ನಾನು ಮತದಾರರಿಗೆ ಹಣ ಬಲ ಪೊಳ್ಳು ಆಶ್ವಾಸನೆ ನಿಡಿ ಚುನಾವಣೆ ನೆಡೆಸುವುದಿಲ್ಲ..!

ತುಮಕೂರು ನಗರದ ಖಾಸಗಿ ಹೋಟೆಲ್ ಒಂದರಲ್ಲಿ ಸುದ್ದಿ ಗೋಷ್ಠಿ ನಡೆಸಿದ ಸ್ವತಂತ್ರ ಅಭ್ಯರ್ಥಿ ನರಸೇಗೌಡ. ನಾನು ಮತದಾರರಿಗೆ ಹಣ ಬಲ ಪೊಳ್ಳು ಆಶ್ವಾಸನೆ ನಿಡಿ ಚುನಾವಣೆ ನೆಡೆಸುವುದಿಲ್ಲ.  ನಾನು ಇಷ್ಟು ದಿನಗಳ ಕಾಲ ಬೇರೆಯವರಿಗಾಗಿ ಮತ ಯಾಚನೆ ಮಾಡುತ್ತಿದ್ದೆ ಆದರೆ ಇಂದು ನನಗಾಗಿ ನಾನು ಮತ ಯಾಚನೆ ಮಾಡುತ್ತಿದ್ದೇನೆ. ಚುನಾವಣೆಯಲ್ಲಿ ನನ್ನಂತ ಬಡ ಅಭ್ಯರ್ಥಿಗೆ ಯಾವ ಪಕ್ಷದವರು ಟಿಕೆಟ್ ನೀಡಿಲ್ಲ ನಾನು ನನ್ನ ಸಮುದಾಯದ ಪರವಾಗಿ ನಾನು ಮುಂದೆ ಬಂದು ಚುನಾವಣೆ ನಡೆಸಲು ಮುಂದಾಗಿದ್ದೇನೆ.

ನಾನು ಯಾವುದೇ ರೀತಿಯಾದ ರಾಜಕೀಯ ಹಿನ್ನಲೆ ಇರುವ ಕುಟುಂಬದಿಂದ ಬಂದಿಲ್ಲ ನಾನು ಗುತ್ತಿಗೆದಾರನಾಗಿ ದುಡಿದು ಬಂದ ಹಣದಲ್ಲಿ ಸಣ್ಣ ಪುಟ್ಟ ಸಮಾಜ ಸೇವೆ ಮಾಡುತ್ತ ರಾಜಕಾರಣಕ್ಕೆ ಬಂದೆ ನಾನು ಈ ಬಾರಿ ನನ್ನದೇ ಸಮುದಾಯದ ಪರವಾಗಿ ಸ್ಪರ್ದಿಸುತ್ತಿದ್ದು ನಾನು ಇದುವರೆಗೂ ದುಡಿದ ಪಕ್ಷದಲ್ಲಿ ಟಿಕೆಟ್ ಸಿಕ್ಕಿಲ್ಲ ಎಂಬಾ ನೋವು ನನಗೆ ತುಂಬಾ ಕಾಡುತಿದೆ. ಇನ್ನು ಬಹಳಷ್ಟು ಜನರಿಗೆ ತುಂಬಾ ಗೊಂದಲ ಇತ್ತು ನರಸೇಗೌಡ ಚುನಾವಣೆಯಿಂದ ಹಿಂದೆ ಸರಿಯುತ್ತರೆಂದು ಆದರೆ ನಾನು ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಮೇಯವೇ ಇಲ್ಲ.

ನಾನು ಬಹಳಷ್ಟು ಮಸೀದಿಗಳಿಗೆ ದೇವಾಲಯಗಳಿಗೆ ಸಾಕಷ್ಟು ಸೇವೆ ಸಲ್ಲಿಸಿದ್ದೇನೆ ಅಲ್ಲದೆ ಜನರಿಗೂ ಸಹ ಹಲವಾರು ರೀತಿಯಲ್ಲಿ ಸೇವೆ ಸಹಾಯ ಮಾಡಿಕೊಂಡು ಬಂದಿದ್ದೇನೆ. ನನಗೆ ತುಮಕೂರು ಜನತೆ ಸಹಕಾರ ಕೊಟ್ಟು ಗೆಲ್ಲಿಸಿದಲ್ಲಿ ಜನರಿಗೆ ನಾನು ಶಕ್ತಿ ಮೀರಿ ಕೆಲಸ ಕಾರ್ಯಗಳನ್ನು ಮಾಡಿಕೊಡುತ್ತೇನೆ ಅದು ಸಹ ನನ್ನ ಕೊನೆ ಉಸಿರು ಇರುವವರೆಗೂ ಜನರ ಸೇವೆ ಮಾಡುತ್ತೇನೆ ಎಂದು ಹೇಳಿದರು.

ನಾನು ಹಣ ಬಲ, ಪೊಳ್ಳು ಆಮಿಷಗಳನ್ನು ಒಡ್ಡಿ ಚುನಾವಣೆ ನಡೆಸಲ್ಲ ನಾನು ಜನ ಬಲದಿಂದ ಮಾತ್ರ ಚುನಾವಣೆಯನ್ನು ನಡೆಸುತ್ತೇನೆ ನನ್ನಿಂದ ಏನಾದರು ತಪ್ಪಾಗಿದ್ದರೆ ಕ್ಷಮಿಸಿ ನನಗೆ ಬೆಂಬಲಿಸಿ ಹರಸಿ ಹಾರೈಸಿ ಎಂದು ಮತದಾರರನ್ನು ಉದ್ದೇಶಿಸಿ ಮತ ಯಾಚನೆ ಮಾಡಿದರು.

ತುಮಕೂರು ನಗರಕ್ಕೆ ಹೇಮಾವತಿ ನೀರು ಬರದೇ ಇದ್ದರು ಇಲ್ಲಿರುವ ಕೆರೆ ಕತ್ತೆಗಳನ್ನು ಒಟ್ಟುಗುಡಿಸಿ ಅದರಿಂದ ನಾನು ನಿರಂತರ ನೀರು ಒದಗಿಸುವ ಆಶಯ ಹೊಂದಿದ್ದೇನೆ ಎಂದರು ಇದು ನಿಮಿತ್ತ ಮಾತ್ರ ಇನ್ನಷ್ಟು ಮಹತ್ತರ ಯೋಜನೆಗಳ ರುಪುರೇಷೆಗಳನ್ನು ಸಿದ್ದಪಡಿಸಿದ್ದೇನೆ ಅದನ್ನು ಒಳಗೊಂಡಂತೆ ನನ್ನಗೆ ಸರ್ಕಾರಿ ಶಾಲೆಗಳಿಗೆ ಹೈ ಟೆಕ್ ಮಾದರಿಯ ಸಾಲಭ್ಯವನ್ನು ಒದಗಿಸುವ ಅಸೆ ನನಗಿದೆ ಎಂದರು. ಇನ್ನಷ್ಟು ನನ್ನ ಪ್ರಣಾಳಿಕೆಗಳನ್ನು ಜನರ ಮುಂದಿಟ್ಟು ನಾನು ಜನಶೀರ್ವಾದ ಪಡೆಯುತ್ತೇನೆ ಎಂದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಯಾದಗಿರಿಯಲ್ಲಿ ಅಮಿತ್ ಷಾ ಭಾಷಣ..!

Wed Apr 26 , 2023
ಅಭೂತಪೂರ್ವ ಬೆಂಬಲ ನೀಡಿದಕ್ಕೆ ಯಾದಗಿರಿ ಜನರಿಗೆ ಧನ್ಯವಾದಗಳು,  ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಮಲ ಅರಳಲಿದೆ.  ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರನ್ನು ಗೆಲ್ಲಿಸಿ,  ರಾಜ್ಯದಲ್ಲಿ ಪೂರ್ಣ ಬಹುಮತದ ಸರ್ಕಾರ ಬರಲು ಬಿಜೆಪಿಗೆ ಬೆಂಬಲಿಸಬೇಕಿದೆ. ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಮಾಡಿದೆ.  ಮುಸ್ಲಿಂ ಮೀಸಲಾತಿ ರದ್ದು ಮಾಡಿ,  ಒಕ್ಕಲಿಗ, ಲಿಂಗಾಯತ, SC, St ಸಮುದಾಯಕ್ಕೆ ಮೀಸಲಾತಿ ಕಲ್ಪಿಸಲಾಗಿದೆ. ಕಾಂಗ್ರೆಸ್ ನಾಯಕರ ವಿರುದ್ಧ ಅಮಿತ್ ಷಾ ವಾಗ್ದಾಳಿ.     ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ […]

Advertisement

Wordpress Social Share Plugin powered by Ultimatelysocial