ಏರ್‌ಬ್ಯಾಗ್‌ಗಳಲ್ಲಿ ದೋಷ .

ವದೆಹಲಿ,ಜ.18- ಮಾರುತಿ ಕಾರುಗಳ ಏರ್‌ಬ್ಯಾಗ್‌ಗಳಲ್ಲಿ ದೋಷ ಕಂಡುಬಂದಿರುವ ಹಿನ್ನಲೆಯಲ್ಲಿ ಮಾರುತಿ ಸುಜುಕಿ ಸಂಸ್ಥೆ ಗ್ರಾಹಕರಿಂದ 17,362 ವಾಹನಗಳನ್ನು ವಾಪಸ್ ಪಡೆದುಕೊಳ್ಳಲು ತೀರ್ಮಾನಿಸಿದೆ.

ಆಲ್ಟೋ, ಬ್ರೆಜ್ಜಾ ಮತ್ತು ಬಲೇನೋ ಕಾರುಗಳ ಏರ್ ಬ್ಯಾಗ್‍ಗಳಲ್ಲಿ ದೋಷ ಕಂಡು ಬಂದಿರುವುದರಿಂದ ಏರ್ ಬ್ಯಾಗ್ ನಿಯಂತ್ರಕವನ್ನು ಸರಿಪಡಿಸುವ ಉದ್ದೇಶದಿಂದ ಇಂತಹ ನಿರ್ಧಾರಕ್ಕೆ ಬರಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಕಳೆದ ಡಿಸಂಬರ್ 8ರಿಂದ ಜನವರಿ 12ರ ನಡುವೆ ತಯಾರಿಸಲಾಗಿರುವ ಅಲ್ಟೋ ಕೆ10, ಎಸ್‍ಪ್ರೆಸ್ಸೋ, ಇಕೋ, ಬ್ರೆಜ್ಜಾ, ಬಲೆನೋ, ಗ್ರಾಂಡ್ ವಿಟಾರಾ ಕಾರುಗಳ ಏರ್‌ಬ್ಯಾಗ್‌ಗಳಲ್ಲಿ ದೋಷ ಕಂಡುಬಂದಿದೆ.

ಈ ಮಾಡಲ್ ಕಾರುಗಳನ್ನು ಖರೀದಿಸಿರುವ ಗ್ರಾಹಕರು ಉಚಿತವಾಗಿ ಏರ್‌ಬ್ಯಾಗ್‌ ನಿಯಂತ್ರಕಗಳನ್ನು ಪರಿಶೀಲಿಸಿಕೊಳ್ಳಬಹುದು ಇಲ್ಲವೆ ವಾಹನಗಳನ್ನು ಬದಲಾಯಿಸಿಕೊಳ್ಳಬಹುದಾಗಿದೆ.

ವಾಹನ ಅಪಘಾತದ ಸಂದರ್ಭದಲ್ಲಿ ಏರ್‌ಬ್ಯಾಗ್‌ಗಳಲ್ಲಿ ಮತ್ತು ಸೀಟ್ ಬೆಲ್ಟ ಪ್ರಿಟೆನ್ಷನರ್‍ಗಳನ್ನು ನಿಯೋಜಿಸದೇ ದೋಷಕ್ಕೆ ಕಾರಣವಾಗಬಹುದು ಎಂದು ಸಂಸ್ಥೆ ತಿಳಿಸಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೆಸರಿಗೆ ಎನ್ ಜಿಒ ಮಾಡುತ್ತಿರುವ ಕೆಲಸವೇನು?

Wed Jan 18 , 2023
ಹಣಕಾಸು ಅನುದಾನಗಳ ಅಕ್ರಮ ತಿರುವು ಹಾಗೂ ತಮ್ಮ ಘೋಷಿತ ವ್ಯಾಪ್ತಿಯನ್ನು ಮೀರಿದ ಚಟುವಟಿಕೆಗಳಲ್ಲಿ ತೊಡಗಿರುವ ಹಲವಾರು ಎನ್ಜಿಒಗಳ(NGO) ಚಲನವಲನಗಳು, ಚಟುವಟಿಕೆಗಳ ಮೇಲೆ ನಿಗಾ ಇಡಲು ಶಾಸನಬದ್ಧ ಸಂಸ್ಥೆಯನ್ನು ಸ್ಥಾಪಿಸಲು ಸರ್ಕಾರ ಮುಂದಾಗಿದೆ. ನವದೆಹಲಿ: ಹಣಕಾಸು ಅನುದಾನಗಳ ಅಕ್ರಮ ತಿರುವು ಹಾಗೂ ತಮ್ಮ ಘೋಷಿತ ವ್ಯಾಪ್ತಿಯನ್ನು ಮೀರಿದ ಚಟುವಟಿಕೆಗಳಲ್ಲಿ ತೊಡಗಿರುವ ಹಲವಾರು ಎನ್ಜಿಒಗಳ(NGO) ಚಲನವಲನಗಳು, ಚಟುವಟಿಕೆಗಳ ಮೇಲೆ ನಿಗಾ ಇಡಲು ಶಾಸನಬದ್ಧ ಸಂಸ್ಥೆಯನ್ನು ಸ್ಥಾಪಿಸಲು ಸರ್ಕಾರ ಮುಂದಾಗಿದೆ. ಮೂಲಗಳ ಪ್ರಕಾರ ಸರ್ಕಾರವು […]

Advertisement

Wordpress Social Share Plugin powered by Ultimatelysocial