಕೆ ಹಾಕುತ್ತಿದೆ.ಆತಂಕ ಹೆಚ್ಚುತ್ತಿದೆ 24 ಗಂಟೆಯ ಅವಧಿಯಲ್ಲಿ 11,502 ಮಂದಿಗೆ ಸೋಂಕು ವಕ್ಕರಿಸಿದೆ.ಕೊರೊನಾಗೆ ಒಂದೇ ದಿನ ದೇಶದಲ್ಲಿ ಕಿಲ್ಲರ್ ಕೊರೊನಾಗೆ 325 ಮಂದಿ ಮೃತಪಟ್ಟಿದ್ದಾರೆ,ಒಟ್ಟು ಸೋಂಕಿತರ ಸಂಖ್ಯೆ 3,32,424 ಕ್ಕೆ ಏರಿಕೆಯಾಗಿದೆ ಈ ಪೈಕಿ 1,53,106 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 1,69,798ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು ಕಿಲ್ಲರ್ ಕೊರೊನಾಗೆ ದೇಶದಲ್ಲಿ ಬಲಿಯಾದವರ ಸಂಖ್ಯೆ 9,520ಕ್ಕೆ ಏರಿಕೆಯಾಗಿದೆ. ವಿಶ್ವದಲ್ಲಿ ಕೊರೊನಾಗೆ ಅತಿಹೆಚ್ಚು ಬಲಿಯಾದವರ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ 9 ನೇ ಸ್ಥಾನ ಈ ಕುರಿತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ

 

 

 

Please follow and like us:

Next Post

ಸಾಮಾಜಿಕ ಅಂತರ ಮರೆತ PSI

Mon Jun 15 , 2020
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ನೆಲೋಗಿ ಪೊಲೀಸ್ ಠಾಣೆ ಪಿಎಸ್‌ಐ ಮಲ್ಲಣ್ಣ ಯಲಗೋಡ ಅವರ ಜನ್ಮದಿನದ ಹುಟ್ಟು ಹಬ್ಬವನ್ನು ಜೂನ್13ರಂದು ಅವರ ಅಭಿಮಾನಿಗಳು ಅವರಿಗೆ ಹಾಲಿನ ಅಭಿಷೇಕ ಮಾಡಿದ್ದಾರೆ ಹಾಗೂ ಠಾಣಾ ವ್ಯಾಪ್ತಿಯ ಹಲವೆಡೆ ಸಂಭ್ರಮ ಆಚರಿಸಿದ್ದಾರೆ ಕೊರೊನಾ ವೈರಸ್ ‌ಜಿಲ್ಲೆಯಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ಸಂದರ್ಭದಲ್ಲಿ ಈ ವೇಳೆ ದೈಹಿಕ ಅಂತರ ಮರೆತು, ಮಾಸ್ಕ್ ಇಲ್ಲದೆ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿರುವ ಅಭಿಮಾನಿಗಳು ಮಲ್ಲಣ್ಣ ಯಲಗೋಡ ಅವರಿಗೆ ಹಾಲಿನ ಅಭಿಷೇಕ ಮಾಡಿದ್ದಾರೆ. […]

Advertisement

Wordpress Social Share Plugin powered by Ultimatelysocial