ಬಡ್ಡಿ ಮನ್ನಾ ಮಾಡಲ್ಲ

ಕೊರೊನಾ ವೈರಸ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಬಡ್ಡಿ ಮನ್ನಾ ಕುರಿತಂತೆ ಮೂರು ದಿನಗಳಲ್ಲಿ ವಿವರವಾದ ಉತ್ತರವನ್ನು ಸಲ್ಲಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿ ಪ್ರಕರಣವನ್ನು ಜೂನ್ 17 ರಂದು ಸುಪ್ರೀಂಕೋರ್ಟ್ ವಿಚಾರಣೆಗೆ ನಿಗದಿಪಡಿಸಿದೆ. ದೇಶಾದ್ಯಾಂತ ಲಾಕ್ ಡೌನ್ ಇದ್ದ ಹಿನ್ನೆಲೆಯಲ್ಲಿ ಜನರಿಗೆ ಸಾಲ ಮತ್ತು ಇನ್ನತರೆ ಕಂತು ಕಟ್ಟಲು ಸಂಕಷ್ಟದಲ್ಲಿದ್ದಾಗ ಸಾಲಗಳ ಇಎಂಐ ಕಟ್ಟಲು ಆರ್ ಬಿಐ 6 ತಿಂಗಳು ಮುಂದೂಡಿಕೆ ಅವಕಾಶವನ್ನು ಕೊಟ್ಟಿತ್ತು, ಈ ಕುರಿತು ಇದಕ್ಕೆ ಪ್ರತಿಕ್ರಿಯಿಸಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮರುಪಾವತಿ ನಿಷೇಧದ ಆರು ತಿಂಗಳವರೆಗೆ ಸಾಲಗಳ ಮೇಲಿನ ಬಡ್ಡಿಯನ್ನು ಮನ್ನಾ ಮಾಡಲಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಗೆ ತಿಳಿಸಿದೆ. ಹಾಗೂ ಈ ಆರು ತಿಂಗಳಲ್ಲಿ ಬಡ್ಡಿ ಮನ್ನಾ ಕುರಿತಂತೆ ಎಸ್ ಬಿಐ ಗ್ರಾಹಕರಿಗೊಂದು ಮಹತ್ವದ ಮಾಹಿತಿ ನೀಡಿದ್ದು, 6 ತಿಂಗಳು ಮುಂದೂಡಿದ ಇಎಂಐ ಮೇಲಿನ ಬಡ್ಡಿಯನ್ನು ಮನ್ನಾ ಮಾಡಲಾಗುವುದಿಲ್ಲ ಎಂದು ಎಸ್ ಬಿಐ ಹೇಳಿದೆ.

 

 

 

 

Please follow and like us:

Leave a Reply

Your email address will not be published. Required fields are marked *

Next Post

ಆಗಸ್ಟ್ ೧೫ ನಂತರ ಕೆಟ್ಟ ಪರಿಸ್ಥಿತಿ ಎದುರಾಗಲಿದೆ

Sat Jun 13 , 2020
ಕೆಟ್ಟ ಪರಿಸ್ಥಿತಿಯನ್ನು ಎದುರಿಸಲು ಕರ್ನಾಟಕ ಸಿದ್ಧವಾಗುತ್ತಿದೆ ಎಂದು ಸಚಿವ ಸುಧಾಕರ್ ಹೇಳಿದ್ದಾರೆ. ಬಳ್ಳಾರಿಯಲ್ಲಿ ಮಾತನಾಡಿದ ಅವರು,ಆಗಸ್ಟ್ ತಿಂಗಳಿನಲ್ಲಿ ಕೊರೊನಾ ಪ್ರಕರಣಗಳು ಕರ್ನಾಟಕದಲ್ಲಿ ಮತ್ತಷ್ಟು ಹೆಚ್ಚಾಗಲಿದೆ. ಲಾಕ್‌ಡೌನ್ ಸಡಿಲಿಕೆಯ ನಂತರ ಕೊರೊನಾ ಪ್ರಕರಣಗಳು ಮತ್ತಷ್ಟು ಹೆಚ್ಚಾಗಿವೆ. ಮಾರ್ಚ್, ಏಪ್ರಿಲ್ ತಿಂಗಳಿಗಿAತ ಜೂನ್ ತಿಂಗಳಿನಲ್ಲಿ ಕೊರೊನಾ ಕೇಸ್‌ಗಳು ಜಾಸ್ತಿಯಾಗಿವೆ. ಆದರೆ, ಜೂನ್ ಹಾಗೂ ಜುಲೈನಲ್ಲಿ ಇದೇ ರೀತಿ ಕೇಸ್‌ಗಳು ಮುಂದುವರೆಯಲಿದ್ದು, ಆಗಸ್ಟ್ ೧೫ ನಂತರ ಕೆಟ್ಟ ಪರಿಸ್ಥಿತಿ ಎದುರಾಗಲಿದೆ. ತಜ್ಞರು ಆಗಸ್ಟ್ ೧೫ […]

Advertisement

Wordpress Social Share Plugin powered by Ultimatelysocial