ಬಾಗಲಕೋಟೆಯ ಪೊಲೀಸ್ ಇಲಾಖೆಯಲ್ಲಿ ಹೆಚ್ಚಾದ ಕೊರೊನಾ ಪ್ರಕರಣ

ಬಾಗಲಕೋಟೆ  ಜಿಲ್ಲೆಯಲ್ಲಿ  ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿ ಸೇರಿ ಒಟ್ಟು 26 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಅದರಲ್ಲಿ ನಾಲ್ಕು ಜನ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ತಿಳಿಸಿದ್ದಾರೆ.  ಬಾಕಿ ಉಳಿದ 22 ಜನರಲ್ಲಿ 6 ಜನ ಎಸ್ಪಿ ಕಚೇರಿ ಸಿಬ್ಬಂದಿಗಳು, ಇಬ್ಬರು ಬನಹಟ್ಟಿ-ತೇರದಾಳ ಕಚೇರಿಯ ಸಿಬ್ಬಂದಿಗಳು, ಆರು ಗುಳೇದಗುಡ್ಡ ಮತ್ತು ಕೆರೂರು ಸಿಬ್ಬಂದಿಗಳು, ಮೂವರು ಬಾಗಲಕೋಟೆ ಸಿಬ್ಬಂದಿಗಳು, ಓರ್ವ ಡಿಆರ್ ಒ ಸಿಬ್ಬಂದಿ ಹಾಗೂ ನಾಲ್ಕು ಜನ ಇಲ್ಲಕಲ್ ಕಚೇರಿ ಸಿಬ್ಬಂದಿಗಳು ಕೋವಿಡ್-19  ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

 

Please follow and like us:

Leave a Reply

Your email address will not be published. Required fields are marked *

Next Post

ಅಯೋಧ್ಯೆ ರಾಮ ಮಂದಿರ ನಿರ್ಮಾಣ

Sun Jul 19 , 2020
ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆಗೆ ಅನುಮತಿ ಕೋರಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಪತ್ರ ಬರೆದಿದ್ದು, ಹೆಚ್ಚು ಕಡಿಮೆ ಆ.5ರಂದು ಪೂಜೆ ನೆರವೇರಲಿದೆ.ಭೂಮಿ ಪೂಜೆಯ ತಾತ್ಕಾಲಿಕ ದಿನಾಂಕವನ್ನು ಟ್ರಸ್ಟ್ ನಮೂದಿಸಿದ್ದು, ಅಂತಿಮ ನಿರ್ಧಾರವನ್ನು ಪ್ರಧಾನ ಮಂತ್ರಿ ಕಾರ್ಯಾಲಯ ಕೈಗೊಳ್ಳಲಿದೆ.ಶನಿವಾರ ಅಯೋಧ್ಯೆಯ ಸರ್ಕ್ಯುಟ್ ಹೌಸ್ ನಲ್ಲಿ ಟ್ರಸ್ಟ್ ನ ಸಭೆ ನಡೆಸಲಾಗಿತ್ತು.ನಂತರ ಮಾತನಾಡಿದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ಕೊರೋನಾ ಸೋಂಕಿನ ಕಾರಣ […]

Advertisement

Wordpress Social Share Plugin powered by Ultimatelysocial