Ganesh Chaturthi 2023: ಹಬ್ಬಕ್ಕೆ ಊರಿಗೆ ಹೋಗ್ತೀರಾ? ಇಲ್ಲಿದೆ ಖಾಸಗಿ ಬಸ್‌ಗಳ ದುಬಾರಿ ದರದ ವಿವರ

 

 

ಬೆಂಗಳೂರು, ಸೆಪ್ಟೆಂಬರ್‌ 14: ಗೌರಿ-ಗಣೇಶ ಹಬ್ಬಕ್ಕೆ ಊರಿಗೆ ಹೋಗಬೇಕು ಅಂತಾ ಸಿದ್ಧರಾಗುತ್ತಿದ್ದೀರಾ, ಹಾಗಾದರೆ ಖಾಸಗಿ ಬಸ್‌ ಹತ್ತುವ ಮೊದಲು ಒಂದು ಸಾರಿ ಟಿಕೆಟ್ ದರ ಚೆಕ್‌ ಮಾಡಿಕೊಂಡುಬಿಡಿ. ಕೆಎಸ್‌ಆರ್‌ಟಿಸಿ ಬೇಡ ಸ್ಲೀಪರ್ ಕೋಚ್‌ನಲ್ಲಿ ಹೋಗೋಣ ಅಂತಾ ಪ್ಲಾನ್‌ ಮಾಡಿದರೆ ಒಂದ್‌ ಸಾರಿ ಪ್ರೈಸ್‌ ಲಿಸ್ಟ್ ಪರಿಶೀಲನೆ ಮಾಡಿಕೊಂಡು ಬಸ್‌ನಿಲ್ದಾಣಕ್ಕೆ ತೆರಳಿ.

 

ಹಬ್ಬಗಳು ಬಂತು ಅಂದರೆ ಸಾಕು ಜನರು ಬೆಂಗಳೂರಿನಿಂದ ತಮ್ಮ ತಮ್ಮ ಊರುಗಳಿಗೆ ತೆರಳೋಕೆ ಕಾತುರರಾಗಿರುತ್ತಾರೆ. ವರ್ಷಕ್ಕೊಮ್ಮೆ ಬರೋ ಹಬ್ಬಕ್ಕಾದರೂ ಊರಿಗೆ ಹೋಗೋಣ ಅಂತಾ ಜನರು ಸಜ್ಜಾಗುತ್ತಿದ್ದಾರೆ. ಅತ್ತ ಖಾಸಗಿ ಬಸ್‌ ಮಾಲೀಕರು ಕೂಡ ಹಬ್ಬಕ್ಕೆ ಹೋಗುವವರನ್ನೇ ಟಾರ್ಗೆಟ್‌ ಮಾಡಿ ಟಿಕೆಟ್‌ ದರವನ್ನ ದುಪ್ಪಟ್ಟು ಪೀಕುತ್ತಿದ್ದಾರೆ.

ಸಾರಿಗೆ ಆಯುಕ್ತರು ದರ ಏರಿಕೆ ಮಾಡಿದರೆ ಕ್ರಮ ಅಂತಾ ಆದೇಶ ನೀಡಿದರೂ ಕ್ಯಾರೇ ಎನ್ನದ ಖಾಸಗಿ ಬಸ್‌ಗಳು ಟಿಕೆಟ್‌ ದರವನ್ನು ಹೆಚ್ಚಿಸುತ್ತಲೇ ಇದೆ. ಸಾಮಾನ್ಯ ದಿನಗಳಲ್ಲಿ 700- 1,000 ರೂ ಇದ್ದ ಟಿಕೆಟ್, ಇದೀಗ ಹಬ್ಬ ಇರುವ ಕಾರಣಕ್ಕೆ 1,200 – 3,000 ರೂ ಹೆಚ್ಚಳವಾಗಿದ್ದು, ಆನ್‌ಲೈನ್ ಟಿಕೆಟ್ ಬುಕಿಂಗ್ ದರ ಸಾಮಾನ್ಯ ದಿನಕ್ಕಿಂತ ಎರಡು ಪಟ್ಟು ಹೆಚ್ಚಳವಾಗಿದೆ. ಇದರಿಂದ ಊರಿಗೆ ಹೋಗೋಕೆ ಖಾಸಗಿ ಬಸ್‌ ಬುಕ್‌ ಮಾಡಲು ಮುಂದಾದ ಜನರು ಕಂಗಾಲಾಗಿದ್ದಾರೆ.

ಇನ್ನು ಸೆಪ್ಟೆಂಬರ್‌ 17ನೇ ತಾರೀಖು ಭಾನುವಾರ ಹಾಗೂ 18-19 ರಂದು ಗೌರಿ-ಗಣೇಶ ಹಬ್ಬ ಇರುವುದರಿಂದ ಊರುಗಳಿಗೆ ತೆರಳುವವರ ಸಂಖ್ಯೆ ಹೆಚ್ಚಾಗಿರುತ್ತದೆ ಎನ್ನುವ ಲೆಕ್ಕಾಚಾರ ಹಾಕಿಕೊಂಡ ಖಾಸಗಿ ಬಸ್‌ಗಳು, ಟಿಕೆಟ್‌ ದರವನ್ನು ಬೇಕಾಬಿಟ್ಟಿ ಹೆಚ್ಚಳ ಮಾಡಿದೆ. ಆನ್‌ಲೈನ್‌ ಬುಕ್ಕಿಂಗ್‌ನಲ್ಲಿ ಇಂದಿನ ದರಕ್ಕೂ ಹಬ್ಬದ ಹಿಂದಿನ ದರಕ್ಕೂ ಹೋಲಿಕೆ ಮಾಡಿದರೆ ದುಪ್ಪಟ್ಟು ದರ ವಸೂಲಿ ಮಾಡುತ್ತಿರುವುದು ಸ್ಪಷ್ಟವಾಗಿ ತಿಳಿದು ಬರುತ್ತಿದೆ.

ಹಬ್ಬಕ್ಕೆ ಖಾಸಗಿ ಟಿಕೆಟ್‌ ದರದ ಬರೆ:

ಸಾಮಾನ್ಯ ದಿನದ ದರ

ಬೆಂಗಳೂರು-ಮಂಗಳೂರು: 700 ರಿಂದ 800 ರೂ.

ಬೆಂಗಳೂರು-ಉಡುಪಿ: 880 – 1,050 ರೂ.

ಬೆಂಗಳೂರು-ಬಳ್ಳಾರಿ: 1,000 ರಿಂದ 1,450 ರೂ.

ಬೆಂಗಳೂರು-ಬೆಳಗಾವಿ : 1,200 ರಿಂದ 1,500 ರೂ.

ಬೆಂಗಳೂರು-ರಾಯಚೂರು: 850 ರಿಂದ 1110 ರೂ.

ಹಬ್ಬದ ಹಿಂದಿನ ದಿನದ ದರ

ಬೆಂಗಳೂರು-ಮಂಗಳೂರು : 1,300 ರಿಂದ 2,500 ರೂ.

ಬೆಂಗಳೂರು-ಉಡುಪಿ: 1,500 ರಿಂದ 2,500 ರೂ.

ಬೆಂಗಳೂರು-ಬಳ್ಳಾರಿ: 1,000 ರಿಂದ 1,500 ರೂ.

ಬೆಂಗಳೂರು-ಬೆಳಗಾವಿ: 1600 ರಿಂದ 3,000 ರೂ.

ಬೆಂಗಳೂರು-ರಾಯಚೂರು: 850 ರಿಂದ 1,500 ರೂ.

ಇತ್ತ ಖಾಸಗಿ ಬಸ್‌ಗಳ ದರ ಏರಿಕೆ ವಿರುದ್ಧ ಆರ್‌ಟಿಓ ಅಧಿಕಾರಿಗಳು ಫೀಲ್ಡ್‌ಗಿಳಿದಿದ್ದು, ದುಪ್ಪಟ್ಟು ದರ ನಿಗಧಿ ಮಾಡಿರುವ ಕೆಲ ಬಸ್‌ ಮಾಲೀಕರಿಗೆ ಬಿಸಿ ಮುಟ್ಟಿಸಿದ್ದಾರೆ. ಇದರ ಮಧ್ಯೆ ಬಸ್‌ ಟಿಕೆಟ್‌ ದರ ಏರಿಕೆ ಬಗ್ಗೆ ಸಮರ್ಥನೆ ಕೊಟ್ಟಿರುವ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟದ ಅಧ್ಯಕ್ಷ ನಟರಾಜ್‌ ಶರ್ಮಾ, ಖಾಸಗಿ ಬಸ್‌ಗಳ ಟಿಕೆಟ್‌ ದರ ನಿಗಧಿ ಮಾಡುವ ಅಧಿಕಾರ ಸಾರಿಗೆ ಇಲಾಖೆಗೆ ಇಲ್ಲ, ಶಕ್ತಿ ಯೋಜನೆ ಬಳಿಕ ಹೊಡೆತ ಬಿದ್ದಿರೋದರಿಂದ ಹಬ್ಬ-ಹರಿ ದಿನಗಳಲ್ಲಿ ದರ ಏರಿಸದೇ ವಿಧಿಯಿಲ್ಲ ಎನ್ನುತ್ತಿದ್ದಾರೆ.

ಒಟ್ಟಿನಲ್ಲಿ ಒಂದು ಕಡೆ ಶಕ್ತಿಯೋಜನೆ ಮೂಲಕ ಫ್ರೀ ಬಸ್‌ ಇರುವ ಖುಷಿಯಲ್ಲಿ ಮಹಿಳೆಯರಿದ್ದರೆ, ಇತ್ತ ಹಬ್ಬಕ್ಕೆ ಊರಿಗೆ ಹೋಗುವ ಆತುರದಲ್ಲಿರುವ ಪುರುಷ ಪ್ರಯಾಣಿಕರು ಪ್ರೈವೇಟ್‌ ಬಸ್‌ ಏರಿದರೆ ಜೇಬು ನೋಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.

ಸದ್ಯ ಹಬ್ಬ ಇನ್ನೂ ಮೂರ್ನಾಲ್ಕು ದಿನ ಇರುವಾಗಲೇ ಖಾಸಗಿ ಬಸ್‌ಗಳ ಟಿಕೆಟ್‌ ದರದ ಬಿಸಿ ಏರುತ್ತಿದ್ದು, ಹಬ್ಬದ ಹಿಂದಿನ ದಿನ ಹಾಗೂ ಹಬ್ಬದ ದಿನ ಖಾಸಗಿ ಬಸ್‌ಗಳ ಟಿಕೆಟ್‌ ದರ ಎಲ್ಲಿಗೆ ಹೋಗಿ ಮುಟ್ಟುತ್ತದೆ ಎನ್ನುವುದನ್ನು ಕಾದುನೋಡಬೇಕಿದೆ.

 

Please follow and like us:

tmadmin

Leave a Reply

Your email address will not be published. Required fields are marked *

Next Post

ಆಂಧ್ರಪ್ರದೇಶ: ಜೀಪ್- ಲಾರಿ ನಡುವೆ ಅಪಘಾತ- ಐವರ ಸಾವು

Fri Sep 15 , 2023
ಅನ್ನಮಯ್ಯ(ಆಂಧ್ರಪ್ರದೇಶ): ಜೀಪ್ ಮತ್ತು ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ 5 ಮಂದಿ ಮೃತಪಟ್ಟು, 15ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯಲ್ಲಿ ಶುಕ್ರವಾರ ಬೆಳಗಿನ ಜಾವ ನಡೆದಿದೆ. ಮೃತರಲ್ಲಿ ಇಬ್ಬರು ಪುರುಷರು ಮತ್ತು ಮೂವರು ಮಹಿಳೆಯರು ಇದ್ದಾರೆ. ಗಾಯಗೊಂಡಿರುವವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ‘ಅಪಘಾತದಲ್ಲಿ ಒಟ್ಟು ಐದು ಜನರು ಸಾವಿಗೀಡಾಗಿದ್ದು, ಗಾಯಾಳುಗಳ ಪೈಕಿ ಏಳು ಮಂದಿಯ ಸ್ಥಿತಿ ಗಂಭೀರವಾಗಿದೆ. ಅವರನ್ನು ತಿರುಪತಿ ರೂವಾ ಆಸ್ಪತ್ರೆಗೆ […]

Advertisement

Wordpress Social Share Plugin powered by Ultimatelysocial