IND vs WI 2nd ODI: ರಾಹುಲ್ ಇನ್; ಟಾಸ್ ಗೆದ್ದ ವಿಂಡೀಸ್ ಫೀಲ್ಡಿಂಗ್ ಆಯ್ಕೆ

ಅಹಮದಾಬಾದ್: ಭಾರತ ವಿರುದ್ಧ ನಡೆಯುತ್ತಿರುವ ದ್ವಿತೀಯ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದಿರುವ ವೆಸ್ಟ್‌ ಇಂಡೀಸ್‌ನ ಉಸ್ತುವಾರಿ ನಾಯಕ ನಿಕೋಲಸ್ ಪೂರನ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ.ಭಾರತ ತಂಡದಲ್ಲಿ ಒಂದು ಬದಲಾವಣೆ ತರಲಾಗಿದ್ದು, ಇಶಾನ್ ಕಿಶನ್ ಸ್ಥಾನಕ್ಕೆ ಕನ್ನಡಿಗ ಕೆ.ಎಲ್.ರಾಹುಲ್ ಸ್ಥಾನ ಪಡೆದಿದ್ದಾರೆ.ಅತ್ತ ಗಾಯದ ಸಮಸ್ಯೆಗೆ ಒಳಗಾಗಿರುವ ಕೀರನ್ ಪೊಲಾರ್ಡ್ ಸೇವೆಯಿಂದ ವಿಂಡೀಸ್ ವಂಚಿತವಾಗಿದೆ.ಮೊದಲ ಏಕದಿನ ಪಂದ್ಯದಲ್ಲಿ ಗೆಲುವು ದಾಖಲಿಸಿರುವ ಭಾರತ 1-0 ಅಂತರದ ಮುನ್ನಡೆ ದಾಖಲಿಸಿದೆ. ಈ ಪಂದ್ಯವನ್ನು ಗೆದ್ದು ಸರಣಿ ವಶಪಡಿಸಿಕೊಳ್ಳುವ ಇರಾದೆಯಲ್ಲಿದೆ.

ಪ್ಲೇಯಿಂಗ್ ಇಲೆವೆನ್ ಇಂತಿದೆ:

ಭಾರತ: ರೋಹಿತ್ ಶರ್ಮಾ (ನಾಯಕ). ಕೆ.ಎಲ್. ರಾಹುಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ದೀಪಕ್ ಹೂಡ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್ ಮತ್ತು ಯಜುವೇಂದ್ರ ಚಾಹಲ್.

ವೆಸ್ಟ್ ಇಂಡೀಸ್: ನಿಕೋಲಸ್ ಪೂರನ್ (ನಾಯಕ), ಶಾಯ್ ಹೋಪ್ (ವಿಕೆಟ್ ಕೀಪರ್), ಬ್ರಂಡನ್ ಕಿಂಗ್, ಶಾಮ್ರಾ ಬ್ರೂಕ್ಸ್, ಜೇಸನ್ ಹೋಲ್ಡರ್, ಒಡಿಯನ್ ಸ್ಮಿತ್, ಅಕೀಲ್ ಹುಸೇನ್, ಫ್ಯಾಬಿಯನ್ ಅಲೆನ್, ಅಲ್ಜರಿ ಜೋಸೆಫ್ ಮತ್ತು ಕೆಮರ್ ರೋಚ್.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹಿಜಾಬ್ ವಿವಾದ ಕುರಿತಂತೆ ನಡೆಯುತ್ತಿರುವಂತ ವಿಚಾರಣೆಯ ಸಂಬಂಧದ ಅರ್ಜಿಗೆ, ರಿಟ್ ಅರ್ಜಿಗೆ ಹೈಕೋರ್ಟ್ ಗೆ ಆಕ್ಷೇಪಣೆ ಸಲ್ಲಿಸಿದೆ.

Wed Feb 9 , 2022
  ಬೆಂಗಳೂರು: ರಾಜ್ಯ ಸರ್ಕಾರದಿಂದ  ಇಂದು ಹಿಜಾಬ್ ವಿವಾದ   ಕುರಿತಂತೆ ನಡೆಯುತ್ತಿರುವಂತ ವಿಚಾರಣೆಯ ಸಂಬಂಧದ ಅರ್ಜಿಗೆ, ರಿಟ್ ಅರ್ಜಿಗೆ ಹೈಕೋರ್ಟ್ ಗೆ ಆಕ್ಷೇಪಣೆ ಸಲ್ಲಿಸಿದೆ.ಈ ಮೂಲಕ ಸಮವಸ್ತ್ರ  ರೂಪಿಸೋ ಅಧಿಕಾರ ಸರ್ಕಾರಕ್ಕೆ ಇದೆ ಎಂಬುದಾಗಿ ತಿಳಸಿದೆ.ಈ ಕುರಿತಂತೆ ಸರ್ಕಾರದಿಂದ ರಿಟ್ ಅರ್ಜಿಗೆ ಆಕ್ಷೇಪಣೆ ಸಲ್ಲಿಕೆಯಾಗಿದೆ. ಕಾಲೇಜುಗಳಲ್ಲಿ ವಸ್ತ್ರ ಸಂಹಿತೆ ಪಾಲಿಸಲಾಗುತ್ತಿತ್ತು. ಪ್ರವೇಶಕ್ಕೂ ಮೊದಲು ವಿದ್ಯಾರ್ಥಿಗಳಿಗೆ ಇದರ ಅರಿವಿತ್ತು ಎಂಬುದಾಗಿ ತಿಳಿಸಿದೆ.ಡಿಸೆಂಬರ್ 2021ರವರೆಗೆ ಹಿಜಾಬ್ ಬಗ್ಗೆ ಯಾವುದೇ ಗೊಂದಲ ಇರಲಿಲ್ಲ. ಈ […]

Advertisement

Wordpress Social Share Plugin powered by Ultimatelysocial