ಶತ್ರುಘ್ನ ಸಿನ್ಹಾ ಮಾಡಿದ ಮೋಸ ಗೊತ್ತಿದ್ದರೂ ಸೋನಾಕ್ಷಿ ತಾಯಿ ಮೌನವಾಗಿದ್ದು ಇದೇ ಕಾರಣಕ್ಕೆ.

 

ವದೆಹಲಿ: ಹಿಂದಿ ಚಿತ್ರರಂಗದ ಖ್ಯಾತ ನಟ ಶತ್ರುಘ್ನ ಸಿನ್ಹಾ ತಮ್ಮ ಅದ್ಭುತ ಅಭಿನಯಕ್ಕಾಗಿ ಮತ್ತು ವೈಯಕ್ತಿಕ ಜೀವನದಿಂದ ಅಂದು ಬಹಳ ಸುದ್ದಿಯಲ್ಲಿದ್ದರು. ವಿವಾಹವಾಗಿದ್ದರೂ ನಟಿ ರೀನಾ ರಾಯ್ ಜೊತೆ ಶತ್ರುಘ್ನ ಸಿನ್ಹಾ ಲವ್ ಅಫೇರ್ ಹೊಂದಿದ್ದರು.

ರೀನಾ ರಾಯ್ ಮತ್ತು ಶತ್ರುಘ್ನರ ಅಫೇರ್ ಒಂದು ಕಾಲದಲ್ಲಿ ನಟನ ಪತ್ನಿ ಪೂನಂ ಸಿನ್ಹಾಗೆ ದೊಡ್ಡ ತಲೆನೋವಾಗಿತ್ತು. ಆದರೆ ಇದನೆಲ್ಲಾ ಸಹಿಸಿಕೊಂಡಿದ್ದ ಆಕೆ ಗಂಡನ ವಿರುದ್ಧ ಒಂದು ಮಾತನ್ನೂ ಆಡಲಿಲ್ಲ.

ಪೂನಂ ಸಿನ್ಹಾ ರಾಜಿ ಮಾಡಿಕೊಳ್ಳುತ್ತಲೇ ಇದ್ದರು!

ಶತ್ರುಘ್ನ ಸಿನ್ಹಾಮತ್ತು ರೀನಾ ರಾಯ್ ಪ್ರೀತಿಯ ಕುರಿತಾದ ಚರ್ಚೆಗಳು ಇನ್ನೂ ಗಾಸಿಪ್ ಕಾರಿಡಾರ್‌ಗಳಲ್ಲಿವೆ. ಶತ್ರುಘ್ನ ಸಿನ್ಹಾ ಮತ್ತು ರೀನಾ ರಾಯ್ ನಡುವಿನ ಸಂಬಂಧದ ಬಗ್ಗೆ ಹೇಳುವುದಾದರೆ ನಟನ ಮದುವೆಗೆ ಮುಂಚೆಯೇ ಇಬ್ಬರೂ ಬೇರೆಯಾಗಿದ್ದರೆಂಬ ಗಾಳಿಸುದ್ದಿಗಳಿದ್ದವು. ಆದರೆ ಮನರಂಜನಾ ಲೋಕದ ಸುದ್ದಿ ನಂಬಬೇಕಾದರೆ ಶತ್ರುಘ್ನ ಸಿನ್ಹಾ ಮದುವೆ ನಂತರವೂ ಈ ಜೋಡಿ ಭೇಟಿಯಾಗುತ್ತಲೇ ಇತ್ತು. ಆದರೆ ರೀನಾ ಜೊತೆಗಿನ ಸಂಬಂಧದ ಬಗ್ಗೆ ಶತ್ರುಘ್ನ ಸಿನ್ಹಾ ಎಂದಿಗೂ ಮಾತನಾಡಿರಲಿಲ್ಲ. ಈ ಎಲ್ಲಾ ವಿಷಯಗಳನ್ನು ಬಹಿರಂಗಪಡಿಸಿದ್ದ ಪೂನಂ ಸಿನ್ಹಾ ತಮ್ಮ ಮಕ್ಕಳಿಗಾಗಿ ಇದನ್ನೆಲ್ಲಾ ಸಹಿಸಿಕೊಂಡಿದ್ದೇನೆಂದು ಒಮ್ಮೆ ಹೇಳಿದ್ದರು.

ರದಿಯ ಪ್ರಕಾರ ಪೂನಂ ಸಿನ್ಹಾ ಸಂದರ್ಶನವೊಂದರಲ್ಲಿ ಮಾತನಾಡಿ, ‘ಸತ್ಯ ಹೇಳಬೇಕೆಂದರೆ ನಾನು ನನ್ನ ಗಂಡನ ಮತ್ತು ನಟಿ ರಿನಾ ನಡುವಿನ ಸಂಬಂಧದಲ್ಲಿ ಎಂದಿಗೂ ಮಧ್ಯಪ್ರವೇಶಿಸಲಿಲ್ಲ. ಈ ವಿಚಾರದಲ್ಲಿ ನಾನು ರೀನಾ ರಾಯ್‌ಗೆ ಒಂದು ರೀತಿ ಮುಕ್ತ ಸ್ವಾತಂತ್ರ್ಯ ನೀಡಿದ್ದೆ. ಶತ್ರುಘ್ನ ಇಂತಹ ಹುಡುಗಿಯನ್ನು ಮದುವೆಯಾಗುವುದಿಲ್ಲವೆಂದು ನನಗೆ ಖಚಿತವಾಗಿತ್ತು, ಮದುವೆಯ ಬಳಿಕ ಅವರ ಹಳೆಯ ಪ್ರೇಮಪುರಾಣಮತ್ತೆ ಮತ್ತೆ ಸುದ್ದಿಯಾಗುತ್ತಿತ್ತು. ಇದಕ್ಕೆಲ್ಲಾ ನಾನು ತಲೆಕೆಡಿಸಿಕೊಂಡಿರಲಿಲ್ಲ’ವೆಂದು ಹೇಳಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚಿಂದೋಡಿ ಲೀಲಾ ಕನ್ನಡದ ಮಹಾನ್ ರಂಗಕಲಾವಿದೆ.

Sun Jan 22 , 2023
ತನ್ನ ಏಳನೆ ವಯಸ್ಸಿನಲ್ಲೇ ರಂಗಪ್ರವೇಶಿಸಿದ ಚಿಂದೋಡಿ ಲೀಲಾ ಅವರು ಸಾಧಿಸಿದ ಪರಿ ಅನನ್ಯವಾದದ್ದು. ಚಿಂದೋಡಿ ಲೀಲಾ ಅವರು ತಮ್ಮ ತಂದೆಯವರಾದ ಚಿಂದೋಡಿ ವೀರಪ್ಪನವರು ಸ್ಥಾಪಿಸಿದ್ದ ಕರಿಬಸವರಾಜೇಂದ್ರ ನಾಟಕ ಮಂಡಳಿಯನ್ನು ನಿರಂತರವಾಗಿ ಯಶಸ್ಸಿನಲ್ಲಿ ಮುನ್ನಡೆಸಿ ತಮ್ಮ ನಿಧನಕ್ಕೆ ಕೆಲ ವರ್ಷಗಳ ಹಿಂದೆ, ಅಂದಿನ ರಾಷ್ಟ್ರಪತಿಗಳಾದ ನಾಡಿನ ಹೆಮ್ಮೆಯ ಪುತ್ರ ಅಬ್ದುಲ್ ಕಲಂ ಅವರ ಸಮ್ಮುಖದಲ್ಲಿ ಎಂಭತ್ತನೇ ವಾರ್ಷಿಕೋತ್ಸವ ನಡೆಸಿ ತಮ್ಮ ಸಂಸ್ಥೆಯಲ್ಲಿ ತನ್ನೊಡನೆ ದುಡಿದ ಪ್ರತಿ ಕಲಾವಿದನನ್ನೂ ಗೌರವಿಸಿದ ಔನ್ನತ್ಯ ಮೆರೆದಿದ್ದರು. […]

Advertisement

Wordpress Social Share Plugin powered by Ultimatelysocial