ಭೂ ವಿವಾದ : ಗುಂಡು ಹಾರಿಸಿಕೊಂಡು ರೈತ ಆತ್ಮಹತ್ಯೆ

ಖ್ನೋ,ಸೆ.10- ರೈತನೊಬ್ಬ ಮನೆಯಲ್ಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ವಿಷಯ ತಿಳಿದ ಪತ್ನಿ ಕೂಡ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ, ಚಿಂತಾಜನಕ ಸ್ಥಿತಿಯಲ್ಲಿರುವ ಘಟನೆ ಉತ್ತರಪ್ರದೇಶದ ಮೀರ್ ಜಿಲ್ಲೆಯ ಅಕ್ಬರ್‍ಪುರ ಗ್ರಾಮದಲ್ಲಿ ನಡೆದಿದೆ.

ವಿಪಿನ್‍ಕುಮಾರ್ (35) ಆತ್ಮಹತ್ಯೆ ಮಾಡಿಕೊಂಡಿರುವ ರೈತ. ಸುಂದರಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ದಂಪತಿಗೆ ಮಕ್ಕಳಿರಲಿಲ್ಲ. ತುಂಡು ಭೂಮಿಗಾಗಿ ವಿಪಿನ್ ತನ್ನ ಕಿರಿಯ ಸಹೋದರ ಅರವಿಂದ್ ಅವರೊಂದಿಗೆ ವಿವಾದ ಹೊಂದಿದ್ದರು. ಇಡೀ ಭೂಮಿಯನ್ನು ವಿಪಿನ್‍ನಿಂದ ಕಿತ್ತುಕೊಳ್ಳಲು ಬಯಸಿದ್ದರು ಇವರ ತಂದೆಯೂ ಸೋದರನಿಗೆ ಬೆಂಬಲವಾಗಿ ನಿಂತಿದ್ದರು ಎಂದು ನೆರೆಹೊರೆಯವರು ತಿಳಿಸಿದ್ದಾರೆ.

ಇದರಿಂದ ನೊಂದಿದ್ದ ವಿಪಿನ್‍ಕುಮಾರ್ ಮನೆಯಲ್ಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುಂಡೇಟಿನ ಶಬ್ದ ಕೇಳಿದ ಪತ್ನಿ ಸ್ಥಳಕ್ಕೆ ಓಡಿ ಬಂದು ನೋಡಿದಾಗ ಪತಿ ಸತ್ತಿಬಿದ್ದಿರುವುದು ಕಂಡಿದ್ದಾರೆ. ಘಟನೆಯಿಂದ ಉದ್ವೇಗ, ದುಃಖಕ್ಕೊಳಗಾದ ಆಕೆ ತಾನು ಕೂಡ ವಿಷ ಸೇವಿಸಿ ಸಾಯಲು ಯತ್ನಿಸಿದ್ದಾಳೆ ಎಂದು ಮೀರತ್‍ನ ಗ್ರಾಮಾಂತರ ಎಸ್‍ಪಿ ಕಮಲೇಶ್ ಬಹದ್ದೂರ್ ತಿಳಿಸಿದ್ದಾರೆ.

ಸದ್ಯ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಕೊಡಿಸಲಾಗುತ್ತಿದೆ. ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಹೇಳಿದ್ದಾರೆ.

Please follow and like us:

tmadmin

Leave a Reply

Your email address will not be published. Required fields are marked *

Next Post

G-20 Summit 2023: ಬ್ರೆಜಿಲ್‌ನ ಅಧ್ಯಕ್ಷ ಲುಲಾ ಡಾ ಸಿಲ್ವಾ ಅವರಿಗೆ ಜಿ 20 ಅಧ್ಯಕ್ಷ ಸ್ಥಾನವನ್ನು ಹಸ್ತಾಂತರಿಸಿದ ಪ್ರಧಾನಿ ಮೋದಿ

Sun Sep 10 , 2023
ನವದೆಹಲಿ:ಜಿ20 ನಾಯಕರ ಶೃಂಗಸಭೆ 2023 ಭಾನುವಾರ ಮುಕ್ತಾಯಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಬ್ರೆಜಿಲ್‌ನ ಅಧ್ಯಕ್ಷ ಲುಲಾ ಡಾ ಸಿಲ್ವಾ ಅವರಿಗೆ ಜಿ 20 ಅಧ್ಯಕ್ಷ ಸ್ಥಾನವನ್ನು ಹಸ್ತಾಂತರಿಸಿದರು, ಇದು ಈ ವರ್ಷದ ಡಿಸೆಂಬರ್ 1 ರಿಂದ ಗುಂಪಿನ ಅಧ್ಯಕ್ಷತೆಯನ್ನು ವಹಿಸಲಿದೆ. ಜಿ 20 ಶೃಂಗಸಭೆಯ ಮುಕ್ತಾಯದ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ನವದೆಹಲಿಯಲ್ಲಿನ ಸಲಹೆಗಳ ಮೇಲೆ ಮಾಡಿದ ಪ್ರಗತಿಯನ್ನು ಪರಿಶೀಲಿಸಲು ನವೆಂಬರ್ ಅಂತ್ಯದಲ್ಲಿ ವರ್ಚುವಲ್ ಅಧಿವೇಶನವನ್ನು ನಡೆಸಲು […]

Advertisement

Wordpress Social Share Plugin powered by Ultimatelysocial