ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಹೆಚ್ಚುವರಿ ಎಸ್ಕಲೇಟರ್ ಅಳವಡಿಕೆ

ಬೆಂಗಳೂರು, ಸೆಪ್ಟೆಂಬರ್‌ 15: ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಜನರ ದಟ್ಟಣೆಯನ್ನು ನಿಭಾಯಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ ಮಂಗಳವಾರ ಹೆಚ್ಚುವರಿ ಎಸ್ಕಲೇಟರ್ ಅನ್ನು ಅಳವಡಿಸಿದೆ.

ಮೆಟ್ರೋ ನಿಲ್ದಾಣವನ್ನು ಬಳಸುವ ಪ್ರಯಾಣಿಕರ ದಟ್ಟಣೆ ಸುಧಾರಿಸಲು ಹೆಚ್ಚುವರಿ ಎಸ್ಕಲೇಟರ್ ಅನ್ನು ಅಳವಡಿಸಲಾಗಿದೆ ಎಂದು ಮೆಟ್ರೋ ಸಂಸ್ಥೆ ತಿಳಿಸಿದೆ.

ಹೊಸ ಎಸ್ಕಲೇಟರ್ ಅಳವಡಿಕೆ ವಿಸ್ತೃತ ಪರ್ಪಲ್ ಲೈನ್ ಮೆಟ್ರೋ ಮಾರ್ಗದ ಉದ್ಘಾಟನೆಗೂ ಮುನ್ನವೇ ಲೋಕಾರ್ಪಣೆ ಮಾಡಲಾಗಿದೆ. ಚಲ್ಲಘಟ್ಟದಿಂದ ವೈಟ್‌ಫೀಲ್ಡ್‌ಗೆ ಸಂಪರ್ಕ ಕಲ್ಪಿಸುವ ನಮ್ಮ ಮೆಟ್ರೋ ಮಾರ್ಗದ ಆರಂಭಕ್ಕಾಗಿ ಬೆಂಗಳೂರು ನಿವಾಸಿಗಳು ಹೆಚ್ಚು ಕಾತರದಿಂದ ಕಾಯುತ್ತಿದ್ದಾರೆ.

ಪ್ರಯಾಣಿಕರ ದೂರು:

ಪ್ರಯಾಣಿಕರ ಬೇಡಿಕೆಗಳನ್ನು ಪೂರೈಸಿದ ಬಿಎಂಆರ್‌ಸಿಎಲ್ ಅಧಿಕಾರಿಗಳು, ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆಯನ್ನು ನಿಭಾಯಿಸಲು ಎಸ್ಕಲೇಟರ್‌ನ ಆರಂಭಿಕ ಸಾಮರ್ಥ್ಯ ಸಾಕಾಗುತ್ತಿರಲಿಲ್ಲ. ಹಾಗಾಗಿ ಈಗ ಹೆಚ್ಚುವರಿ ಎಸ್ಕಲೇಟರ್‌ ಅನ್ನು ಅಳವಡಿಸಲಾಗಿದೆ. ಬೈಯಪ್ಪನಹಳ್ಳಿ- ಕೃಷ್ಣರಾಜಪುರ (ಕೆಆರ್ ಪುರ) ಮೆಟ್ರೊ ಸಂಪರ್ಕ ಒಮ್ಮೆ ತೆರೆದರೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಬರುವ ನಿರೀಕ್ಷೆಯಿದೆ. ಈಗ ಹೊಸದಾಗಿ ಅಳವಡಿಸಲಾಗಿರುವ ಎಸ್ಕಲೇಟರ್ ಪ್ರಯಾಣಿಕರಿಗೆ ದಟ್ಟಣೆಯಿಂದ ಮುಕ್ತಿ ನೀಡುತ್ತದೆ.

ಸುರಕ್ಷತಾ ತಪಾಸಣೆಯಲ್ಲಿ ವಿಳಂಬ:

ಆರಂಭದಲ್ಲಿ ಸೆ.13ಕ್ಕೆ ನಿಗದಿಯಾಗಿದ್ದ ಬೈಯಪ್ಪನಹಳ್ಳಿ-ಕೆಆರ್ ಪುರ ವಿಭಾಗದ ಟ್ರಾಕ್‌ ತಪಾಸಣೆಯನ್ನು ಮಂಗಳವಾರ ರಾತ್ರಿ ಮುಂದೂಡಲಾಗಿತ್ತು. ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು (ಸಿಎಂಆರ್‌ಎಸ್) ಈ ಪರಿಶೀಲನೆ ನಡೆಸಲಿದ್ದಾರೆ.

ನಮ್ಮ ಮೆಟ್ರೋ ಪರ್ಪಲ್ ಲೈನ್:

2.1 ಕಿ.ಮೀ ಬೈಯಪ್ಪನಹಳ್ಳಿ- ಕೆಆರ್ ಪುರ ವಿಭಾಗದ ಸುರಕ್ಷತಾ ತಪಾಸಣೆ ಬೆನ್ನಿಗಾನಹಳ್ಳಿಯಲ್ಲಿ ಆರಂಭವಾಗಿ ಬೈಯಪ್ಪನಹಳ್ಳಿಯಲ್ಲಿ ಮುಕ್ತಾಯವಾಗಬೇಕಿತ್ತು. ಈ ವಿಭಾಗವು ವೈಟ್‌ಫೀಲ್ಡ್ ಪ್ರದೇಶವನ್ನು ಬೆಂಗಳೂರು ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್ (CBD) ಮತ್ತು ನಗರದ ಉಳಿದ ಭಾಗಗಳಿಗೆ ಸಂಪರ್ಕಿಸುತ್ತದೆ.

ಇದಲ್ಲದೆ ಕೆಂಗೇರಿಯಿಂದ ಚೆಲ್ಲಘಟ್ಟ ಮಾರ್ಗವನ್ನು ಪರಿಶೀಲಿಸಲಾಗುವುದು. ಎರಡೂ ಮಾರ್ಗಗಳು ಈ ತಿಂಗಳ ಅಂತ್ಯದ ವೇಳೆಗೆ ತೆರೆಯುವ ನಿರೀಕ್ಷೆಯಿದೆ. ಪ್ರಸ್ತುತ 13.7 ಕಿ.ಮೀ ಕೆಆರ್ ಪುರ-ವೈಟ್ ಫೀಲ್ಡ್ ಮಾರ್ಗ ಕಾರ್ಯನಿರ್ವಹಿಸುತ್ತಿದ್ದು, ಬೈಯಪ್ಪನಹಳ್ಳಿ-ಕೆಆರ್ ಪುರ ಭಾಗ ಇನ್ನೂ ಕಾರ್ಯಾರಂಭ ಮಾಡದ ಕಾರಣ ಉಳಿದ ಮೆಟ್ರೊ ಸಂಪರ್ಕ ಸಂಪರ್ಕ ಸ್ಥಗಿತಗೊಂಡಿದೆ.

ಇತ್ತೀಚೆಗೆ ಸೋಮವಾರ ಬೆಂಗಳೂರಿನಲ್ಲಿ ಖಾಸಗಿ ಸಾರಿಗೆ ಸಂಸ್ಥೆಗಳ ಮುಷ್ಕರದಿಂದಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಮತ್ತು ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ ಕಂಡಿತ್ತು. ಎರಡೂ ಸಾರಿಗೆ ಸೇವೆಗಳು ಬೆಳಗಿನ ಜನರ ಸಂಚಾರಕ್ಕೆ ಅನುಕೂಲವಾಗಲು ವೇಳಾಪಟ್ಟಿಯನ್ನು ಹೆಚ್ಚಿಸಿದ್ದವು.

ಸೋಮವಾರ ಖಾಸಗಿ ವಾಹನಗಳ ಸೇವೆ ಇಲ್ಲದ ಹಿನ್ನೆಲೆಯಲ್ಲಿ ಬಿಎಂಟಿಸಿ ಬಸ್‌ಗಳಲ್ಲಿ 39,52,476 ಪ್ರಯಾಣಿಕರು ಪ್ರಯಾಣಿಸಿದ್ದಾರೆ. BMTC ಹೆಚ್ಚುವರಿಯಾಗಿ 1,600 ಟ್ರಿಪ್‌ಗಳನ್ನು ನಿರ್ವಹಿಸಿದೆ. ವಿಮಾನ ನಿಲ್ದಾಣದ ಮಾರ್ಗದಲ್ಲಿ, ಸರಾಸರಿ 12,000 ಪ್ರಯಾಣಿಕರು BMTC ಬಸ್‌ಗಳನ್ನು ಬಳಸುತ್ತಾರೆ ಆದರೆ ಬಂದ್ ದಿನದಂದು ಸಂಖ್ಯೆ 22,371 ಕ್ಕೆ ಏರಿತು. ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುವಾಗ ‘ಎಕ್ಸ್’ ನಲ್ಲಿ ಚಿತ್ರವನ್ನು ಪೋಸ್ಟ್ ಮಾಡಿದ್ದರು. ಈ ಮಾರ್ಗದಲ್ಲಿ ಸಾರಿಗೆ ನಿಗಮಕ್ಕೆ ಎಂದಿನಂತೆ ಬರುತ್ತಿದ್ದ 32 ಲಕ್ಷ ರೂ.ಗಳ ಬದಲಿಗೆ ಒಂದೇ ದಿನದಲ್ಲಿ ರೂ.60 ಲಕ್ಷಕ್ಕೂ ಹೆಚ್ಚು ಆದಾಯ ಬಂದಿದೆ. ಒಟ್ಟಾರೆ ಸೋಮವಾರ ಬಿಎಂಟಿಸಿಯ ಆದಾಯ 5.96 ಕೋಟಿ ರೂ. ಆಗಿತ್ತು.

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ಬೆಳಗಿನ ಜನರ ದಟ್ಟಣೆಗೆ ಸುಧಾರಿಸಲು ಮೆಟ್ರೋ ರೈಲುಗಳ ಆವರ್ತನವನ್ನು ಹೆಚ್ಚಿಸಿದೆ. ಸೋಮವಾರ, ಒಟ್ಟು 6,13,513 ಜನರು ಮೆಟ್ರೋ ಸೇವೆಗಳನ್ನು ಬಳಸಿದ್ದಾರೆ ಇದು ಸರಾಸರಿ ಪ್ರಯಾಣಿಕರಿಗಿಂತ ಹೆಚ್ಚಾಗಿದೆ.

 

Please follow and like us:

tmadmin

Leave a Reply

Your email address will not be published. Required fields are marked *

Next Post

Ganesh Chaturthi 2023: ಹಬ್ಬಕ್ಕೆ ಊರಿಗೆ ಹೋಗ್ತೀರಾ? ಇಲ್ಲಿದೆ ಖಾಸಗಿ ಬಸ್‌ಗಳ ದುಬಾರಿ ದರದ ವಿವರ

Fri Sep 15 , 2023
    ಬೆಂಗಳೂರು, ಸೆಪ್ಟೆಂಬರ್‌ 14: ಗೌರಿ-ಗಣೇಶ ಹಬ್ಬಕ್ಕೆ ಊರಿಗೆ ಹೋಗಬೇಕು ಅಂತಾ ಸಿದ್ಧರಾಗುತ್ತಿದ್ದೀರಾ, ಹಾಗಾದರೆ ಖಾಸಗಿ ಬಸ್‌ ಹತ್ತುವ ಮೊದಲು ಒಂದು ಸಾರಿ ಟಿಕೆಟ್ ದರ ಚೆಕ್‌ ಮಾಡಿಕೊಂಡುಬಿಡಿ. ಕೆಎಸ್‌ಆರ್‌ಟಿಸಿ ಬೇಡ ಸ್ಲೀಪರ್ ಕೋಚ್‌ನಲ್ಲಿ ಹೋಗೋಣ ಅಂತಾ ಪ್ಲಾನ್‌ ಮಾಡಿದರೆ ಒಂದ್‌ ಸಾರಿ ಪ್ರೈಸ್‌ ಲಿಸ್ಟ್ ಪರಿಶೀಲನೆ ಮಾಡಿಕೊಂಡು ಬಸ್‌ನಿಲ್ದಾಣಕ್ಕೆ ತೆರಳಿ.   ಹಬ್ಬಗಳು ಬಂತು ಅಂದರೆ ಸಾಕು ಜನರು ಬೆಂಗಳೂರಿನಿಂದ ತಮ್ಮ ತಮ್ಮ ಊರುಗಳಿಗೆ ತೆರಳೋಕೆ ಕಾತುರರಾಗಿರುತ್ತಾರೆ. […]

Advertisement

Wordpress Social Share Plugin powered by Ultimatelysocial