ಪಾಕಿಸ್ಥಾನದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಸರಕಾರಿ ಉದ್ಯೋಗಿಗಳಿಗೆ ವೇತನ ನೀಡಲು ಸಹ ಹಣವಿಲ್ಲ

ಸ್ಲಾಮಾಬಾದ್‌: ಪಾಕಿಸ್ಥಾನದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಸರಕಾರಿ ಉದ್ಯೋಗಿಗಳಿಗೆ ವೇತನ ನೀಡಲು ಸಹ ಹಣವಿಲ್ಲದಂತಾಗಿದೆ. ಸರಕಾರಿ ನೌಕರರ ವೇತನ ಸೇರಿದಂತೆ ಎಲ್ಲ ಬಿಲ್‌ಗ‌ಳನ್ನು ತಡೆಹಿಡಿಯುವಂತೆ ಪ್ರಧಾನ ಲೆಕ್ಕಾಧಿಕಾರಿಗಳಿಗೆ ಪಾಕ್‌ ಸರಕಾರ ಸೂಚಿಸಿದೆ.

ಇನ್ನೊಂದೆಡೆ ಮುಂದಿನ ಆದೇಶದವರೆಗೆ ಸಚಿವಾಲಯಗಳು, ಇಲಾಖೆ ಗಳು ಸಹಿತ ಎಲ್ಲ ವಿಭಾಗಗಳ ಬಿಲ್‌ಗ‌ಳನ್ನು ಅನು ಮೋದಿಸದಂತೆ ಪಾಕಿಸ್ಥಾನ ಕಂದಾಯ ಇಲಾಖೆಯ ಪ್ರಧಾನ ಲೆಕ್ಕಾಧಿಕಾರಿಗಳಿಗೆ ಪಾಕ್‌ ಹಣಕಾಸು ಮತ್ತು ಕಂದಾಯ ಸಚಿವಾಲಯ ಸೂಚನೆ ನೀಡಿದೆ.

ಕೆಲವು ವಾರಗಳ ಹಿಂದೆ ಪಾಕಿಸ್ಥಾನದ ವಿದೇಶಿ ವಿನಿಮಯ ಮೀಸಲು 2.9 ಬಿಲಿಯನ್‌ ಡಾಲರ್‌ಗೆ ಕುಸಿದಿತ್ತು. ಪ್ರಸ್ತುತ ಅದು 4 ಬಿಲಿಯನ್‌ ಡಾಲರ್‌ಗೆ ಏರಿಕೆಯಾಗಿದೆ. ಆಪ್ತ ರಾಷ್ಟ್ರಗಳು ಹಾಗೂ ಐಎಂಎಫ್ ನೆರವಿನ ನಿರೀಕ್ಷೆಯಲ್ಲಿ ಪಾಕ್‌ ಇದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಪುಲ್ವಾಮಾ ದಾಳಿಯಂತಹ ಮತ್ತೊಂದು ದಾಳಿನಡೆಸಲು ಉಗ್ರರು ಸಂಚು ರೂಪಿಸಿದ್ದರು;

Sun Feb 26 , 2023
ನವದೆಹಲಿ: ಫೆಬ್ರವರಿ 14, 2019 ರ ಪುಲ್ವಾಮಾ ದಾಳಿಯಲ್ಲಿ 40 ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದರು. ಈ ದಾಳಿ ನಡೆದು ಸರಿಯಾಗಿ 10 ದಿನಗಳಲ್ಲಿ ಮತ್ತೊಂದು ದಾಳಿ ನಡೆಸಲು ಭಯೋತ್ಪಾದಕರು ಸಂಚು ರೂಪಿಸಿದ್ದರು ಎಂದು ನಿವೃತ್ತ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಕೆಜೆಎಸ್ ಧಿಲ್ಲೋನ್ ಅವರು ಬರೆದಿರುವ ‘ಕಿತ್ನೆ ಘಾಜಿ ಆಯೆ, ಕಿತ್ನೆ ಘಾಜಿ ಗಯೇ’ ಎಂಬ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.ಭಾರತೀಯ ಭದ್ರತಾ ಪಡೆಗಳು ಇಬ್ಬರು ಪಾಕಿಸ್ತಾನಿಗಳೂ ಸೇರಿದಂತೆ ಮೂವರು ಭಯೋತ್ಪಾದಕರನ್ನು ಹತ್ಯೆ […]

Advertisement

Wordpress Social Share Plugin powered by Ultimatelysocial