ಕುಡಿಯುವ ನೀರಿಗೆ ಆಗ್ರಹಿಸಿ ಎಮ್ಮೆ ಮೆರವಣಿಗೆ

ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಐತಿಹಾಸಿಕ ಮುದಗಲ್ ಪಟ್ಟಣದಲ್ಲಿ ದಿನೇ ದಿನೇ ಕುಡಿಯುವ ನೀರಿನ ಸಮಸ್ಯೆ ತಲೇದೋರುತ್ತಿದ್ದು
ಸಮರ್ಪಕವಾಗಿ ಕುಡಿಯುವ ನೀರಿನ ಸಮಸ್ಯೆ ಶಾಶ್ವತ
ವಾಗಿ ಬಗೆಹರಿಸುವಂತೆ ಒತ್ತಾಯಿಸಿ ಮುದಗಲ್ ನಲ್ಲಿ
ಕರವೇ ಪದಾಧಿಕಾರಿಗಳು ನಾನಾ ವಾರ್ಡ ನ ನಿವಾಸಿಗಳ
ಜೊತೆಗೂಡಿ ಎಮ್ಮೆಗಳ ಮೇಲೆ ಪ್ರತಿಭಟನಾ ಮೆರವಣಿಗೆ ನಡೆಯಿತು.

ಮುದಗಲ್ ಪುರಸಭೆ ವ್ಯಾಪ್ತಿಯ ಬಸ್ ನಿಲ್ದಾಣ ದ ಮುಂಭಾಗದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಕರವೇ ಪದಾಧಿಕಾರಿಗಳು
ಶಾಸಕ ಹೂಲಗೇರಿ ಹಾಗೂ ಪುರಸಭೆ ಮುಖ್ಯಾಧಿಕಾರಿ
ಮರಿಲಿಂಗಪ್ಪ ಅವರ ವಿರುಧ್ಧ ಘೋಷಣೆ ಕೂಗಿ
ಆಕ್ರೋಶ ವ್ಯಕ್ತಪಡಿಸಿದರು.
ಮೆರವಣಿಗೆಯುದ್ದಕ್ಕೂ ಶಾಸಕರಿಗೆ ಹಾಗೂ ಪುರಸಭೆ ಆಡಳಿತ ಮಂಡಳಿ ಸದಸ್ಯರಿಗೆ ಹಿಡಿಶಾಪ
ಹಾಕಿದರು.

ಎಮ್ಮೆಗಳಿಗೆ ಶಾಸಕರಿಗೆ ಧಿಕ್ಕಾರ ಹಾಗೂ ಅಧಿಕಾರಿಗಳಿಗೆ ಧಿಕ್ಕಾರ ಎಂದು ಬರೆದು ಅಸಮಾಧಾನ ವ್ಯಕ್ತಪಡಿಸಿದರು.

ರಾಯಚೂರು ಬೆಳಗಾಂ ರಾಜ್ಯ ಹೆದ್ದಾರಿ ರಸ್ತೆ ಕೆಲ
ಕಾಲ ಬಂದ್ ಮಾಡಿ ಸಂಚಾರಕ್ಕೆ ತೊಂದರೆಯಾಯಿತು.
ಮೆರವಣಿಗೆ ಪುರಸಭೆ ಪ್ರವೇಶಸುತ್ತಿದ್ದಂತೆ
ಮಹಿಳೆಯರು ಹಾಗೂ ಪ್ರತಿಭಟನಾಕಾರರು
ಪುರಸಭೆ ಗೆ ಅಡ್ಡಲಾಗಿ ಕುಳಿತು ಅಧಿಕಾರಿಗಳು
ಲಿಖಿತ ಉತ್ತರ ನೀಡುವವರೆಗೂ ಪ್ರತಿಭಟನೆ ಯಿಂದ
ಹಿಂದೆ ಸರಿಯುವ ಮಾತೇ ಇಲ್ಲ ಎಂದು ಪಟ್ಟು ಹಿಡಿದರು.

ಈ ಸಂದರ್ಭದಲ್ಲಿ ಕರವೇ ಅಧ್ಯಕ್ಷ ಎಸ.ಎ. ನಯೀಮ್ ಮಾತನಾಡಿ, ಪಟ್ಟಣಕ್ಕೆ 10 ದಿನಗಳಿಗೊಮ್ಮೆ ನೀರು ಸರಬರಾಜು ಆಗುತ್ತಿದೆ ಇದಲ್ಲದೇ ಮುದಗಲ್ ಪಟ್ಟಣದ ಮುಖ್ಯ ರಸ್ತೆಯು ಸಂಪೂರ್ಣ ಅವೈಜ್ಞಾನಿಕವಾಗಿ ನಿರ್ಮಾಣ ಮಾಡುತ್ತಿದ್ದು ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ಕೂಡಲೇ ಪಟ್ಟಣದ ಜ್ವಲಂತ
ಸಮಸ್ಯೆಗಳ ಬಗ್ಗೆ ಅಧಿಕಾರಿ ವರ್ಗ ಹಾಗೂ ಚುನಾಯಿತ ಜನಪ್ರತಿನಿಧಿಗಳೊಂದಿಗೆ ಶಾಸಕರು
ಮಧ್ಯಸ್ಥಿಕೆ ವಹಿಸಿ ಶಾಶ್ವತ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ಕೂಡಲೇ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸದೇ ಇದ್ದಲ್ಲಿ ನಿರಂತರವಾಗಿ
ಉಗ್ರ ಹೋರಾಟಗಳನ್ನು ರೂಪಿಸಲಾಗುವುದು
ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಎಸ್.ಎನ್.
ಖಾದ್ರಿ, ನಗರ ಘಟಕ ಅಧ್ಯಕ್ಷ ಸಾಬು ಹುಸೇನ್, ಮಹಾಂತೇಶ, ಅಬ್ದುಲ್ ಮಜೀದ್, ಅಂಗವಿಕಲರ ಸಂಘದ ಅಧ್ಯಕ್ಷ ಸುರೇಶ ಭಂಡಾರಿ,
ಅಜ್ಮಲ್ ಹುಸೇನ್, ಇಸ್ಮಾಯಿಲ್ ಬಳಿಗಾರ, ಮುನ್ನಾ ಕಿಲ್ಲಾ,
ನಾಗರಾಜ ನಾಯಕ, ಹನೀಫ್ ಖಾನ್, ಶಾಮೀದ್ ಅರಗಂಜಿ,
ಗ್ಯಾನಪ್ಪ, ರಾಜ್ ಮಹ್ಮದ್ ಸೇರಿದಂತೆ ನೀರದೊಡ್ಡಿ,
ಬೇಗಂಪೂರ ಪೇಟೆ, ವೆಂಕಟರಾಯನಪೇಟೆ,
ಹಳೇಪೇಟೆಯಿಂದ ನೂರಾರು ಮಹಿಳೆಯರು ಮೆರವಣಿಗೆ ಯಲ್ಲಿ ಭಾಗಿಯಾಗಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಅಪರೂಪದ ಉತ್ತರ ಪೆಸಿಫಿಕ್ ರೈಟ್ ವೇಲ್‌ಗಳಿಗಾಗಿ ಅಲಾಸ್ಕಾದಲ್ಲಿನ ನಿರ್ಣಾಯಕ ಆವಾಸಸ್ಥಾನವನ್ನು ಅಧ್ಯಯನ ಮಾಡಲು US ಏಜೆನ್ಸಿ

Tue Jul 12 , 2022
ವಿಶ್ವದ ಅಪರೂಪದ ತಿಮಿಂಗಿಲ ಪ್ರಭೇದಗಳಲ್ಲಿ ಒಂದಾದ ಉತ್ತರ ಪೆಸಿಫಿಕ್ ಬಲ ತಿಮಿಂಗಿಲಗಳಿಗೆ ಅಲಾಸ್ಕಾ ನೀರಿನಲ್ಲಿ ಹೆಚ್ಚುತ್ತಿರುವ ನಿರ್ಣಾಯಕ ಆವಾಸಸ್ಥಾನದ ಪದನಾಮಗಳನ್ನು ಅಧ್ಯಯನ ಮಾಡಲು ಪರಿಸರ ಗುಂಪುಗಳ ವಿನಂತಿಯನ್ನು ಯುಎಸ್ ಸರ್ಕಾರ ಸೋಮವಾರ ಒಪ್ಪಿಕೊಂಡಿದೆ. ನ್ಯಾಶನಲ್ ಓಷಿಯಾನಿಕ್ ಅಂಡ್ ಅಟ್ಮಾಸ್ಫಿಯರಿಕ್ ಅಡ್ಮಿನಿಸ್ಟ್ರೇಷನ್ ಫಿಶರೀಸ್ ಅಂದಾಜಿನ ಪ್ರಕಾರ ಶತಮಾನಗಳ ಬೇಟೆಯ ನಂತರ ಸುಮಾರು 30 ತಿಮಿಂಗಿಲಗಳು ಉಳಿದಿವೆ, ಹಡಗು ಮುಷ್ಕರಗಳು ಮತ್ತು ಮೀನುಗಾರಿಕೆ ಗೇರ್ ತೊಡಕುಗಳು ಜಾತಿಗಳನ್ನು ಧ್ವಂಸಗೊಳಿಸಿವೆ. 2008 ರಲ್ಲಿ ಏಜೆನ್ಸಿಯು […]

Advertisement

Wordpress Social Share Plugin powered by Ultimatelysocial