ಬ್ಯಾಂಕ್ ಲಾಕರ್ ನಲ್ಲಿ ೮೫ ಲಕ್ಷ ಮೌಲ್ಯದ ಚಿನ್ನಭರಣ ಕಳವು

ಬೆಂಗಳೂರಿನ ಜಯನಗರದಲ್ಲಿರುವ ಬ್ಯಾಂಕ್ ಆಫ್ ಬರೋಡದ ಬ್ಯಾಂಕ್ ಲಾಕರ್ ನಲ್ಲಿ 85 ಲಕ್ಷ ಮೌಲ್ಯದ ಚಿನ್ನಭರಣ ಕಳವು ಆಗಿದೆ. ಶಿವಪ್ರಸಾದ್ ಎಂಬುವವರು ಬ್ಯಾಂಕ್ ಲಾಕರ್ ನಲ್ಲಿ 1.73 ಕೆಜಿ ಚಿನ್ನಭರಣ ಇಟ್ಟಿದ್ರು ಕಳೆದ ಫೆಬ್ರವರಿಯಲ್ಲಿ ತಮ್ಮ  ಬ್ಯಾಂಕ್ ಲಾಕರ್ ನಂ 24 ರಲ್ಲಿ ಚಿನ್ನಭರಣ ಇಟ್ಟಿದ್ರು ಜುಲೈ 22 ರಂದು ಬ್ಯಾಂಕ್ ಲಾಕರ್ ಓಪನ್ ಮಾಡಿದಾಗ ಚಿನ್ನಭರಣ ಕಳವು ಆಗಿರುವುದು ತಿಳಿದು ಬಂದಿದೆ. ಮತ್ತು ಬ್ಯಾಂಕ್ ಎಂಪ್ಲಾಯ್ಸ್ ವಿರುದ್ದ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಸಂಬಧಿಸಿದಂತೆ ಪೊಲೀಸರು ಸಿಸಿ ಕ್ಯಾಮರ ಆಧಾರಿಸಿ ತನಿಖೆ ಶುರು ಮಾಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಹಣವಿದ್ದ ಪರ್ಸ್ ಮರಳಿಸಿದ ಬಾಲಕಿ

Sun Aug 2 , 2020
ಹೊನ್ನಾವರ ಪಟ್ಟಣದ ಪ್ರಭಾತನಗರದ ರಸ್ತೆಯಲ್ಲಿ ಬಿದ್ದಿದ್ದ ೨೨ಸಾವಿರ ರೂ. ತುಂಬಿದ್ದ ಪರ್ಸ್ಅನ್ನು ಬಾಲಕಿಯೊಬ್ಬಳು ವಾರಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಘಟನೆ ನಡೆದಿದೆ. ಪರ್ಸನಲ್ಲಿದ್ದ ಗುರುತಿನ ಚೀಟಿ ಮತ್ತಿತರ ದಾಖಲೆ ಪರಿಶೀಲಿಸಿದಾಗ ಹೊನ್ನಾವರ ಅರ್ಬನ್ ಬ್ಯಾಂಕಿನಲ್ಲಿ ಕಾರ್ಯನಿರ್ವಹಿಸುವ ನರಸ ಮಂಜು ಗೌಡ ಅವರದು ಎಂಬುದು ಗೊತ್ತಾಗಿದೆ. ಅವರನ್ನು ಸಂಪರ್ಕಿಸಿ ಖಚಿತ ಪಡಿಸಿಕೊಂಡು ಹಣವನ್ನು ಮರಳಿಸಿದ್ದಾರೆ. ಬಾಲಕಿ ಮತ್ತು ಅವಳ ತಂದೆಯ ಪ್ರಾಮಾಣಿಕತೆಗೆ ಕೃತಜ್ಞತೆ ವ್ಯಕ್ತವಾಗಿದೆ. Please follow and like us:

Advertisement

Wordpress Social Share Plugin powered by Ultimatelysocial