ಭಾರತದ ಗಡಿಯಲ್ಲಿ ನಿಲ್ಲದ ಉಪಟಳ

ಕಿಶನ್ಗಂಜ್: ಗಡಿಭಾಗದಲ್ಲಿ ಪಾಕಿಸ್ತಾನ, ಚೀನೀಯರಷ್ಟೇ ಅಲ್ಲ, ನೇಪಾಳದವರೂ ಗುಂಡು ಹಾರಿಸೋದಕ್ಕೆ ಶುರುಮಾಡಿದ್ರು! ಬಿಹಾರದ ಕಿಶನ್ಗಂಜ್ ಪ್ರದೇಶದಲ್ಲಿರುವ ಭಾರತ- ನೇಪಾಳದ ಗಡಿಯಲ್ಲಿ ನೇಪಾಳ ಪೊಲೀಸರು ಮೂವರು ಭಾರತೀಯರ ಮೇಲೆ ಗುಂಡು ಹಾರಿಸಿದ ಪರಿಣಾಮ ಒಬ್ಬ ಗಾಯಗೊಂಡಿದ್ದಾನೆ. ಉಭಯ ದೇಶಗಳ ನಡುವೆ ಸಂಬAಧ ಅಷ್ಟೇನೂ ಹಿತವಲ್ಲದೇ ಇರುವ ಈ ಸಂದರ್ಭದಲ್ಲೂ ನೇಪಾಳ ಪೊಲೀಸರು ಈ ರೀತಿ ಸಾಹಸಕ್ಕೆ ಕೈ ಹಾಕಿರುವುದು ಈಗ ಎಲ್ಲರ ಹುಬ್ಬೇರಿಸಿದೆ. ಕಿಶನ್ಗಂ ಮಾಫಿ ತೋಲಾ ಎಂಬಲ್ಲಿ ಈ ಘಟನೆ ನಡೆದಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಮೂವರು ಸ್ಥಳೀಯರಾಗಿದ್ದು ಕಳೆದು ಹೋಗಿದ್ದ ಹಸುವನ್ನು ಹುಡುಕುತ್ತ ಗಡಿ ಭಾಗಕ್ಕೆ ಹೋಗಿದ್ದರು. ಆಗ ನೇಪಾಳ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯ ಮಾಹಿತಿ ಸಿಕ್ಕ ಕೂಡಲೇ ಸೀಮಾ ಸುರಕ್ಷಾ ಬಲದ ಯೋಧರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ಹದಗೆಡದಂತೆ ನೋಡಿಕೊಂಡಿದ್ದಾರೆ. ಭಾರತ ಮತ್ತು ನೇಪಾಳ ಗಡಿ ಕರೊನಾ ವೈರಸ್ ಕಾರಣಕ್ಕೆ ಈಗಾಗಲೇ ಬಂದ್ ಆಗಿದ್ದು, ಯಾರೂ ಗಡಿ ದಾಟಿ ಹೋಗಿಲ್ಲ. ಆದರೂ ಈ ದಾಳಿ ಯಾಕೆ ನಡೆಯಿತು ಎಂಬ ಬಗ್ಗೆ ತನಿಖೆ ಶುರುವಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಕೆಪಿಸಿಸಿ ಕಾರ್ಯಧ್ಯಕ್ಷ ಸಲೀಂ ಅಹ್ಮದ್ ಗರಂ

Mon Jul 20 , 2020
ಕೆಪಿಸಿಸಿ ಕಾರ್ಯಧ್ಯಕ್ಷ ಸಲೀಂ ಅಹ್ಮದ್ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.ಕೊರೊನಾ ಸೋಂಕು ರಾಜ್ಯದಲ್ಲಿ ದೀನೆ ದೀನೆ ವ್ಯಾಪಕವಾಗಿ ಹಬ್ಬುತ್ತಿದೆ ರಾಜ್ಯ ಸರ್ಕಾರದ ಯಾವುದೇ ಕ್ರಮಗಳು ಸೋಂಕು ತಡೆಯವಲ್ಲಿ ಪರಿಣಾಮಕಾರಿ ಕೆಲಸ ಮಾಡುತ್ತಿಲ್ಲ. ರಾಜ್ಯದಲ್ಲಿ ಬೆಡ್ ಕೊರತೆ ಕಾಣುತ್ತಲೆ ಇದೆ. ಶಿಘ್ರವಾಗಿ ಇದರ ಕೊರತೆ ನೀಗಿಸಲು ರಾಜ್ಯ ಸರ್ಕಾರದ ಕ್ರಮ ಅಷ್ಟು ಪರಿಣಾಮಕಾರಿ ಕಾರ್ಯ ರೂಪಕ್ಕೆ ಬಂದಿಲ್ಲ. ತಮಿಳುನಾಡಿನ ಸರ್ಕಾರ ೪ಲಕ್ಷ ೮೦ಸಾವಿರಕ್ಕೆ ಖರೀದಿಸಿದೆ ವೆಂಟಿಲೇಟರ್ ಖರೀದಿ ಮಾಡಿದೆ. […]

Advertisement

Wordpress Social Share Plugin powered by Ultimatelysocial