ಭಾರತದ G20 ಅಧ್ಯಕ್ಷತೆ ಎಲ್ಲವನ್ನೂ ಒಳಗೊಳ್ಳುವ, ನಿರ್ಣಾಯಕ ಮತ್ತು ಕಾರ್ಯ-ಆಧಾರಿತ: ಪ್ರಧಾನಿ ಮೋದಿ

 

ಇಂದು ಶನಿವಾರ ದೆಹಲಿಯ ಪ್ರಗತಿ ಮೈದಾನದಲ್ಲಿ ಭಾರತ್ ಮಂಟಪ್ ವೇದಿಕೆಯಲ್ಲಿ ಜಿ20 ಶೃಂಗಸಭೆ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸಭೆ ಆರಂಭಕ್ಕೆ ಮುನ್ನ,G 20 ‘ಮಾನವ-ಕೇಂದ್ರಿತ’ ಮತ್ತು ಅಂತರ್ಗತ ಅಭಿವೃದ್ಧಿಯತ್ತ ಹೊಸ ಮಾರ್ಗವನ್ನು ರೂಪಿಸಲಿದೆ ಎಂದು ಹೇಳಿದ್ದಾರೆ. ನವ ದೆಹಲಿ: ಇಂದು ಶನಿವಾರ ದೆಹಲಿಯ ಪ್ರಗತಿ ಮೈದಾನದಲ್ಲಿ ಭಾರತ್ ಮಂಟಪ್ ವೇದಿಕೆಯಲ್ಲಿ ಜಿ20 ಶೃಂಗಸಭೆ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸಭೆ ಆರಂಭಕ್ಕೆ ಮುನ್ನ,G 20 ‘ಮಾನವ-ಕೇಂದ್ರಿತ’ ಮತ್ತು ಅಂತರ್ಗತ ಅಭಿವೃದ್ಧಿಯತ್ತ ಹೊಸ ಮಾರ್ಗವನ್ನು ರೂಪಿಸಲಿದೆ ಎಂದು ಹೇಳಿದ್ದಾರೆ.
ಕಳೆದ ರಾತ್ರಿ ದ್ವಿಪಕ್ಷೀಯ ಚರ್ಚೆಗಾಗಿ ಯುಎಸ್ ಅಧ್ಯಕ್ಷರು ಮತ್ತು ಇತರ ವಿದೇಶಿ ಗಣ್ಯರೊಂದಿಗಿನ ಭೇಟಿಗೆ ಕೆಲವೇ ಗಂಟೆಗಳ ಮೊದಲು, ಮೋದಿ ಅವರು ‘ಒಂದು ಭೂಮಿ, ಒಂದು ಕುಟುಂಬ’ ಮತ್ತು ‘ಒಂದು ಭವಿಷ್ಯ’ ಕುರಿತು ವ್ಯಾಪಕ ಶ್ರೇಣಿಯ ವಿಷಯಗಳನ್ನು ಒಳಗೊಂಡ ಇಂದಿನ ಅಧಿವೇಶನಗಳ ಅಧ್ಯಕ್ಷತೆ ವಹಿಸಲಿದ್ದೇನೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ನಿನ್ನೆ ಅಪರಾಹ್ನ ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಅವರು ಭಾರತ ಸಂಜಾತೆ ಪತ್ನಿ ಅಕ್ಷತಾ ಸುನಕ್ ಅವರೊಂದಿಗೆ ಆಗಮಿಸಿದ ಸ್ವಲ್ಪ ಸಮಯದ ನಂತರ, ಮೋದಿ ಅವರು ಉತ್ತಮ ಗ್ರಹದ ಕಡೆಗೆ ಸಹಕಾರದಿಂದ ಕೆಲಸ ಮಾಡಲು ಫಲಪ್ರದ ಶೃಂಗಸಭೆಯ ನಿರೀಕ್ಷೆಯನ್ನು ಹೊಂದಿದ್ದೇನೆ ಎಂದು ಹೇಳಿದ್ದರು. ತರುವಾಯ ಅವರು, ಭಾರತವು ಸೆಪ್ಟೆಂಬರ್ 9 ರಂದು ದೆಹಲಿಯ ಭಾರತ್ ಮಂಟಪದಲ್ಲಿ 18ನೇ G20 ಶೃಂಗಸಭೆಯನ್ನು ಆಯೋಜಿಸಲು ಸಂತೋಷವಾಗಿದೆ. ಇದು ಭಾರತ ಆಯೋಜಿಸಿದ ಮೊದಲ G20 ಶೃಂಗಸಭೆಯಾಗಿದೆ.

ಮುಂದಿನ ಎರಡು ದಿನಗಳಲ್ಲಿ ವಿಶ್ವ ನಾಯಕರೊಂದಿಗೆ ಫಲಪ್ರದ ಚರ್ಚೆಗಳನ್ನು ನಾನು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದರು. ಮಹಾತ್ಮ ಗಾಂಧಿಯವರ ಧ್ಯೇಯೋದ್ದೇಶಗಳನ್ನು ಉಲ್ಲೇಖಿಸಿದ ಪ್ರಧಾನಿ, ಭಾರತವು ಪ್ರಗತಿಗೆ ಮಾನವ ಕೇಂದ್ರಿತ ವಿಧಾನಕ್ಕೆ ಹೆಚ್ಚಿನ ಒತ್ತು ನೀಡುತ್ತದೆ. ಹಿಂದುಳಿದವರಿಗೆ ಸೇವೆ ಸಲ್ಲಿಸುವ ಗಾಂಧಿಯವರ ಧ್ಯೇಯವನ್ನು ಅನುಕರಿಸುವುದು ಅತ್ಯಾವಶ್ಯಕವಾಗಿದೆ. ಶೃಂಗಸಭೆಯಲ್ಲಿ ಬಲವಾದ, ಸುಸ್ಥಿರ, ಅಂತರ್ಗತ ಮತ್ತು ಸಮತೋಲಿತ ಬೆಳವಣಿಗೆಯನ್ನು ಉತ್ತೇಜಿಸುವುದು ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆಗಳ ನಡೆಯಲಿವೆ ಎಂದಿದ್ದಾರೆ. “ಸುಸ್ಥಿರ ಅಭಿವೃದ್ಧಿ ಗುರಿಗಳು, ಸುಸ್ಥಿರ ಭವಿಷ್ಯಕ್ಕಾಗಿ ಹಸಿರು ಅಭಿವೃದ್ಧಿ ಒಪ್ಪಂದ ಮತ್ತು 21 ನೇ ಶತಮಾನಕ್ಕೆ ಬಹುಪಕ್ಷೀಯ ಸಂಸ್ಥೆಗಳನ್ನು ಬಲಪಡಿಸುವತ್ತ ಪ್ರಗತಿಯನ್ನು ವೇಗಗೊಳಿಸುವ ಗುರಿ ಹೊಂದಿದ್ದೇವೆ” ಎಂದು ಪ್ರಧಾನಮಂತ್ರಿ ಹೇಳಿದ್ದಾರೆ. ಒಟ್ಟಾರೆಯಾಗಿ, ಲಿಂಗ ಸಮಾನತೆ, ಮಹಿಳೆಯರ ಸಬಲೀಕರಣವನ್ನು ಹೆಚ್ಚಿಸಲು, ವಿಶ್ವ ಶಾಂತಿಗಾಗಿ ನಾವು ಕೆಲಸ ಮಾಡುತ್ತೇವೆ ಎಂದಿದ್ದಾರೆ.

Please follow and like us:

tmadmin

Leave a Reply

Your email address will not be published. Required fields are marked *

Next Post

BIG NEWS: ಗಗನಸಖಿ ಹತ್ಯೆ ಪ್ರಕರಣ; ಪೊಲೀಸ್ ಠಾಣೆಯಲ್ಲಿಯೇ ಆತ್ಮಹತ್ಯೆಗೆ ಶರಣಾದ ಆರೋಪಿ

Sat Sep 9 , 2023
ಮುಂಬೈ: ಗಗನಸಖಿ ರೂಪಾಲ್ ಹತ್ಯೆ ಪ್ರಕರಣದ ಆರೋಪಿ ವಿಕ್ರಮ್ ಅತ್ವಾಲ್ ಪೊಲೀಸ್ ವಶದಲ್ಲಿರುವಾಗಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಆರೋಪಿ ವಿಕ್ರಮ್ ಅತ್ವಾಲ್ (40) ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ಒಪ್ಪಿಸಿತ್ತು. ಪೊಲೀಸ್ ಕಸ್ಟಡಿಯಲ್ಲಿದ್ದ ವಿಕ್ರಮ್ ಅತ್ವಾಲ್, ಶೌಚಾಲಯಕ್ಕೆ ತೆರಳಿದ್ದಾಗ ತನ್ನದೇ ಬಟ್ಟೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.   ಸೆ.4ರಂದು ರಾತ್ರಿ 24 ವರ್ಷದ ರೂಪಾಲ್ ಓಗ್ರಿ ಎಂಬ ಗಗನಸಖಿಯನ್ನು ಕತ್ತು ಸೀಳಿದ ರೀತಿಯಲ್ಲಿ ಬರ್ಬರವಾಗಿ ಕೊಲೆಯಾಗಿದ್ದರು. ರೂಪಾಲ್ […]

Advertisement

Wordpress Social Share Plugin powered by Ultimatelysocial