ಬಿಜೆಪಿ ಸರ್ಕಾರಕ್ಕೆ ಒಂದು ವರ್ಷ

ಸಮ್ಮಿಶ್ರ ಸರ್ಕಾರ ಕೆಡವಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರಕ್ಕೆ ಒಂದು ವರ್ಷ.ಒಂದು ವರ್ಷದಲ್ಲಿ ಸರ್ಕಾರದ ಸಾಧನೆ ಶೂನ್ಯ, ನೆರೆ ಸಂತ್ರಸ್ತರಿಗೆ ಕೊಟ್ಟ ಭರವಸೆ ಈಡೇರಿಸಿಲ್ಲ, ಅವರಿಗೆ ಮನೆ ಕಟ್ಟಿಕೊಡಲು ಸಾಧ್ಯವಾಗಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದ್ದಾರೆ. ಕೊರೊನಾ ವಿಚಾರದಲ್ಲಿ ಸರ್ಕಾರಕ್ಕೆ ಕಾಂಗ್ರೆಸ್ ಸಂಪೂರ್ಣ ಸಹಕಾರ ಕೊಟ್ಟಿದೆ. ಆದ್ರೆ ಕೊರೊನಾ ನಿಭಾಯಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಆ್ಯಂಬುಲೆನ್ಸ್ ಸಮಸ್ಯೆ ಮತ್ತು ಕೊರೊನಾದಿಂದ ಸತ್ತವರನ್ನ ಅಂತ್ಯಕ್ರಿಯೆ ಮಾಡಲು ಇವರಿಗೆ ಆಗುತ್ತಿಲ್ಲ. ಹಾಗೂ ಒಂದು ವರ್ಷದಲ್ಲಿ ರಾಜ್ಯ ಅಭಿವೃದ್ಧಿಯಲ್ಲಿ ಹಿಂದೆ ಸರಿದಿದೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಬಳಿ ದಾಖಲೆ ಇದ್ರೆ ಕೋರ್ಟ್ ಗೆ ಯಾಕೆ ಹೋಗ್ತಿಲ್ಲ ಅಂತ ಟ್ವೀಟ್ ಮಾಡಿದ್ದ ಹೆಚ್ ಡಿ ಕೆ ಗೆ ಈಶ್ವರ್ ಖಂಡ್ರೆ ಟಾಂಗ್ ನೀಡಿದ್ದಾರೆ. ಒಂದು ವಿರೋಧ ಪಕ್ಷವಾಗಿ ಜನರ ಗಮನಕ್ಕೆ ಸರ್ಕಾರದ ವೈಫಲ್ಯಗಳನ್ನ ತರುತ್ತಿದ್ದೇವೆ. ಜನತಾ ನ್ಯಾಯಲಯವೇ ಅಂತಿಮ. ಎಲ್ಲದಕ್ಕೂ ಕೋರ್ಟ್ ಗೆ ಹೋಗುವ ಅವಶ್ಯಕತೆ ಇಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಗೆ ಈಶ್ವರ್ ಖಂಡ್ರೆ ಟಾಂಗ್ ನೀಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ವಂದೇ ಭಾರತ್ ಮಿಷನ್ ಆಗಸ್ಟ್ 1ರಿಂದ 5ನೇ ಹಂತ

Mon Jul 27 , 2020
ಕೊರೊನಾ ವೈರಸ್ ಕಾರಣದಿಂದ ವಿದೇಶಗಳಲ್ಲಿ ಸಿಕ್ಕಿ ಹಾಕಿಕೊಂಡಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರುವ ವಂದೇ ಭಾರತ್ ಮಿಷನ್ ನ ಐದನೇ ಹಂತ ಆಗಸ್ಟ್ ೧ರಿಂದ ಆರಂಭವಾಗಲಿದೆ. ವಂದೇ ಭಾರತ್ ಮಿಷನ್ ಅಡಿಯಲ್ಲಿ ಈಗಾಗಲೇ ೫೩ ವಿಮಾನಗಳಿಂದ ವಿದೇಶದಲ್ಲಿ ಸಿಲುಕಿದ್ದ ೨.೫ ಲಕ್ಷಕ್ಕೂ ಹೆಚ್ಚು ಭಾರತೀಯರನ್ನು ಕರೆತರಲಾಗಿದೆ ಎಂದು ಏರ್ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ. ಆಗಸ್ಟ್ ೧ರಿಂದ ಐದನೇ ಹಂತ ಆರಂಭವಾಗಲಿದ್ದು, ಹೆಚ್ಚುವರಿ ವಿಮಾನ ಒದಗಿಸುವ ಬಗ್ಗೆ ಶೀಘ್ರದಲ್ಲಿಯೇ ಮಾಹಿತಿ ನೀಡಲಾಗುವುದು ಎಂದು […]

Advertisement

Wordpress Social Share Plugin powered by Ultimatelysocial