ಫೇಸ್‌ಬುಕ್‌ನಿಂದ ಪ್ರೀತಿ-ಪ್ರೇಮ ಪ್ರೀತಿ ಹೆಸರಿನಲ್ಲಿ ಯುವತಿಯ ರೇಪ್ ೨೦೧೧ರಲ್ಲಿ ಫೇಸ್‌ಬುಕ್ ಮುಕಾಂತರ ಪರಿಚಯ

ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದ ವ್ಯಕ್ತಿಯೊಬ್ಬ ಪ್ರೀತಿ-ಪ್ರೇಮ ಎಂದು ಹೇಳಿಕೊಂಡು ೩೧ವರ್ಷದ ಮಹಿಳೆಯನ್ನು ಪಾರ್ಟಿಗೆಂದು ಕರೆದೊಯ್ದು ಮದ್ಯ ಕುಡಿಸಿ ಅತ್ಯಾಚಾರ ಎಸಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಬನಶಂಕರಿಯ ಶ್ರೀನಿವಾಸ ನಗರದ ಮಹಿಳೆ ಕೊಟ್ಟ ದೂರಿನ ಮೇರೆಗೆ ವಾಸಿಂ ಪಾಷಾ ಎಂಬಾತನ ವಿರುದ್ಧ ಕೊಡಿಗೇಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸಂತ್ರಸ್ತೆಗೆ ೨೦೧೧ರಲ್ಲಿ ಫೇಸ್‌ಬುಕ್‌ನಲ್ಲಿ ವಾಸಿಂ ಪರಿಚಯವಾಗಿದ್ದ. ಪ್ರತಿದಿನ ಚಾಟಿಂಗ್ ಮಾಡುತ್ತಿದ್ದರು. ಇಬ್ಬರ ನಡುವಿನ ಸ್ನೇಹ ಪ್ರೇತಿಗೆ ತಿರುಗಿತ್ತು.

ಸ್ನೇಹಿತರ ಮನೆಯಲ್ಲಿ ಆಯೋಜಿಸಿದ್ದ ಪಾರ್ಟಿಗೆ ಕರೆದೊಯ್ದು, ಒತ್ತಾಯಪೂರ್ವಕವಾಗಿ ಮದ್ಯ ಕುಡಿಸಿ, ಅರೆ ಪ್ರಜ್ಞಾವಸ್ಥೆಯಲ್ಲಿ ಇದ್ದಾಗ ಅತ್ಯಾಚಾರ ಎಸಗಿದ್ದಾನೆ. ಪ್ರಶ್ನಿಸಿದಾಗ ಮದುವೆಯಾಗುವುದಾಗಿ ಭರವಸೆ ನೀಡಿದ. ಇದಾದ ಬಳಿಕವೂ ಲಾಡ್ಜ್ಗಳಿಗೆ ಕರೆದೊಯ್ದು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಖರ್ಚಿಗೆ ಹಣವಿಲ್ಲವೆಂದು ೩೦ಸಾವಿರ ರೂ. ಪಡೆದಿದ್ದ. ಇತ್ತೀಚೆಗೆ ಮದುವೆ ವಿಷಯ ಪ್ರಸ್ತಾಪಿಸಿದ್ದಕ್ಕೆ ಹಲ್ಲೆ ನಡೆಸಿದ್ದಲ್ಲದೆ ಧರ್ಮ ಬಿಟ್ಟು ಮದುವೆಯಾಗುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದಾನೆ ಎಂದು ದೂರಿನಲ್ಲಿ ಸಂತ್ರಸ್ತೆ ವಿವರಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಬಿಹಾರದಲ್ಲಿ ಭೀಕರ ಪ್ರವಾಹ

Fri Jul 31 , 2020
ಬಿಹಾರದಲ್ಲಿ ಪ್ರವಾಹದಿಂದ ನದಿಗಳು ಅಪಾಯದ ಮಟ್ಟವನ್ನ ಮೀರಿ ಹರಿಯುತ್ತಿದ್ದು ಸುಮಾರು ೪೦ ಲಕ್ಷಕ್ಕೂ ಹೆಚ್ಚಿನ ಜನರು ಸಂಕಷ್ಟಕ್ಕೆ ಈಡಾಗಿದ್ದಾರೆ. ಒಂದೆಡೆ ಜನ ಪ್ರವಾಹದಿಂದ ಸಂಕಷ್ಟಕ್ಕೊಳಗಾಗಿದ್ದರೆ, ಇನ್ನೊಂದೆಡೆ ಕೊರೋನಾ ಸಮಸ್ಯೆ ಕೂಡ ಹೆಚ್ಚಾಗಿದೆ. ಇದುವರೆಗೂ ಪ್ರವಾಹದಿಂದ ಸುರಕ್ಷಿತವಾಗಿದ್ದ ಮಧುಬನಿ ಮತ್ತು ಸಿವಾನ್ ಜಿಲ್ಲೆಗಳ ೭೧ ಪಂಚಾಯಿತಿಗಳು ಈಗ ವಿಪತ್ತಿಗೆ ತುತ್ತಾಗಿವೆ. ಪ್ರವಾಹ ಪೀಡಿತ ಜಿಲ್ಲೆಗಳ ಸಂಖ್ಯೆ ಈಗ ೧೪ಕ್ಕೆ ಏರಿಕೆಯಾಗಿದೆ. ಜಲ ಪ್ರಳಯದಿಂದ ನಿರಾಶ್ರಿತರಾದವರ ಸಂಖ್ಯೆ ೩೯.೬೩ ಲಕ್ಷಕ್ಕೆ ಏರಿದ್ದು, ಸಾವಿನ […]

Advertisement

Wordpress Social Share Plugin powered by Ultimatelysocial