KGF-3 ಅಭಿಮಾನಿಗಳಿಗೆ ಶಾಕ್: ಸ್ಪಷ್ಟನೆ ನೀಡಿದ ನಿರ್ಮಾಪಕರು!

 

ಬಾಕ್ಸ್​ ಆಫೀಸ್​ನಲ್ಲಿ ಮುನ್ನುಗ್ಗುತ್ತಿರುವ ಕೆಜಿಎಫ್-2, 1,200 ಕೋಟಿ ಗಳಿಕೆ ಗಡಿಯಲ್ಲಿದೆ. ಈ ಮಧ್ಯೆ ಕೆಜಿಎಫ್​-3 ಕುರಿತು ಗಾಳಿ ಸುದ್ದಿಗಳಿಗೆ ನಿರ್ಮಾಪಕರು ಸ್ಪಷ್ಟನೆ ನೀಡಿದ್ದಾರೆ.

ಕೆಜಿಎಫ್ ಚಾಪ್ಟರ್-2 ಸಿನಿಮಾ ಸದ್ಯ ವಿಶ್ವಾದ್ಯಂತ ಭಾರಿ ಸುದ್ದಿ ಮಾಡಿದ ಕನ್ನಡದ ಹೆಮ್ಮೆಯ ಸಿನಿಮಾ.

ಗಲ್ಲಾಪೆಟ್ಟಿಗೆಯಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಭಾರತದ ಮೂರನೇ ಹಾಗೂ ಕನ್ನಡದ ಮೊದಲ ಚಿತ್ರ. ರಿಲೀಸ್ ಆಗಿ ಒಂದು ತಿಂಗಳು ಕಳೆದರೂ ಬಾಕ್ಸ್ ಆಫೀಸ್​ನಲ್ಲಿ ಚಿತ್ರದ ಕಲೆಕ್ಷನ್ ಇನ್ನೂ ನಿಂತಿಲ್ಲ. ರಾಕಿ ಬಾಯ್​ಗೆ ಪ್ರೇಕ್ಷಕರ ಸಿಳ್ಳೆ, ಚಪ್ಪಾಳೆ ಗಡಿ ಮೀರಿ ಸದ್ದು ಮಾಡುತ್ತಲೇ ಇದೆ.

ಕೆಜಿಎಫ್-2 ಚಿತ್ರದ ಕೊನೆಯಲ್ಲಿ 3ನೇ ಚಾಪ್ಟರ್ ಬರುವ ಬಗ್ಗೆ ನಿರ್ದೇಶಕ ಪ್ರಶಾಂತ್ ನೀಲ್ ಸುಳಿವು ನೀಡಿರುವುದು ಕೆಜಿಎಫ್​ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿತ್ತು. ಕೆಜಿಎಫ್​-3 ಬಂದೇ ಬರುತ್ತೆ ಅಂತೆಲ್ಲಾ ಸುದ್ದಿಯಾಗಿತ್ತು. ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಕೂಡ ಕೆಜಿಎಫ್ 2024ಕ್ಕೆ ತೆರೆ ಮೇಲೆ ಬರಲಿದೆ ಎಂದು ವರದಿಯಾಗಿತ್ತು. ಈ ಬಗ್ಗೆ ನಿರ್ಮಾಪಕ ವಿಜಯ್ ಕಿರಂಗದೂರು ಸ್ಪಷ್ಟನೆ ನೀಡಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು.

ಆದ್ರೆ, ಇದಕ್ಕೆಲ್ಲ ಚಿತ್ರದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಬ್ರೇಕ್ ಹಾಕಿ, ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ‘ಕೆಜಿಎಫ್-3 ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ನಮ್ಮ ಹೊಂಬಾಳೆ ಫಿಲ್ಮ್ಸ್ ಮುಂದೆ ಬಹಳಷ್ಟು ಅದ್ಭುತ ಸಿನಿಮಾಗಳಿವೆ. ಸದ್ಯದಲ್ಲಿ ಕೆಜಿಎಫ್-3 ಶುರು ಮಾಡುತ್ತಿಲ್ಲ. ಆದ್ರೆ ಮುಂದೆ ಮತ್ತೆ ಆ ಚಿತ್ರದ ಕೆಲಸ ಆರಂಭಿಸುವಾಗ ನಿಮಗೆ ತಿಳಿಸುತ್ತೇವೆ’ ಎಂದು ಟ್ವಿಟ್ ಮಾಡಿದ್ದಾರೆ.ಕೆಜಿಎಫ್ 1, 2 ಚಾಪ್ಟರ್​ಗಳು ಭರ್ಜರಿ ಯಶಸ್ಸು ಗಳಿಸಿದ್ದರಿಂದ, 3ನೇ ಭಾಗಕ್ಕೂ ಭಾರಿ ಡಿಮ್ಯಾಂಡ್ ಕೇಳಿಬರುತ್ತಿದೆ. ಆದ್ರೆ ಪ್ರಶಾಂತ್ ನೀಲ್ ಮತ್ತು ಯಶ್ ಬಳಿ ಸದ್ಯ ಬೇರೆ ಪ್ರಾಜೆಕ್ಟ್​ಗಳು ಇರೋದ್ರಿಂದ ಕೆಜಿಎಫ್ 3 ತಡವಾಗಬಹುದು. ಪ್ರಶಾಂತ್ ನೀಲ್ ನಟ ಪ್ರಭಾಸ್​ಗೆ ಸಲಾರ್ ಚಿತ್ರ ನಿರ್ದೇಶಿಸುತ್ತಿದ್ದು, ನಂತರ ಜ್ಯೂ.ಎನ್​ಟಿಆರ್​ಗೆ ಆಯಕ್ಷನ್ ಕಟ್ ಹೇಳಲಿದ್ದಾರೆ. ಹಾಗೆಯೇ ಯಶ್​ಗೆ ಮಫ್ತಿ ನಿರ್ದೇಶಕ ನರ್ತನ್ ಆಯಕ್ಷನ್ ಕಟ್ ಹೇಳಲಿದ್ದಾರೆ ಎಂಬ ಮಾತುಗಳು ಗಾಂಧಿ ನಗರದಲ್ಲಿ ಕೇಳಿಬರುತ್ತಿವೆ. ಈ ಎಲ್ಲ ಪ್ರಾಜೆಕ್ಟ್​ಗಳು ಮುಗಿದ ಮೇಲೆ ಕೆಜಿಎಫ್-3 ಬರಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾರತದ ಭವಿಷ್ಯಕ್ಕಾಗಿ ಆರ್‌ಎಸ್‌ಎಸ್ ಮತ್ತು ಬಿಜೆಪಿ ವಿರುದ್ಧ ಹೋರಾಟ: ರಾಹುಲ್ ಗಾಂಧಿ ಕರೆ..!

Sun May 15 , 2022
ಉದಯಪುರ: ಆರ್‌ಎಸ್‌ಎಸ್ ಮತ್ತು ಬಿಜೆಪಿ ವಿರುದ್ಧದ ಹೋರಾಟವು ಭಾರತದ ಭವಿಷ್ಯದ ಹೋರಾಟವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು. ರಾಜಸ್ಥಾನದ ಉದಯಪುರದಲ್ಲಿ ಕಾಂಗ್ರೆಸ್‌ನ ಚಿಂತನ್ ಶಿವರ್‌ ನಲ್ಲಿ ಮಾತನಾಡಿದ ಅವರು, “ನಾವು ರಾಷ್ಟ್ರೀಯ ಪಕ್ಷದ ವಿರುದ್ಧ ಹೋರಾಡುತ್ತಿಲ್ಲ. ನಾವು ಪ್ರತಿ ಸಂಸ್ಥೆಯ ವಿರುದ್ಧ ಹೋರಾಡುತ್ತಿದ್ದೇವೆ. ನಾವು ಕ್ರೋನಿ ಕ್ಯಾಪಿಟಲಿಸ್ಟ್‌ಗಳ ವಿರುದ್ಧ ಹೋರಾಡುತ್ತಿದ್ದೇವೆ. ನಮ್ಮ ಕಾರ್ಯಕರ್ತರು ಭಯಪಡುವ ಅಗತ್ಯವಿಲ್ಲ. ಈ ದೇಶವು ಸತ್ಯವನ್ನು ಗುರುತಿಸುತ್ತದೆ. ಈ ಬಿಜೆಪಿ ಮತ್ತು ಆರೆಸ್ಸೆಸ್ […]

Advertisement

Wordpress Social Share Plugin powered by Ultimatelysocial