ಭೀಕರ ಪ್ರವಾಹಕ್ಕೆ ಪೂರ್ವ ಲಿಬಿಯಾ ತತ್ತರ: ಮೃತರ ಸಂಖ್ಯೆ 11,300ಕ್ಕೆ ಏರಿಕೆ.. 10,100 ಮಂದಿ ನಾಪತ್ತೆ

Libya Flood: ಲಿಬಿಯಾದ ಪೂರ್ವಭಾಗಗಳಲ್ಲಿ ಭೀಕರ ಪ್ರವಾಹದ ಅಬ್ಬರಕ್ಕೆ ಸಿಲುಕಿ ಮೃತಪಟ್ಟವರ ಸಂಖ್ಯೆ 11,300ಕ್ಕೆ ಏರಿಕೆಯಾಗಿದೆ.

ಡೆರ್ನಾ (ಲಿಬಿಯಾ) : ಲಿಬಿಯಾದಲ್ಲಿ ಭೀಕರ ಬಿರುಗಾಳಿ ಮತ್ತು ಪ್ರವಾಹಕ್ಕೆ ಅಲ್ಲಿನ ಜನರು ತತ್ತರಿಸಿದ್ದಾರೆ. ಪೂರ್ವ ಲಿಬಿಯಾದ ನಗರವಾದ ಡರ್ನಾದಲ್ಲಿ ಪ್ರವಾಹದಿಂದ ಸತ್ತವರ ಸಂಖ್ಯೆ 11,300ಕ್ಕೆ ಏರಿಕೆಯಾಗಿದೆ.

ಕರಾವಳಿ ನಗರದಲ್ಲಿ ಇನ್ನೂ 10,100 ಮಂದಿ ನಾಪತ್ತೆಯಾಗಿದ್ದು, ಶೋಧ ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ಸ್ಥಳೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಪೂರ್ವ ಲಿಬಿಯಾದಲ್ಲಿ ಸಂಭವಿಸಿದ ಪ್ರವಾಹಡರ್ನಾದಲ್ಲಿ ಸಾವಿರಾರು ಜನರನ್ನು ಸಾಮೂಹಿಕವಾಗಿ ಸಮಾಧಿ ಮಾಡಲಾಗಿದೆ. ರಕ್ಷಣಾ ಪಡೆ ಸಿಬ್ಬಂದಿ ಕಾರ್ಯಾಚರಣೆ ಮುಂದುವರೆಸಿದ್ದು, ನಗರದಲ್ಲಿ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಂಭವವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಗ್ಯ ಅಧಿಕಾರಿಗಳು 5,500 ಸಾವು ಸಂಭವಿಸಿರುವುದನ್ನು ದೃಢಪಡಿಸಿದ್ದಾರೆ ಹಾಗೂ 9,000 ಜನರು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಹೇಳಿದ್ದಾರೆ.

ಪೂರ್ವ ಲಿಬಿಯಾದಲ್ಲಿ ಸಂಭವಿಸಿದ ಪ್ರವಾಹಡೇನಿಯಲ್ ಹೆಸರಿನ ಚಂಡಮಾರುತದಿಂದ ಉಂಟಾದ ಈ ಪ್ರವಾಹದಲ್ಲಿ ಅಣೆಕಟ್ಟು ಒಡೆದು ಹೋಗಿದ್ದು, ಪರಿಣಾಮವಾಗಿ ನೀರು ಅನೇಕ ನಗರಗಳು ಮತ್ತು ಹಳ್ಳಿಗಳಿಗೆ ನುಗ್ಗಿದೆ. ಹೀಗಾಗಿ, ಸಾವಿರಾರು ಮಂದಿ ಸಾವನ್ನಪ್ಪಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಅನೇಕ ಕಡೆ ಮನೆಗಳು ನೆಲಕ್ಕುರುಳಿವೆ. ಸಮುದ್ರದ ನೀರು ಪ್ರವಾಹದ ರೂಪದಲ್ಲಿ ನಗರವನ್ನು ಪ್ರವೇಶಿಸಿದ್ದು, ಅಣೆಕಟ್ಟು ಮತ್ತು ಸೇತುವೆಗಳು ನೆಲಸಮವಾಗಿವೆ.

ಭೀಕರ ಪ್ರವಾಹಕ್ಕೆ ಪೂರ್ವ ಲಿಬಿಯಾ ತತ್ತರ : 5 ಸಾವಿರಕ್ಕೂ ಹೆಚ್ಚು ಜನ ಸಾವು, 10 ಸಾವಿರ ಮಂದಿ ನಾಪತ್ತೆ

ಪೂರ್ವ ಲಿಬಿಯಾದಲ್ಲಿ ಸಂಭವಿಸಿದ ಪ್ರವಾಹ”ಭಾನುವಾರ ರಾತ್ರಿ ಚಂಡಮಾರುತವು ಕರಾವಳಿಯನ್ನು ಅಪ್ಪಳಿಸುತ್ತಿದ್ದಂತೆ ನಗರದ ಹೊರಗಿನ ಎರಡು ಅಣೆಕಟ್ಟುಗಳು ಒಡೆದಿದ್ದು, ದೊಡ್ಡ ಸ್ಫೋಟದ ಶಬ್ದ ಕೇಳಿಬಂದಿತ್ತು. ಪ್ರಬಲವಾದ ಡೇನಿಯಲ್ ಚಂಡಮಾರುತವು ಪೂರ್ವ ಲಿಬಿಯಾದಾದ್ಯಂತ ಪಟ್ಟಣಗಳಲ್ಲಿ ಮಾರಣಾಂತಿಕ ಪ್ರವಾಹವನ್ನು ಉಂಟು ಮಾಡಿದ್ದು, ಡರ್ನಾ ಹೆಚ್ಚು ಹಾನಿಗೊಳಗಾಗಿದೆ” ಎಂದು ನಿವಾಸಿಗಳು ಮಾಹಿತಿ ನೀಡಿದ್ದಾರೆ.

ಧರೆಗುರುಳಿದ ಕಟ್ಟಗಳು”ಲಿಬಿಯಾ ಸರ್ಕಾರವು ಪರಿಹಾರ ಕಾರ್ಯ ಕೈಗೊಂಡಿದೆ. ಟ್ರಿಪೋಲಿ ಮೂಲದ ಪಶ್ಚಿಮ ಸರ್ಕಾರವು ಡರ್ನಾ ಮತ್ತು ಇತರೆ ಪೂರ್ವ ಪಟ್ಟಣಗಳ ಪುನರ್​ ನಿರ್ಮಾಣಕ್ಕಾಗಿ $412 ಮಿಲಿಯನ್‌ ಹಣವನ್ನು ಮಂಜೂರು ಮಾಡಿದೆ ಮತ್ತು ಟ್ರಿಪೋಲಿಯಲ್ಲಿ ಸಶಸ್ತ್ರ ಗುಂಪು ಮಾನವೀಯ ನೆರವಿನೊಂದಿಗೆ ಬೆಂಗಾವಲು ಪಡೆಯನ್ನು ಕಳುಹಿಸಿದೆ. ಗುರುವಾರ ಬೆಳಗಿನ ವೇಳೆಗೆ 3,000ಕ್ಕೂ ಹೆಚ್ಚು ಶವಗಳನ್ನು ಸಮಾಧಿ ಮಾಡಲಾಗಿದೆ. ಸತ್ತವರಲ್ಲಿ ಹೆಚ್ಚಿನವರನ್ನು ಡರ್ನಾ ಹೊರ ಭಾಗದಲ್ಲಿ ಸಾಮೂಹಿಕವಾಗಿ ಸಮಾಧಿ ಮಾಡಲಾಯಿತು, ಇತರರನ್ನು ಹತ್ತಿರದ ಪಟ್ಟಣಗಳು ಮತ್ತು ನಗರಗಳಿಗೆ ವರ್ಗಾಯಿಸಲಾಯಿತು” ಎಂದು ಪೂರ್ವ ಲಿಬಿಯಾದ ಆರೋಗ್ಯ ಸಚಿವ ಓಥ್ಮನ್ ಅಬ್ದುಲ್ಜಲೀಲ್ ಹೇಳಿದ್ದಾರೆ.

2019ರ ಪ್ರವಾಹ : 4 ವರ್ಷ ಕಳೆದರೂ ಮಲೆಮನೆ, ಮದುಗುಂಡಿ ನಿರಾಶ್ರಿತರಿಗೆ ಸಿಕ್ಕಿಲ್ಲ ಸೂರು

ಕುಸಿದ ಎರಡು ಅಣೆಕಟ್ಟುಗಳನ್ನು 1970ರ ದಶಕದಲ್ಲಿ ನಿರ್ಮಿಸಲಾಗಿದೆ. ಹಾಗೆಯೇ, ಕಳೆದ ಗುರುವಾರ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಅಣೆಕಟ್ಟುಗಳ ಕುಸಿತದ ಬಗ್ಗೆ ತುರ್ತು ತನಿಖೆಯನ್ನು ನಡೆಸಲು ಪಬ್ಲಿಕ್ ಪ್ರಾಸಿಕ್ಯೂಟರ್‌ಗೆ ತಿಳಿಸಲಾಗಿದೆ.

Please follow and like us:

tmadmin

Leave a Reply

Your email address will not be published. Required fields are marked *

Next Post

Manipur Violence: 4 ತಿಂಗಳಲ್ಲಿ 175 ಮಂದಿ ಸಾವು, 1,108 ಮಂದಿಗೆ ಗಾಯ

Fri Sep 15 , 2023
ಇಂಫಾಲ್‌: ಮಣಿಪುರದಲ್ಲಿ ಮೇ ತಿಂಗಳಿನಲ್ಲಿ ಪ್ರಾರಂಭವಾದ ಜನಾಂಗೀಯ ಕಲಹದಲ್ಲಿ ಇದುವರೆಗೆ ಒಟ್ಟು 175 ಜನರು ಮೃತಪಟ್ಟಿದ್ದು, 1,108 ಜನರು ಗಾಯಗೊಂಡಿದ್ದಾರೆ ಮತ್ತು 32 ಮಂದಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಒಟ್ಟು 4,786 ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಹಾಗೂ 386 ಧಾರ್ಮಿಕ ಕಟ್ಟಡಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.   ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಇನ್‌ಸ್ಪೆಕ್ಟರ್-ಜನರಲ್ ಆಫ್ ಪೊಲೀಸ್ (ಐಜಿಪಿ) ಐ.ಕೆ ಮುವಾ, ‘ಮಣಿಪುರವನ್ನು ಸಹಜ ಸ್ಥಿತಿಗೆ […]

Advertisement

Wordpress Social Share Plugin powered by Ultimatelysocial