ಬೆಂಗಳೂರಿಗರೇ ಗಮನಿಸಿ: ಗಣೇಶ ಕೂರಿಸುವವರು ಈ ಗೈಡ್‌ಲೈನ್ಸ್‌ ಫಾಲೋ ಮಾಡಲೇಬೇಕು.

 

ಬೆಂಗಳೂರು, ಸೆಪ್ಟೆಂಬರ್ 16: ಜಾತಿ ಧರ್ಮದ ಬೇಧ ಬಾವ ಇಲ್ಲದೇ ಎಲ್ಲಾರೂ ಒಗ್ಗೂಡಿ ಸಂಭ್ರಮಿಸುವ ಸಂತಸದ ಹಬ್ಬ ಎಂದರೆ ಅದು ಗಣೆಶೋತ್ಸವ. ವಿಘ್ನ ನಿವಾರಕ ಗಣೇಶನ ಆರಾಧನೆ ಮಾಡುವ ಚೌತಿಯ ದಿನವನ್ನು ದೇಶದಾದ್ಯಂತ ಎಲ್ಲರೂ ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ಇಂತಹ ಹಬ್ಬದಂದು ಯಾವ ರೀತಿ ಗೈಡ್ಲೈನ್ ಇದೆ?

ಪೊಲೀಸರಿಂದ ಗಣೇಶನ ಕೂರಿಸುವವರಿಗೆ ಏನು ರೂಲ್ಸ್ ಇದೆ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಈ ಬಾರಿ ಗಣೇಶನ ಕೂರಿಸಬೇಕು ಎಂದರೆ ಒಂದಷ್ಟು ಕಾನೂನು ನಿಯಮ ಪಾಲನೆ ಮಾಡಲೇಬೇಕು. ರೂಲ್ಸ್ ಬ್ರೇಕ್ ಮಾಡುವ ಹಾಗಿಲ್ಲ ಅಂತ ನಗರ ಪೊಲೀಸರು ಎಚ್ಚರಿಕೆ ಕೂಡ ಕೊಟ್ಟಿದ್ದಾರೆ. ಈ ಸಂಬಂಧ ಪೊಲೀಸ್ ಇಲಾಖೆ ಮಾಹಿತಿ ಹಂಚಿ ಕೊಂಡಿದ್ದು ಒಂದಷ್ಟು ನಿಯಮ ಪಾಲನೆಗೆ ತಿಳಿಸಿದೆ. ಗಣೇಶನ ಹಬ್ಬದ ಕಾರ್ಯಕ್ರಮ ಆಯೋಜಕರು ತಿಳಿದಿರಬೇಕಾದ ಮಾಹಿತಿ ಇಲ್ಲಿದೆ.

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಕಾರ್ಯಕ್ರಮದ ಆಯೋಜಕರು ಪಾಲಿಸಬೇಕಾದ ಕ್ರಮಗಳು ಹೀಗಿವೆ ನೋಡಿ. ಸಾರ್ವಜನಿಕ ಸ್ಥಳದಲ್ಲಿ ಗಣೇಶ ಮೂರ್ತಿ ಸ್ಥಾಪಿಸಲು ಸ್ಥಳೀಯ ಪೊಲೀಸ್ ಠಾಣೆಯ ಅನುಮತಿ ಕಡ್ಡಾಯ ಪಡೆದು ಕಂಡಿರಬೇಕು. ಗಣೇಶ ಕೂರಿಸಲು ಕಾನೂನು ಬಾಹಿರಬಾಗಿ ಹಣ ಸಂಗ್ರಹ ಮಾಡುವ ಹಾಗಿಲ್ಲ. ಗಣಪನ ವಿಗ್ರಹ ಕೂರಿಸುತ್ತೇವೆ ದುಡ್ಡು ಕೊಡಿ ಅಂತ ಮಾನಸಿಕವಾಗಿ ಹಿಂಸೆ ಕೊಡುವ ಹಾಗಿಲ್ಲ, ಇದನ್ನೇ ಬಂಡವಾಳ ಮಾಡಿ ಕೊಂಡು ದುಡ್ಡು ಮಾಡುವ ಮಾರ್ಗ ಮಾಡಿ ಕೊಳ್ಳುವ ಹಾಗಿಲ್ಲ ಎಂದು ಪೊಲೀಸ್‌ ಇಲಾಖೆ ತಿಳಿಸಿದೆ.

ಇನ್ನು ಗಣೇಶನ ಕಾರ್ಯಕ್ರಮ ನಡೆಸಲು ಚಪ್ಪರ, ಶಾಮಿಯಾನ, ಪೆಂಡಾಲ್‌ಗೆ ವಿಶೇಷ ಅನುಮತಿ ಮುಂಚಿತವಾಗಿ ಖಡ್ಡಾಯವಾಗಿ ಪಡೆಯಬೇಕು. ಜೊತೆಗೆ ಯಾವುದಾದರೂ ಕಲಹ ಬರಿತ ಜಾಗದಲ್ಲಿ ವಿವಾದಿತ ಜಾಗದಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡುವ ಹಾಗಿಲ್ಲ. ಮೆರವಣಿಗೆ ವೇಳೆ ಏನೇ ಅಹಿಕತರ ಘಟನೆ ನಡೆದರೆ ಅದಕ್ಕೆ ಸಂಘಟಕರೇ ನೇರ ಹೊಣೆ, ಹೀಗಾಗಿ ಅತೀ ಮುತುವರ್ಜಿಯಿಂದ ಕಾರ್ಯಕ್ರಮ ಮಾಡಬೇಕು.

ಆಯೋಜಕರು ಕಾರ್ಯಕ್ರಮ ನಡೆಯುವ ಜಾಗದಲ್ಲಿ ಬೆಂಕಿ ನಂದಿಸುವ ಸಾಮಾಗ್ರಿಗಳು, ಸಿಸಿಟಿವಿ ಸೇರಿದಂತೆ ಅಗತ್ಯ ಕ್ರಮವಹಸಿಬೇಕು, ಯಾವುದೇ ಅನಿರೀಕ್ಷಿತ ಘಟನೆ ನಡೆದ ಹಾಗೇ ಜಾಗ್ರತೆ ವಹಿಸಬೇಕು ನಡೆದರು ಸುರಕ್ಷತಾ ಕ್ರಮ ಕೈಗೊಳ್ಳಬೇಕು.

ಮೂರ್ತಿ ಸ್ಥಾಪನೆಮಾಡಿರುವ ಜಾಗದಲ್ಲಿ ಕಟ್ಟಿಗೆ, ಉರುವಲು, ಸೀಮೆ ಎಣ್ಣೆ ಒಟ್ಟಾರೆ ಬೆಂಕಿ ಸಂಬಂಧಿಸಿದ ಸಾಮಾಗ್ರಿಗಳನ್ನು ಇಡಬಾರದು. ವಿದ್ಯುತ್ ಸಂಪರ್ಕ ಬೇಕಾಗಿರುವ ಬಗ್ಗೆ ಬೆಸ್ಕಾಂ ಮತ್ತು ಅಗ್ನಿ ಶಾಮಕ ಇಲಾಖೆಯ ಎನ್‌ಒಸಿ ಕಡ್ಡಾಯ ಪಡೆದು ಕಂಡಿರಬೇಕು. ಧ್ವನಿ ವರ್ಧಕ ಬಳಕೆಗೆ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಡೆಡ್ ಲೈನ್ ಕೊಡಲಾಗಿದೆ. ಯಾಕೆಂದರೆ ಇದ್ರಿಂದ ಬೇರೆ ಯಾರಿಗೂ ಸಮಸ್ಯೆ ಆಗಬಾರದು ಎನ್ನುವ ಕಾರಣಕ್ಕೆ ಈ ತರಹ ನಿರ್ಧಾರ ಕೈಗೊಳ್ಳಲಾಗಿದೆ.

ಯಾವುದೇ ಕಾರಣಕ್ಕೂ ಡಿಜೆ ಸೌಂಡ್ ಸಿಸ್ಟಮ್ ಅಳವಡಿಕೆಗೆ ಅವಕಾಶ ಇಲ್ಲ. ಮೆರವಣಿಗೆ ಸೂಕ್ಷ್ಮ ಪ್ರದೇಶಗಳಲ್ಲಿ ಹಾಗೂ ಪ್ರಾರ್ಥನೆ ಸ್ಥಳಗಳ ಮುಂಭಾಗದಲ್ಲಿ ಪಟಾಕಿ, ಸಿಡಿ ಮದ್ದು ನಿಷೇಧ ಮಾಡಲಾಗಿದೆ. ಗಣಪನ ವಿಸರ್ಜನೆ ಕಾರ್ಯಕ್ರಮ ರಾತ್ರಿ 10 ಗಂಟೆಯೊಳಗೆ ಮುಗಿಸಬೇಕು. ಗಣೇಶ ಕೂರಿಸುವ ಕಾರ್ಯಕ್ರಮದ ವರ್ತಕರಿಗೆ ಹೊಸ ಗೈಡ್ ಲೈನ್ಸ್ ಬಿಡುಗಡೆ ಮಾಡಿದ್ದು ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಎಚ್ಚರಿಕೆ ವಹಿಸಲು ಸೂಚಿಸಿದ್ದಾರೆ.

ಒಟ್ಟಿನಲ್ಲಿ ಗಣೇಶನ ಹಬ್ಬ ಬರುತ್ತಿದೆ ಅಂತ ಬೇಕಾ ಬಿಟ್ಟಿಯಾಗಿ ವರ್ತಿಸುವ ಹಾಗಿಲ್ಲ, ಹಬ್ಬಕೆ ಇರುವ ನಿಯಮ ಪಾಲನೆ ಮಾಡಲೇಬೇಕು ಎಂದು ಸೂಚನೆ ಕೊಟ್ಟಿದ್ದಾರೆ.

 

Please follow and like us:

tmadmin

Leave a Reply

Your email address will not be published. Required fields are marked *

Next Post

PM ಕೇರ್ಸ್ ಯೋಜನೆಗಳನ್ನು COVID-19ನಂತೆ ಇತರೆ ಅನಾಥ ಮಕ್ಕಳಿಗೂ ವಿಸ್ತರಿಸಲು ಪರಿಗಣಿಸಬಹುದಾ: ಕೇಂದ್ರಕ್ಕೆ ಸುಪ್ರೀಂ

Sat Sep 16 , 2023
ಅನಾಥರು ಅನಾಥರೇ, ಅವರ ಹೆತ್ತವರ ಸಾವು ಹೇಗೆ ಸಂಭವಿಸಿದರೂ, ಮಕ್ಕಳಿಗಾಗಿ ಉದ್ದೇಶಿಸಿರುವ ಪಿಎಂ ಕೇರ್ಸ್ ನಿಧಿ ಯೋಜನೆಯನ್ನು COVID-19 ಸಾಂಕ್ರಾಮಿಕ ಸಮಯದಲ್ಲಿ ಅನಾಥರಾದವರೆಗೆ ನೀಡುವಂತೆ ಇತರ ಎಲ್ಲಾ ಅನಾಥರಿಗೂ ವಿಸ್ತರಿಸಬಹುದೇ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ಕೇಳಿದೆ. ನವದೆಹಲಿ: ಅನಾಥರು ಅನಾಥರೇ, ಅವರ ಹೆತ್ತವರ ಸಾವು ಹೇಗೆ ಸಂಭವಿಸಿದರೂ, ಮಕ್ಕಳಿಗಾಗಿ ಉದ್ದೇಶಿಸಿರುವ ಪಿಎಂ ಕೇರ್ಸ್ ನಿಧಿ ಯೋಜನೆಯನ್ನು COVID-19 ಸಾಂಕ್ರಾಮಿಕ ಸಮಯದಲ್ಲಿ ಅನಾಥರಾದವರೆಗೆ ನೀಡುವಂತೆ ಇತರ ಎಲ್ಲಾ ಅನಾಥರಿಗೂ […]

Advertisement

Wordpress Social Share Plugin powered by Ultimatelysocial