ಬ್ರಿಮ್ಸ್ ಆಸ್ಪತ್ರೆ ಅವ್ಯವಸ್ಥೆಗೆ ಸದ್ಯದಲ್ಲೇ ಕಡಿವಾಣ

ಬ್ರಿಮ್ಸ್ ಆಸ್ಪತ್ರೆ ಅವ್ಯವಸ್ಥೆಗೆ ಲಗಾಮು ಹಾಕಲಿದ್ದೇವೆ ಎಂದು ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾರೆ. ಬೀದರ್‌ನಲ್ಲಿ ಮಾತನಾಡಿದ ಅವರು, ಬ್ರಿಮ್ಸ್ ಆಸ್ಪತ್ರೆ ಅವ್ಯವಸ್ಥೆ ನೋಡಿ ನಮಗೆ ಸಾಕಾಗಿ ಹೋಗಿದೆ ಎಂದು ಅಸಮಾಧಾನ ಹೊರಹಾಕಿದ ಶಾಸಕರಿಗೆ ಎಲ್ಲವೂ ಸರಿ ಮಾಡುವ ಭರವಸೆ ನೀಡಿದರು. ಬ್ರಿಮ್ಸ್ನಲ್ಲಿ ೭೧ ಗ್ರೂಪ್ ಎ, ೧ ಗ್ರೂಪ್ ಬಿ, ೧೩೫ ಗ್ರೂಪ್ ಸಿ, ೮೨ ಗ್ರೂಪ್ ಡಿ ಸೇರಿ ೨೮೯ ಹುದ್ದೆಗಳು ಇವೆ. ಇಲ್ಲಿನ ಬೋಧಕ ಆಸ್ಪತ್ರೆಯಲ್ಲಿ ಗ್ರೂಪ್ ಎ ೧೨, ಗ್ರೂಪ್ ಬಿ ೨, ಗ್ರೂಪ್ ಸಿ ೭೧ ಮತ್ತು ಗ್ರೂಪ್ ಡಿ ೧೫ ಸೇರಿ ೧೦೦ ಹುದ್ದೆಗಳು ಸೇರಿ ಒಟ್ಟು ೩೮೯ ಹುದ್ದೆಗಳು ಖಾಲಿ ಇವೆ. ಇವನ್ನು ಕೂಡಲೇ ಭರ್ತಿ ಮಾಡಿ. ಬ್ರಿಮ್ಸ್ನಲ್ಲಿ ಇದುವರೆಗೆ ಖಾಲಿ ಇರುವ ೫ ಪ್ರೊಪೆಸರ್, ೩ ಅಸೋಸಿಯೇಟ್ ಪ್ರೊಪೆಸರ್ ಮತ್ತು ೮ ಅಸಿಸ್ಟಂಟ್ ಪ್ರೊಪೇಸರ್‌ಗಳ ಹುದ್ದೆಗಳ ನೇಮಕಾತಿ ನಡೆಯುವ ಪ್ರಕ್ರಿಯೆ ಶೀಘ್ರ ಆರಂಭವಾಗಬೇಕು ಎಂದು ಸಚಿವರು ನಿರ್ದೇಶನ ನೀಡಿದರು. ೧೩ ವರ್ಷದ ಈ ಕಾಲೇಜಿಗೆ ಇದುವರೆಗೆ ಆಡಾಳಿತಾಧಿಕಾರಿ ಇಲ್ಲವೆಂದರೆ ಹೇಗೆ? ಒಟ್ಟು ಮಂಜೂರಾದ ೧೦೮೫ ಹುದ್ದೆಗಳ ಪೈಕಿ ಇದುವರೆಗೆ ೩೮೯ ಹುದ್ದೆಗಳು ಭರ್ತಿಯೇ ಆಗಿಲ್ಲ ಅಂದರೆ ಹೇಗೆ? ಎಂದು ಪ್ರಶ್ನಿಸಿದರು.

Please follow and like us:

Leave a Reply

Your email address will not be published. Required fields are marked *

Next Post

ಕತ್ತಿಯಿಂದ ಕಡಿದು ತಂದೆ ಕೊಲೆ

Mon Jun 15 , 2020
ಸೀಯಾಳದ ವಿಚಾರದಲ್ಲಿ ಉಂಟಾದ ಮನಸ್ತಾಪದಿಂದ ಮಕ್ಕಳೇ ತಂದೆಯನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸಮೀಪದ ಕರಾಯ ಗ್ರಾಮದ ಮುಗ್ಗದ ಆನೆಪಲ್ಲನಲ್ಲಿ ನಡೆದಿದೆ. ಧರ್ನಪ್ಪ ಪೂಜಾರಿ (೬೫) ಕೊಲೆಯಾದ ವ್ಯಕ್ತಿ. ಇವರನ್ನು ಮಕ್ಕಳಾದ ಮೋನಪ್ಪ ಹಾಗೂ ನವೀನ ಎಂಬವರು ಕತ್ತಿಯಿಂದ ಕಡಿದು ಕೊಲೆ ಮಾಡಿದ್ದಾರೆನ್ನಲಾಗಿದ್ದು, ಆರೋಪಿಗಳನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ. ಧರ್ನಪ್ಪ ಪೂಜಾರಿ ಮನೆಯಲ್ಲಿದ್ದ ತೆಂಗಿನ ಮರದಿಂದ ತೆಂಗಿನಕಾಯಿ, ಸೀಯಾಳಗಳನ್ನು ತೆಗೆದು ಮಾರಾಟ ಮಾಡುತ್ತಿದ್ದು, ಇದೇ […]

Advertisement

Wordpress Social Share Plugin powered by Ultimatelysocial