ಶಾಸಕಿ ಸ್ಥಾನಕ್ಕೆ ರಾಜೀನಾಮೆ ನೀಡಿದ ರಶ್ಮಿ ವರ್ಮಾ ಕಾರಣ ಪ್ರಶ್ನೆ ಪತ್ರಿಕೆ ಸೋರಿಕೆ ?

ನರ್ಕಾತಿಯಾಗಂಜ್‌ ಕ್ಷೇತ್ರದಿಂದ  ಬಿಹಾರದ ಶಾಸಕಿಯಾಗಿ ಆಯ್ಕೆಯಾಗಿರುವ ಬಿಜೆಪಿಯ ರಶ್ಮಿ ವರ್ಮಾ ಅವರು  ವಿಧಾನ ಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ, ವೈಯಕ್ತಿಕ ಕಾರಣಗಳಿಂದಾಗಿ ಈ ನಿರ್ಧಾರಕ್ಕೆ ಬಂದಿರುವುದಾಗಿ  ಹೇಳಿದ್ದಾರೆ

ತಮ್ಮ ರಾಜೀನಾಮೆ ಪತ್ರವನ್ನು ರಶ್ಮಿ  ಬಿಹಾರ ವಿಧಾನ ಸಭೆಯ ಸ್ಪೀಕರ್‌ ವಿಜಯ್ ಕುಮಾರ್‌ ಸಿನ್ಹಾರ ಕಚೇರಿಗೆ ಸಲ್ಲಿಸಿದ್ದಾರೆ.

ರಶ್ಮಿರ ರಾಜೀನಾಮೆಗೆ ಇನ್ನೂ ಅಂಗೀಕಾರ ಬಿದ್ದಿಲ್ಲ. ಕಾರಣ ವಿಡ್-ಕೋ19 ನಿರ್ಬಂಧಗಳಿಂದಾಗಿ ವಿಧಾನ ಸಭೆ ಮುಚ್ಚಲ್ಪಟ್ಟಿದೆ.

ಉತ್ತರ ಪ್ರದೇಶ ಶಿಕ್ಷಕರ ಅರ್ಹತಾ ಪರೀಕ್ಷೆ (ಯುಪಿಟಿಇಟಿ) ಪ್ರಶ್ನೆ ಪತ್ರಿಕೆಗಳ ಸೋರಿಕೆ ಹಗರಣದಲ್ಲಿ ರಶ್ಮಿ ಅವರ ಸಹೋದರ ರಾಯ್ ಅನೂಪ್ ಪ್ರಸಾದ್ ಹೆಸರು ಕೇಳಿ ಬಂದಿದೆ. ದೆಹಲಿಯಲ್ಲಿ ಪ್ರಸಾದ್‌ರನ್ನು ಉತ್ತರ ಪ್ರದೇಶದ ಎಸ್‌ಟಿಎಫ್ ಪೊಲೀಸರು ವಶಪಡಿಸಿಕೊಂಡಿದ್ದಾರೆ.

2020ರ ವಿಧಾನ ಸಭಾ ಚುನಾವಣೆಗೂ ಮುನ್ನ ಬಿಜೆಪಿ ಸೇರಿಕೊಂಡ ರಶ್ಮಿಗೆ ಪಶ್ಚಿಮ ಚಂಪರಣ ಜಿಲ್ಲೆಯ ನರ್ಕಾತಿಯಾಗಂಜ್‌ನಿಂದ ಟಿಕೆಟ್ ನೀಡಲಾಗಿತ್ತು. 2015 ರಲ್ಲಿ ಇದೇ ಕ್ಷೇತ್ರದಿಂದ ಟಿಕೆಟ್ ಸಿಗದೇ ವಂಚಿತರಾದ ಕಾರಣ ರಶ್ಮಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಇಳಿದರು . ಟಿಇಟಿ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ಬೆನ್ನಲೇ ರಶ್ಮಿರ ರಾಜೀನಾಮೆ ದೊಡ್ಡ ಕೊತುಹಲಕ್ಕೆ ಕಾರಣವಾಗಿದೆ..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

 

 

 

 

 

 

 

Please follow and like us:

Leave a Reply

Your email address will not be published. Required fields are marked *

Next Post

ಲೇಖಕಿ ಚಂಪಾ ನಿಧನಕ್ಕೆ ಸ್ಯಾಂಡಲ್ವುಡ್ ಇಂಡಸ್ಟ್ರಿ ಶೋಕ ವ್ಯಕ್ತಪಡಿಸಿದೆ;

Mon Jan 10 , 2022
ಕನ್ನಡದ ಖ್ಯಾತ ಲೇಖಕಿ ಚಂಪಾ ಅವರ ನಿಧನಕ್ಕೆ ಸ್ಯಾಂಡಲ್‌ವುಡ್ ಚಿತ್ರರಂಗದ ನಟರು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ಸೂಚಿಸಿದ್ದಾರೆ. ಚಂಪಾ ಎಂದೇ ಕರೆಯಲ್ಪಡುವ ಚಂದ್ರಶೇಖರ ಪಾಟೀಲ್ ವಯೋಸಹಜ ಅನಾರೋಗ್ಯದಿಂದ ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 82 ವರ್ಷ. ಚೇತನ್ ಅವರು ತಮ್ಮ ಟ್ವಿಟ್ಟರ್ ಪುಟದಲ್ಲಿ ಪೋಸ್ಟ್ ಮಾಡಿದ್ದಾರೆ, ನಾವು ಇಂದು ಪ್ರಗತಿಪರ ಬುದ್ಧಿಜೀವಿ ಮತ್ತು ಬರಹಗಾರ #ಚಂಪಾ ಸರ್ ಅವರನ್ನು ಕಳೆದುಕೊಂಡಿದ್ದೇವೆ, ಕಳೆದ 15 ವರ್ಷಗಳಿಂದ, ಹಲವಾರು ಸಂದರ್ಭಗಳಲ್ಲಿ […]

Advertisement

Wordpress Social Share Plugin powered by Ultimatelysocial