ಬ್ಯಾಂಕ್ ಗಳಲ್ಲಿ ವಾರಕ್ಕೆ ಐದೇ ದಿನ ಕೆಲಸ: 2 ದಿನ ರಜೆ; ಉದ್ಯೋಗಿಗಳ ಬೇಡಿಕೆಗೆ ಐಬಿಎ ಒಪ್ಪಿಗೆ

ವದೆಹಲಿ: ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ವಾರಕ್ಕೆ ಐದು ದಿನ ಮಾತ್ರ ಕಾರ್ಯನಿರ್ವಹಿಸಿ ಎರಡು ದಿನ ರಜೆ ನೀಡಬೇಕೆಂಬ ಉದ್ಯೋಗಿಗಳ ಬೇಡಿಕೆಗೆ ಭಾರತೀಯ ಬ್ಯಾಂಕ್ಸ್ ಅಸೋಸಿಯೇಷನ್(ಐಬಿಎ) ತಾತ್ವಿಕ ಒಪ್ಪಿಗೆ ನೀಡಿದೆ. ಇದಕ್ಕೆ ಕೇಂದ್ರ ಸರ್ಕಾರ ಕೂಡ ಒಪ್ಪಿದಲ್ಲಿ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ.

ಖಾಸಗಿ ಕಂಪನಿಗಳಲ್ಲಿ ವಾರಕ್ಕೆ 5 ದಿನಕ್ಕೆ ವೀಕೆಂಡ್ ರಜೆ ಇರುವಂತೆ ಬ್ಯಾಂಕಿಂಗ್ ವಲಯದಲ್ಲಿಯೂ ವಾರಕ್ಕೆ ಐದು ದಿನ ಕೆಲಸ, ಎರಡು ದಿನ ರಜೆ ನೀಡಬೇಕೆಂಬ ಬೇಡಿಕೆ ಬ್ಯಾಂಕ್ ಉದ್ಯೋಗಿಗಳ ಸಂಘಟನೆ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಎಂಪ್ಲಾಯಿಸ್ ನಿಂದ ಕೇಳಿ ಬಂದಿದ್ದು, ಈ ಪ್ರಸ್ತಾಪಕ್ಕೆ ಭಾರತೀಯ ಬ್ಯಾಂಕ್ ಅಸೋಸಿಯೇಷನ್ ಒಪ್ಪಿಗೆ ನೀಡಿದೆ.

ನೆಗೋಷಿಯಬಲ್ ಇನ್ಸ್ಟ್ರುಮೆಂಟ್ ಆಕ್ಟ್ 25ನೇ ವಿಧಿ ಅನ್ವಯ ಇದನ್ನು ಸರ್ಕಾರ ಜಾರಿಗೊಳಿಸಬೇಕಿದೆ. ಬ್ಯಾಂಕ್ ಉದ್ಯೋಗಿಗಳಿಗೆ ನಾಲ್ಕು ಭಾನುವಾರದ ಜೊತೆಗೆ ಎರಡು ಮತ್ತು ನಾಲ್ಕನೇ ಶನಿವಾರ ರಜೆ ಇದೆ. ಇದರ ಬದಲಿಗೆ ಕೆಲಸದ ಅವಧಿಯನ್ನು 50 ನಿಮಿಷ ಹೆಚ್ಚಳ ಮಾಡಿ ವಾರಕ್ಕೆ ಐದು ದಿನ ಕೆಲಸ, ಶನಿವಾರ ಮತ್ತು ಭಾನುವಾರ ರಜೆ ನೀಡಲಾಗುವುದು ಎನ್ನಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ವಿಜಯ್ - ತ್ರಿಷಾ ಪ್ರೇಮ ಪ್ರಕರಣ..!

Thu Mar 2 , 2023
ತಮಿಳು ಚಿತ್ರರಂಗದ ಟಾಪ್ ಸ್ಟಾರ್ ವಿಜಯ್ ಮತ್ತು ನಾಯಕಿ ನಟಿ ತ್ರಿಷಾ ಅವರ ಸುತ್ತ ಸಾಕಷ್ಟು ಗಾಸಿಪ್‌ಗಳು ಸುತ್ತುವರೆದಿವೆ. ಇವರಿಬ್ಬರ ಬಗ್ಗೆ ರೂಮರ್ಸ್‌ ಶುರುವಾಗಿದ್ದು 2005ರ ಗಿಲ್ಲಿ ಸಿನಿಮಾದಲ್ಲಿ. ನಂತರ 2008 ರಲ್ಲಿ ಕುರುವಿಯಲ್ಲಿ ಒಟ್ಟಿಗೆ ನಟಿಸಿದಾಗ, ಇಬ್ಬರ ಸಂಬಂಧದ ಕುರಿತು ಗುಸುಗುಸು ಮಾತು ಶುರುವಾಗಿದ್ದವು. ಕೆಲವು ಸಂದರ್ಶನಗಳಲ್ಲಿ ವಿಜಯ್ ಜೊತೆಗಿನ ಸಂಬಂಧದ ಬಗ್ಗೆ ಸ್ವತಃ ತ್ರಿಷಾ ಅವರೇ ಬಹಿರಂಗವಾಗಿ ಹೇಳಿದ್ದರು. ತಾವಿಬ್ಬರೂ ಒಳ್ಳೆಯ ಸ್ನೇಹಿತರು ಎಂದು ಉತ್ತರಿಸಿದರು. ಆದರೆ […]

Advertisement

Wordpress Social Share Plugin powered by Ultimatelysocial