ಈ ಜನರು ಮೊಸರು ಸೇವನೆಯಿಂದ ದೂರವಿರಬೇಕು, ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ..

 ಕೆಲವರಿಗೆ ಮೊಸರು ಇಲ್ಲದ ಊಟ ಅಪೂರ್ಣ ಎನಿಸುತ್ತದೆ. ಹೆಚ್ಚಿನ ಜನರು ಇದನ್ನು ಪ್ರತಿದಿನ ತಮ್ಮ ಆಹಾರದಲ್ಲಿ ಸೇವಿಸುತ್ತಾರೆ, ಆದರೆ ಮೊಸರು ಕೆಲವರಿಗೆ ಹಾನಿಕಾರಕ ಎಂಬ ಸಂಗತಿ ನಿಮಗೆ ತಿಳಿದಿದೆಯೇ? ಅಂದರೆ, ಈಗಾಗಲೇ ಕೆಲ ಕಾಯಿಲೆಗಳನ್ನು ಎದುರಿಸುತ್ತಿರುವ ಜನರು, ಮೊಸರು ಸೇವನೆಯಿಂದ ದೂರವಿರಬೇಕು, ಇಲ್ಲದಿದ್ದರೆ ಅವರ ಸಮಸ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೇ.

ಉದಾಹರಣೆಗೆ ಅಸ್ತಮಾ ಮತ್ತು ಅಸಿಡಿಟಿ ಸಮಸ್ಯೆ ಇರುವ ರೋಗಿಗಳಿಗೆ ಇದು ವಿಷಕ್ಕಿಂತ ಕಡಿಮೆಯಿಲ್ಲ.

ಅಸ್ತಮಾ ರೋಗಿಗಳು ಮೊಸರಿನಿಂದ ಅಂತರ ಕಾಯ್ದುಕೊಳ್ಳಬೇಕು
ಮೊಸರಿನಲ್ಲಿ ವಿಟಮಿನ್‌ಗಳು, ಕ್ಯಾಲ್ಸಿಯಂ, ಪ್ರೊಟೀನ್‌ಗಳಂತಹ ಅನೇಕ ಪೋಷಕಾಂಶಗಳಿವೆ ಎಂದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದು ಉದರ ಸಮಸ್ಯೆಗಳು, ಅಧಿಕ ಬಿಪಿ ಮತ್ತು ಅನೇಕ ರೀತಿಯ ಕಾಯಿಲೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ, ಆದರೆ ಉಸಿರಾಟದ ತೊಂದರೆ ಇರುವವರು ಮೊಸರು ಸೇವನೆಯಿಂದ ದೂರವಿರಬೇಕು. ಇವರು ಸೀಮಿತ ಪ್ರಮಾಣದಲ್ಲಿ ಮೊಸರನ್ನು ಸೇವಿಸಬೇಕು.

ಅಸಿಡಿಟಿ ರೋಗಿಗಳಿಗೂ ಅಪಾಯಕಾರಿ
ಅಸಿಡಿಟಿ ಸಮಸ್ಯೆ ಇರುವವರು ಮೊಸರು ಸೇವನೆಯಿಂದ ದೂರವಿರಬೇಕು, ಇಲ್ಲದಿದ್ದರೆ ಅವರ ಸಮಸ್ಯೆ ಹೆಚ್ಚಾಗಬಹುದು. ವಾಸ್ತವದಲ್ಲಿ, ಅಸಿಡಿಟೀ ಸಮಸ್ಯೆ ಹೊಂದಿರುವ ಜನರಿಗೆ ಮೊಸರನ್ನು ಸರಿಯಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಮತ್ತು ಅವರು ವಾಂತಿ ಮಾಡುವ ಸಾಧ್ಯತೆಯಿದೆ. ಇಂತಹ ಪರಿಸ್ಥಿತಿಯಲ್ಲಿ, ಆಮ್ಲೀಯತೆಯ ಸಮಸ್ಯೆ ಇರುವ ರೋಗಿಗಳು ಮೊಸರನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು.

ಸಂಧಿವಾತ ಸಮಸ್ಯೆ ಇರುವವರು ಕೂಡ ಮೊಸರನ್ನು ಸೇವಿಸಬೇಡಿ
ಸಂಧಿವಾತದ ಸಮಸ್ಯೆಯಲ್ಲೂ ಸಹ, ನೀವು ಮೊಸರನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು, ಏಕೆಂದರೆ ಅದು ನಿಮ್ಮ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ರೋಗಿಗಳು ವಾರಕ್ಕೊಮ್ಮೆ ಮೊಸರು ಸೇವಿಸಬೇಕು, ಇಲ್ಲದಿದ್ದರೆ ಸಮಸ್ಯೆ ಹೆಚ್ಚಾಗಬಹುದು. ಇನ್ನೊಂದೆಡೆ, ಮೊಸರು ಸೇವನೆಯು ಹಲ್ಲು ಮತ್ತು ಮೂಳೆಗಳನ್ನು ಬಲಪಡಿಸುತ್ತದೆ ಎಂದು ಹೇಳಲಾಗುತ್ತದೆ. ಹೀಗಿರುವಾಗ ಒಮ್ಮೆ ನೀವು ನಿಮ್ಮ ವೈದ್ಯರನ್ನು ಸಂಪರ್ಕಿಸಿದ ನಂತರ ಅದನ್ನು ಸೇವಿಸಬಹುದು.

ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ, ಮನೆಮದ್ದು ಮಾಹಿತಿ ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

KGF-3 ಅಭಿಮಾನಿಗಳಿಗೆ ಶಾಕ್: ಸ್ಪಷ್ಟನೆ ನೀಡಿದ ನಿರ್ಮಾಪಕರು!

Sun May 15 , 2022
  ಬಾಕ್ಸ್​ ಆಫೀಸ್​ನಲ್ಲಿ ಮುನ್ನುಗ್ಗುತ್ತಿರುವ ಕೆಜಿಎಫ್-2, 1,200 ಕೋಟಿ ಗಳಿಕೆ ಗಡಿಯಲ್ಲಿದೆ. ಈ ಮಧ್ಯೆ ಕೆಜಿಎಫ್​-3 ಕುರಿತು ಗಾಳಿ ಸುದ್ದಿಗಳಿಗೆ ನಿರ್ಮಾಪಕರು ಸ್ಪಷ್ಟನೆ ನೀಡಿದ್ದಾರೆ. ಕೆಜಿಎಫ್ ಚಾಪ್ಟರ್-2 ಸಿನಿಮಾ ಸದ್ಯ ವಿಶ್ವಾದ್ಯಂತ ಭಾರಿ ಸುದ್ದಿ ಮಾಡಿದ ಕನ್ನಡದ ಹೆಮ್ಮೆಯ ಸಿನಿಮಾ. ಗಲ್ಲಾಪೆಟ್ಟಿಗೆಯಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಭಾರತದ ಮೂರನೇ ಹಾಗೂ ಕನ್ನಡದ ಮೊದಲ ಚಿತ್ರ. ರಿಲೀಸ್ ಆಗಿ ಒಂದು ತಿಂಗಳು ಕಳೆದರೂ ಬಾಕ್ಸ್ ಆಫೀಸ್​ನಲ್ಲಿ ಚಿತ್ರದ ಕಲೆಕ್ಷನ್ ಇನ್ನೂ […]

Advertisement

Wordpress Social Share Plugin powered by Ultimatelysocial