ನಾಳೆ ಮಧ್ಯಪ್ರದೇಶ, ಛತ್ತೀಸ್‌ಗಢಕ್ಕೆ ಪ್ರಧಾನಿ ಭೇಟಿ: ವಿವಿಧ ಯೋಜನೆಗಳಿಗೆ ಉದ್ಘಾಟನೆ, ಶಂಕುಸ್ಥಾಪನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢಕ್ಕೆ ಭೇಟಿ ನೀಡಲಿದ್ದು, ಮಧ್ಯಪ್ರದೇಶದಲ್ಲಿ 50 ಸಾವಿರದ 700 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಛತ್ತೀಸ್‌ಗಢದಲ್ಲಿ ಪ್ರಧಾನಿ ಮೋದಿ ಅವರು ಸುಮಾರು ಆರು ಸಾವಿರದ 350 ಕೋಟಿ ರೂಪಾಯಿ ಮೌಲ್ಯದ ಪ್ರಮುಖ ರೈಲು ಕ್ಷೇತ್ರದ ಯೋಜನೆಗಳನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ.

ಇದೇ ವೇಳೆ ಛತ್ತೀಸ್‌ಗಢದ ಒಂಬತ್ತು ಜಿಲ್ಲೆಗಳಲ್ಲಿ 50 ಹಾಸಿಗೆಗಳ ಕ್ರಿಟಿಕಲ್ ಕೇರ್ ಬ್ಲಾಕ್‌ಗಳ ಶಂಕುಸ್ಥಾಪನೆಯನ್ನು ನೆರವೇರಿಸಲಿದ್ದಾರೆ. ಈ ಕ್ರಿಟಿಕಲ್ ಕೇರ್ ಬ್ಲಾಕ್‌ಗಳನ್ನು ಪ್ರಧಾನ ಮಂತ್ರಿ – ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಮಿಷನ್ ಅಡಿಯಲ್ಲಿ ನಿರ್ಮಿಸಲಾಗುವುದು.

Please follow and like us:

tmadmin

Leave a Reply

Your email address will not be published. Required fields are marked *

Next Post

Nipah Virus: ಕೇರಳದಲ್ಲಿ 'ನಿಫಾ ವೈರಸ್' ಅಬ್ಬರ: ಇರಲಿ ಈ ಎಚ್ಚರ

Wed Sep 13 , 2023
ಕೇರಳ: ರಾಜ್ಯದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ವೈರಲ್ ಕಾಯಿಲೆಯಿಂದ ಇಬ್ಬರು ಸಾವನ್ನಪ್ಪಿರುವುದು ದೃಢಪಟ್ಟ ನಂತರ ಕೇರಳದಲ್ಲಿ ಮತ್ತೆ ನಿಪಾಹ್ ಸೋಂಕಿನ ಪ್ರಕರಣಗಳು ಅಬ್ಬರಿಸುತ್ತಿವೆ. 9 ಮತ್ತು 24 ವರ್ಷದ ಇನ್ನಿಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಆಗಸ್ಟ್ 30 ರಂದು ನಿಧನರಾದ ಮೊದಲ ಬಲಿಪಶುವಿನ ಕುಟುಂಬ ಸದಸ್ಯರು ಇವರಾಗಿದ್ದಾರೆ. ಹಾಗಾದ್ರೇ ನೀಫಾ ವೈರಸ್ ಹರಡೋದು ಹೇಗೆ.? ಏನೆಲ್ಲಾ ಎಚ್ಚರಿಕೆ ವಹಿಸಬೇಕು ಅಂತ ಮುಂದೆ ಓದಿ. ನಿಪಾಹ್ ವೈರಸ್ ಕೋವಿಡ್ -19 ವೈರಸ್ನಷ್ಟು ವೇಗವಾಗಿ […]

Advertisement

Wordpress Social Share Plugin powered by Ultimatelysocial