ಬಿಜೆಪಿಯಲ್ಲಿನ ಬಂಡಾಯ ವಿಚಾರವಾಗಿ ಮಾತನಾಡಿದ ಶಾಸಕ ನಿರಂಜನ್ ಕುಮಾರ್!

ಬಿಎಸ್ಪಿ ಗುರುಪ್ರಸಾದ್ ಬಿಜೆಪಿಗೆ : ಶಾಸಕ ನಿರಂಜನ್ ನೇತೃತ್ವದಲ್ಲಿ ಸೇರ್ಪಡೆ. 2018 ರ ಸಾರ್ವತ್ರಿಕ ಚುನಾವಣೆಯಲ್ಲಿ ಅಕ್ಕಮಾಯವತಿ ಅವರ ಬಿಎಸ್ಪಿ ಪಕ್ಷದಿಂದ ಸ್ಪರ್ದಿಸಿ ಕ್ಷೇತ್ರದಲ್ಲಿ ಅಸ್ತಿತ್ವ ಕಂಡುಕೊಂಡಿದ್ದ ತಾಲೂಕಿನ ಸೋಮಹಳ್ಳಿ ಗ್ರಾಮದ ಗುರುಪ್ರಸಾದ್ ಅವರು ಅಧಿಕೃತವಾಗಿ ಬಿಜೆಪಿ ಪಕ್ಷ ಸೇರ್ಪಡೆಗೊಂಡರು.

ಶಾಸಕ ನಿರಂಜನ್ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಗೊಂಡ ಬಳಿಕ ಮಾತನಾಡಿದ ಗುರುಪ್ರಸಾದ್ ಅವರು ಬಿಎಸ್ಪಿ ಪಕ್ಷದಿಂದ ಸ್ಪರ್ದಿಸಿದ್ದ ನನಗೆ ಮತದಾರರು ಹತ್ತು ಸಾವಿರಕ್ಕೂ ಹೆಚ್ಚು ಮತಗಳನ್ನ ನೀಡಿ ಆಶೀರ್ವದಿಸಿದ್ದರು, ಆದರೆ ಇಂದು ಕ್ಷೇತ್ರದ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಉತ್ತಮವಾದ ಕೆಲಸಗಳನ್ನ ಮಾಡುತ್ತ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಈ ಹಿನ್ನೆಲೆಯಲ್ಲಿ ಅವರ ಜನಪರ ಕೆಲಸಗಳನ್ನ ಮೆಚ್ಚಿ ಪಕ್ಷ ಸೇರ್ಪಡೆಗೊಂಡಿದ್ದೇನೆ . ನಮಗೆ ಹತ್ತಿರವಾಗುವಂತ ಶಾಸಕರ ಅವಶ್ಯಕತೆಯಿದೆ ಅಂತಹ ಗುಣ ಸಿ.ಎಸ್.ನಿರಂಜನ್ ಕುಮಾರ್ ಅವರಲ್ಲಿದೆ ಈ ನಿಟ್ಟಿನಲ್ಲಿ ನಿರಂಜನ್ ಕೈ ಬಲಪಡಿಸಲು ಇಂದಿನಿಂದಲೇ ನಿಷ್ಠೆಯಿಂದ ಕೆಲಸ ಮಾಡುತ್ತೇನೆ ಎಂದರು.

ಬಿಎಸ್ಪಿ ಗುರುಪ್ರಸಾದ್ ಬಿಜೆಪಿ ಗುರುಪ್ರಸಾದ್ ಅವರನ್ನ ನಮ್ಮ ಪಕ್ಷಕ್ಕೆ ಆತ್ಮೀಯವಾಗಿ ಬರಮಾಡಿಕೊಂಡಿದ್ದೇವೆ , ಅನೇಕ ವರ್ಷಗಳಿಂದ ರಾಜಕಾರಣದಲ್ಲಿ ಸಕ್ರಿಯವಾಗಿರುವ ಇವರಿಗೆ ಬಹಳ ಅನುಭವವಿದೆ ನಾವೆಲ್ಲ ಒಂದೇ ಪಕ್ಷದಲ್ಲಿದ್ದು ಕೆಲಸ ಮಾಡಿದ್ವಿ , ರಾಜಕಾರಣದ ಪ್ರತಿಯೊಂದು ಪಟ್ಟನ್ನು ಅರಿತಿರುವ ಗುರುಪ್ರಸಾದ್ ಜನರಿಗೆ ತುಂಬಾ ಹತ್ತಿರವಾಗುವಂತ ವ್ಯಕ್ತಿಯಾಗಿದ್ದಾರೆ, ಎಲ್ಲರೂ ಒಟ್ಟಾಗಿ ಹೋಗುವಂತ ಅವಶ್ಯಕತೆ ತುಂಬಾ ಇದೆ ಈ ಹಿನ್ನೆಲೆಯಲ್ಲಿ ಜವಾಬ್ದಾರಿಯುತವಾಗಿ ಹೆಜ್ಜೆ ಇಡೋಣ , ಕುಟುಂಬ ರಾಜಕಾರಣವನ್ನ ನಡೆಸಿಕೊಂಡು ಬಂದವರ ಸಹವಾಸ ಸಾಕು , ಎಂ ಎಲ್ ಎ ಅವಕಾಶವು ಅವ್ರಿಗೆ ಬೇಕು ಚಾಮುಲ್ ಚುನಾವಣೆಯಲ್ಲೂ ಅವ್ರಿಗೆ ಪ್ರಾಧನ್ಯತೆ ಕೊಡಬೇಕು ಹೀಗಿರುವಾಗ ಪಕ್ಷಕ್ಕಾಗಿ ದುಡಿದವರ ಗತಿಯೇನು ಅದಕ್ಕಾಗಿ ಕುಟುಂಬ ರಾಜಕಾರಣಕ್ಕೆ ಇತಿಶ್ರೀ ಹಾಡೋಣ ಎಂದರು.

ಬೈಟ್ : 2 : ಸಿ.ಎಸ್.ನಿರಂಜನ್ ಕುಮಾರ್ , ಶಾಸಕ ಗುಂಡ್ಲುಪೇಟೆ.

ಬಿಜೆಪಿಯಲ್ಲಿನ ಬಂಡಾಯ ವಿಚಾರವಾಗಿ ಮಾತನಾಡಿದ ಶಾಸಕ ನಿರಂಜನ್ ಕುಮಾರ್
ಬಿಜೆಪಿ ಒಂದು ಶಿಸ್ತಿನ ಪಕ್ಷವಾಗಿದೆ ಯಾರಿಗೆ ಟಿಕೆಟ್ ನೀಡ್ಬೇಕು ಎಂಬುದು ವರಿಷ್ಠರಿಗೆ ಬಿಟ್ಟಿದ್ದು ಚುನಾವಣೆಯಲ್ಲಿ ಎಲ್ಲರಿಗೂ ಅವಕಾಶ ನೀಡಲು ಸಾಧ್ಯವಿಲ್ಲ ಈಗಾಗಲೇ ಟಿಕೆಟ್ ಆಕಾಂಕ್ಷಿ ವಿಚಾರವನ್ನ ವ್ಯಕ್ತಪಡಿಸಿರುವವರು ನಮ್ಮ ಜೊತೆ ಪಕ್ಷಕ್ಕಾಗಿ ಕೆಲಸ ಮಾಡ್ತಾರೆ ಎಂಬ ವಿಶ್ವಾಸವಿದೆ ಎಂದರು.

ಬೈಟ್ : 3 : ಸಿ.ಎಸ್.ನಿರಂಜನ್ ಕುಮಾರ್ , ಶಾಸಕ ಗುಂಡ್ಲುಪೇಟೆ

ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ಚುನಾವಣಾ ಬರಾಟೆ ಜೋರಾಗಿದ್ದು ಹಾಲಿ ಶಾಸಕ ನಿರಂಜನ್ ಸಮ್ಮುಖದಲ್ಲಿ ವಿವಿಧ ಪಕ್ಷಗಳ ಮುಖಂಡರು ಕಾರ್ಯಕರ್ತರು ಬಿಜೆಪಿ ಕಡೆ ಮುಖಮಾಡಿದ್ರೆ ಮತ್ತೊಂದಿಷ್ಟು ಮಂದಿ ಕಾಂಗ್ರೆಸ್ ಕಡೆ ವಾಲುತ್ತಿರುವುದು ಎರಡು ಪಕ್ಷಗಳ ಜಿದ್ದಾಜಿದ್ದಿನ ಕಾದಾಟಕ್ಕೆ ಸಾಕ್ಷಿಯಾಗಿದೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ರಾ ಶಾಸಕ ಪಿ ರಾಜೀವ್?

Tue Apr 11 , 2023
ಸಂವಿಧಾನವನ್ನು ಪುಂಕಾನುಪುಂಕವಾಗಿ ಕರಗತ ಮಾಡಿಕೊಂಡು ಭಾಷಣ ಬಿಗಿಯೋ ಕುಡಚಿ ಶಾಸಕ ಪಿ ರಾಜೀವ್ ಪ್ರಚಾರದ ಭರಾಟೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ರಾ? ಎನ್ನುತ್ತಿದ್ದಾರೆ ಕೆಲವು ಪ್ರಜ್ಞಾವಂತರು. ವಿಧಾನ ಸಭೆ ಚುನಾವಣಾ ಪ್ರಚಾರ ನಿಮಿತ್ಯವಾಗಿ  ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ ವಾರ್ಡ್ ಸಂಖ್ಯೆ 6ರ ಶ್ರೀ ಕರೇಸಿದ್ದೇಶ ದೇವಸ್ಥಾನ ಆವರಣದಲ್ಲಿ ಕಾರ್ಯಕರ್ತರ ಸಭೆ ನಡೆಸಿದ ಶಾಸಕ ಪಿ ರಾಜೀವ್, ಚಿಕ್ಕ ಚಿಕ್ಕ ಮಕ್ಕಳಿಗೆ ಬಿಜೆಪಿ ಗೆ ಮತ ಹಾಕಬೇಕೆಂದು […]

Advertisement

Wordpress Social Share Plugin powered by Ultimatelysocial