ಮರಿ ಆನೆ ಹಾಲು ಕುಡಿದ ವಿಡಿಯೋ ವೈರಲ್

ಈಗ ಎಲ್ಲೆಲ್ಲೂ ಆನೆಯದ್ದೇ ಸುದ್ದಿ. ಕೇರಳದಲ್ಲಿ ಸಿಡಿಮದ್ದು ಇದ್ದ ಹಣ್ಣು ತಿಂದು ಗರ್ಭಿಣಿ ಆನೆ ಮೃತಪಟ್ಟಿದ್ದ ಬೆನ್ನಲ್ಲೇ ಅನೇಕ ಆನೆಗಳ ಹತ್ಯೆ ಬಗ್ಗೆ ವರದಿಯಾಗುತ್ತಲೇ ಇದೆ. ಈ ಕಾರಣಕ್ಕೆ ಆನೆ ಎಂದರೆ ನೋವಿನ ಸಂಗತಿಗಳೇ ನೆನಪಾಗುತ್ತವೆ. ಇದೆಲ್ಲದರ  ನಡುವೆಯೇ, ಮುದ್ದುಮುದ್ದಾದ ಆನೆ ಮರಿಯೊಂದು  ಓಡಿಬಂದು ಬಾಟಲಿ ಹಾಲನ್ನು ಕುಡಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ, ಅಮ್ಮನನ್ನು ಕಳೆದುಕೊಂಡಿರುವ ಈ ಮರಿ ಆನೆ ಇರುವುದು ಕೀನ್ಯಾದ ಶೆಲ್ಡ್ರಿಕ್ ವೈಲ್ಡ್​ಲೈಫ್​ ಸೆಂಚುರಿಯಲ್ಲಿ, ಇದಕ್ಕೆ ಬಾಟಲಿ ಹಾಲು ನೀಡಿ ಬೆಳೆಸಲಾಗುತ್ತಿದೆ ಎಂದು ಟ್ವಿಟರ್​ನಲ್ಲಿ ಅಲ್ಲಿಯ ಸಿಬ್ಬಂದಿಯೊಬ್ಬರು ಹಂಚಿಕೊಂಡಿದ್ದಾರೆ.  ಚಿಕ್ಕ ಮಗುವಿನಂತೆ ಓಡೋಡಿ ಬಂದು ಹಾಲು ಕುಡಿಯುತ್ತಿರುವ ವಿಡಿಯೋ ಕ್ಷಣ ಮಾತ್ರದಲ್ಲಿ 12 ಸಾವಿರಕ್ಕೂ ಹೆಚ್ಚು ಬಾರಿ ರೀಟ್ವೀಟ್​ ಆಗಿದೆ..

Please follow and like us:

Leave a Reply

Your email address will not be published. Required fields are marked *

Next Post

ಜಮ್ಮು-ಕಾಶ್ಮೀರದಲ್ಲಿ ಉಗ್ರರ ಪುಂಡಟ ಉಗ್ರನ ಬಂಧನ

Fri Jun 12 , 2020
ಜಮ್ಮು-ಕಾಶ್ಮೀರದಲ್ಲಿ ಉಗ್ರರ ಪುಂಡಟ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು.ನಿನ್ನೆ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವಿನ ಗುಂಡಿನ ಚಕಮಕಿ ಮುಂದುವರೆದಿದ್ದು.ನಸುಕಿನ ವೇಳೆಯಲ್ಲಿ ಶೋಪಿಯಾನ್ ಜಿಲ್ಲೆಯ ಕೊಜಪುರದಲ್ಲಿ ಲಷ್ಕರ್ ಎ ತೊಯ್ಬಾ ಉಗ್ರನನ್ನು ಭದ್ರತಾ ಪಡೆ ಯೋಧರು ಬಂಧಿಸಿದ್ದಾರೆ. ಉಗ್ರನನ್ನು ಮೊಹಮ್ಮದ್ ಯೂಸಫ್ ಖಾನ್ ನ ಪುತ್ರ ಜಾಕಿರ್ ಖಾನ್ ಎಂದು ಗುರುತಿಸಲಾಗಿದ್ದು ಶೋಪಿಯಾನ್ ನಿವಾಸಿಗಳಾಗಿದ್ದಾರೆ.ಅವನ ಬಳಿ ಇದ್ದ ಪಿಸ್ತೂಲ್ ಮತ್ತು ಶಸ್ತ್ರಾಸ್ತ್ರಗಳನ್ನು ಭದ್ರತಪಡೆ ವಶಪಡಿಸಿಕೊಂಡಿದ್ದಾರೆ.ಇತ್ತಿಚೆಗಷ್ಟೆ ಉಗ್ರರಪಡೆಗೆ ಸೇರಿದ್ದಾನೆ ಎಂದು ಮಾಹಿತಿ ತಿಳಿದ್ದಿದೆ.ಸ್ಥಳಕ್ಕೆ […]

Advertisement

Wordpress Social Share Plugin powered by Ultimatelysocial