ಮುಖ ಮುಟಿಕೊಳ್ಳಲು ಬಿಡಲ್ಲ ಈ ವಾಚ್..!

ಸೋಂಕು ಕಾಣಿಸಿಕೊಂಡಾಗಿನಿAದ ಎಲ್ಲರಿಂದಲೂ ಒಂದೇ ಸಲಹೆ, ಎಚ್ಚರಿಕೆ ಮಾತು, ‘ಮುಖ ಮುಟ್ಟಿಕೊಳ್ಳಬೇಡ’. ಅದನ್ನು ನೆನಪಿಸಿಕೊಳ್ಳುವುದು ಕಷ್ಟದ ಕೆಲಸವಲ್ಲ. ಒಂದು ವಾಚ್ ಅನ್ನು ಕೈಗೆ ಕಟ್ಟಿಕೊಂಡರೆ ಮುಗಿಯಿತು. ನಿಮ್ಮ ಕೈ ಮುಖದ ಬಳಿ ಹೋದೊಡನೆ, ಸದ್ದು ಮಾಡಿ ಎಚ್ಚರಿಸುತ್ತದೆ. ಇಂಗ್ಲೆAಡ್‌ನ ಬ್ರಿಸ್ಟಾಲ್ ನಗರದ ೧೫ ವರ್ಷದ ಬಾಲಕ ಮ್ಯಾಕ್ಸ್ ಮೆಲಿಯಾ, ಬಹುದಿನಗಳ ಪರಿಶ್ರಮದ ಬಳಿಕ ಒಂದು ಸ್ಮಾರ್ಟ್ ಕೈಗಡಿಯಾರವನ್ನು ಅಭಿವೃದ್ಧಿಪಡಿಸಿದ್ದಾನೆ. ಆ ಗಡಿಯಾರ ಎಷ್ಟು ಸ್ಮಾರ್ಟ್ ಎಂದರೆ, ನೀವು ನಿಮಗೆ ಅರಿವಿಲ್ಲದೆಯೇ ನಿಮ್ಮ ಕೈ ಅನ್ನು ಮುಖದ ಬಳಿ ತೆಗೆದುಕೊಂಡು ಹೋಗುತ್ತಿದ್ದಂತೆ, ಜೋರಾಗಿ ಬೀಪ್ ಸದ್ದು ಮಾಡುತ್ತದೆ. ಆ ಸದ್ದು ಕೇಳಿದ ಬಳಿಕ ಎಚ್ಚೆತ್ತು ನೀವೇ ಕೈ ಹಿಂದೆ ತೆಗೆದುಕೊಳ್ಳುತ್ತೀರಿ. ಈ ಬಗ್ಗೆ ಬಾಲಕನ ತಂದೆ ಸಂತಸ ವ್ಯಕ್ತಪಡಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಫ್ಯಾಷನ್ ಡಿಸೈನರ್ ಪಿಪ್ ಎಡ್ವರ್ಡ್ಸ್

Thu Jul 2 , 2020
ಕೆಲ ತಿಂಗಳ ಹಿಂದಷ್ಟೇ ಕ್ಲಾರ್ಕ್ ಪತ್ನಿ ಕೈಲಿ, ಕ್ಲಾರ್ಕ್ಗೆ ವಿಚ್ಛೇದನ ನೀಡಿದ್ರು. ಇದೀಗ ಫ್ಯಾಷನ್ ಡಿಸೈನರ್ ಹಾಗೂ ಮಾಡೆಲ್ ಆಗಿರುವ ಪಿಪ್ ಎಡ್ವರ್ಡ್ಸ್ ಅವರೊಂದಿಗೆ ಸಂಬಧ ಹೊಂದಿರುವುದಾಗಿ ಕ್ಲಾರ್ಕ್ ಹೇಳಿಕೊಂಡಿದ್ದಾರೆ.ಕೆಲ ದಿನಗಳಿಂದ ಈ ಜೋಡಿ ಜೊತೆ ಜೊತೆಯಾಗಿ ಓಡಾಡುತ್ತಿರುವ ಫೋಟೊಗಳು ಸೋಷಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡಿತ್ತು. ಈ ಬಗ್ಗೆ ಕೊನೆಗೂ ಮೌನ ಮುರಿದಿರುವ ೩೯ ವರ್ಷದ ಮಾಜಿ ಬಲಗೈ ಬ್ಯಾಟ್ಸ್ಮನ್, ಪಿಪ್ ಎಡ್ವರ್ಡ್ಸ್ ತಮ್ಮ ನೂತನ ಗೆಳತಿ ಎಂಬುದನ್ನು ಖಾತ್ರಿ […]

Advertisement

Wordpress Social Share Plugin powered by Ultimatelysocial