ಬದಲಾಯ್ತು ದೀಪಿಕಾ ಪಡುಕೋಣೆ ಹೆಸರು

ಸಿನಿಮಾರಂಗಕ್ಕೆ ಬರುವ ದೃಷ್ಟಿಯಿಂದ ಅನೇಕ ಕಲಾವಿದರು ಮೂಲ ಹೆಸರನ್ನು ಬದಿಗಿಟ್ಟು, ಹೊಸ ಹೆಸರಿನೊಂದಿಗೆ ಗುರುತಿಸಿಕೊಳ್ಳುತ್ತಾರೆ. ಅದೇ ರೀತಿ ಈಗಾಗಲೇ ಹಾಗೆ ಹೆಸರು ಬದಲಿಸಿಕೊಂಡು ಸಿನಿಮಾ ಇಂಡಸ್ಟ್ರಿಯಲ್ಲಿ ಖ್ಯಾತನಾಮ ಹೆಸರು ಮಾಡಿದ್ದಾರೆ. ಅದೇ ರೀತಿ ಇದೀಗ ನಟಿ ದೀಪಿಕಾ ಪಡುಕೋಣೆ ಹೆಸರಿನ ವಿಚಾರವಾಗಿ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಹಾಗಂತ ಅವರೇನು ತಮ್ಮ ಮೂಲ ಹೆಸರನ್ನೇನು ಬದಲಾಯಿಸಿಕೊಂಡಿಲ್ಲ. ಬದಲಿಗೆ ‘ಕಾಕ್ಟೈಲ್’ ಸಲುವಾಗಿ ಬದಲಾಯಿಸಿಕೊಂಡಿದ್ದಾರೆ. ಹೌದು, ಹೋಮಿ ಅದಜಾನಿಯಾ ನರ‍್ದೇಶನದಲ್ಲಿ ೨೦೧೨ರ ಜುಲೈ೧೩ಕ್ಕೆ ಕಾಕ್ಟೈಲ್ ಸಿನಿಮಾ ಬಿಡುಗಡೆಯಾಗಿತ್ತು. ಆ ಚಿತ್ರವನ್ನು ಇದೀಗ ನೆನಪು ಮಾಡಿಕೊಂಡಿದ್ದಾರೆ. ಕಾಕ್ಟೈಲ್ ಚಿತ್ರದಲ್ಲಿ ವೆರೋನಿಕಾ ಪಾತ್ರದಲ್ಲಿ ದೀಪಿಕಾ ಕಾಣಿಸಿಕೊಂಡಿದ್ದರು. ಅದೇ ಹೆಸರನ್ನು ಸೋಷಿಯಲ್ ಮೀಡಿಯಾ ಟ್ವಿರ‍್ನಲ್ಲಿ ನಮೂದು ಮಾಡಿದ್ದಾರೆ. ಅಷ್ಟೇ ಅಲ್ಲ ಆ ಚಿತ್ರದ ಪೋಸ್ಟರ್ ಅನ್ನೇ ಡಿಸ್ಪ್ಲೇ ಪಿಕ್ಚರ್ ಆಗಿ ಹಾಕಿಕೊಂಡಿದ್ದಾರೆ

Please follow and like us:

Leave a Reply

Your email address will not be published. Required fields are marked *

Next Post

ಮಯೂರ ರಾಘವೇಂದ್ರ ನಿರ್ದೇಶನದ ಕನ್ನಡ ಗೊತ್ತಿಲ್ಲ

Tue Jul 14 , 2020
ಮಯೂರ ರಾಘವೇಂದ್ರ ಚೊಚ್ಚಲ ನರ‍್ದೇಶನದ ‘ಕನ್ನಡ್ ಗೊತ್ತಿಲ್ಲ’ ಎಂಬ ಸಸ್ಪೆನ್ಸ್ ಥ್ರಿಲ್ಲರ್ ಕಳೆದ ರ‍್ಷ ಬಿಡುಗಡೆಯಾಗಿತ್ತು. ಹರಿಪ್ರಿಯಾ ವಿಭಿನ್ನ ಲುಕ್ನಲ್ಲಿ ಕಾಣಿಸಿಕೊಂಡು, ಮುಖ್ಯಭೂಮಿಕೆ ನಿಭಾಯಿಸಿದ್ದರು. ಚಿತ್ರಮಂದಿರದ ಬಳಿಕ ಅಮೆಜಾನ್ ಪ್ರೆöÊಂನಲ್ಲಿಯೂ ಬಿಡುಗಡೆಯಾದ ಈ ಚಿತ್ರದ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯ ಡಬ್ಬಿಂಗ್ ಹಕ್ಕುಗಳು ಇದೀಗ ಮಾರಾಟವಾಗಿದೆ. ಸಂಜಯ್ ಲಾಲ್ವಾನಿ ಪ್ರೊಡಕ್ಷನ್ ಸಂಸ್ಥೆ ಡಬ್ಬಿಂಗ್ ಹಕ್ಕುಗಳನ್ನು ಪಡೆದುಕೊಂಡಿದ್ದು, ಚಿತ್ರ ಮಂದಿರ ಮತ್ತು ಓವರ್ ದಿ ಟಾಪ್ (ಓಟಿಟಿ)ನಲ್ಲಿಯೂ ಬಿಡುಗಡೆ […]

Advertisement

Wordpress Social Share Plugin powered by Ultimatelysocial