ಪಾರ್ಥನಿಂದ ದುರ್ಯೋಧನನ ಬಿಡುಗಡೆ.

ಪಾರ್ಥನಿಂದ ದುರ್ಯೋಧನನ ಬಿಡುಗಡೆ.
ವೈಭವದಿಂದ ಬಂದಿದ್ದ ಕೌರವನ ಪರಿವಾರಕ್ಕೆ ದಿಕ್ಕು ತೋಚದಂತಾಯಿತು. ದುರ್ಯೋಧನನ ಪತ್ನಿ ಭಾನುಮತಿಯು ಧರ್ಮಜನಲ್ಲಿಗೆ ಬಂದು ಕಾಲಿಗೆ ಬಿದ್ದು ಪತಿಯನ್ನು ಉಳಿಸಿಕೊಡುವಂತೆ ಬೇಡಿಕೊಂಡಳು.ದ್ರೌಪದಿಯನ್ನೂ ಕೇಳಿಕೊಂಡಳು.
ಧರ್ಮಜನು ಅವಳನ್ನು ಸಂತೈಸಿದನು. ಭೀಮನಿಗೆ ದುರ್ಯೋಧನನನ್ನು ಬಿಡಿಸಿಕೊಂಡು ಬರುವಂತೆ ಹೇಳಿದನು. ಆದರೆ ಭೀಮ ಒಪ್ಪಲಿಲ್ಲ. ಅವರಿಗೆ ತಕ್ಕ ಶಾಸ್ತಿ ಅದಾಗಿಯೇ ಆಗಿದೆ. ಅನುಭವಿಸಲಿ ಎಂದನು. ಅದಕ್ಕೆ ಧರ್ಮಜನು ಬೇರೆಯವರೆದುರು ಬಂದಾಗ ನಾವು ನೂರೈವರು. ನಮ್ಮ ನಮ್ಮಲ್ಲಿ ಕಲಹ ಬಂದಾಗ ಅವರು‌ ನೂರು ಜನ. ನಾವು ಐವರು ಎಂದು ನೂರೈವರಾವಲ್ಲವೆ ಎಂದು ಭೀಮನಿಗೆ ತಿಳಿಹೇಳಿದನು. ಅಲ್ಲದೆ ಶರಣಾಗತರನ್ನು ರಕ್ಷಿಸುವುದು, ಬೇಡಿದವರಿಗೆ ಬೇಡಿದ್ದನ್ನು ನೀಡುವುದು, ಎದುರು ಬಿದ್ದವರೊಂದಿಗೆ ಕಾದುವುದು ನಮ್ಮ ಧರ್ಮವೆಂದನು. ಭೀಮನು ಇನ್ನೂ ಸುಮ್ಮನೆ ಇದ್ದನು. ಆಗ ಅರ್ಜುನನಿಗೆ ಈ ಕೆಲಸವನ್ನು ವಹಿಸಿಕೊಟ್ಟನು. ಅಣ್ಣನ ಮಾತಿಗೆ ಎದುರಾಡದೆ ತಕ್ಷಣ ಸಿದ್ಧನಾಗಿ ದುರ್ಯೋಧನನ ಅಪಹರಣ ಮಾಡಿದ್ದ ಗಂಧರ್ವರ ಬೆಂಬತ್ತಿ ಹೋದನು. ಉಳಿದ ಸೇನೆಯೂ ಹಿಂಬಾಲಿಸಿತು.
ಅರ್ಜುನನಿಗೂ ಚಿತ್ರಸೇನನಿಗೂ ಭಾರೀ ಯುದ್ಧವಾಯಿತು. ಬಾಣಗಳ ಸುರಿಮಳೆಯಾಯಿತು. ಗಗನದಲ್ಲಿಯೂ ಯುದ್ಧವಾಯಿತು. ಚಿತ್ರಸೇನನು ಅರ್ಜುನನನ್ನು ಮೂದಲಿಸಿದನು. ಇವನು ನಿನ್ನ ಶತ್ರು. ಇವನನ್ನು ಬಿಡಿಸಲು ಬಂದಿರುವೆಯಲ್ಲ ಎಂದು. ಅದಕ್ಕೆ ಪಾರ್ಥನು ಅಣ್ಣನ ಆಜ್ಞೆಯೇ ಮುಖ್ಯವೆಂದನು. ಧರ್ಮಜನಾಣೆ, ಇವನನ್ನು ಬಿಟ್ಟರೆ ನಿನ್ನ ಉಳಿವು ಎಂದು ಹೆದರಿಸಿದನು.
ಆಗ ಚಿತ್ರಸೇನನು ಇಂದ್ರನ ಆಜ್ಞೆಯಂತೆ ಇವನನ್ನು ಸೆರೆಹಿಡಿದು ಗರ್ವಭಂಗ ಮಾಡಬೇಕಾಯಿತು ಎಂದನು. ಈಗ ನಿನ್ನಾಜ್ಞೆಯಂತೆ ಬಿಡುವೆನೆಂದನು. ಆಗ ಎಲ್ಲರೂ ಧರ್ಮಜನಿದ್ದಲ್ಲಿಗೆ ಬಂದರು. ನಿಮ್ಮ ತಮ್ಮನ ಶೌರ್ಯ ದೊಡ್ಡದು. ನಾವು ಸೋತೆವು, ನಿಮಗೆ ಲಕ್ಷ್ಮೀಲೋಲನ ಕರುಣೆಯಿರುವುದೆಂದು ಹೇಳಿ ನಮಸ್ಕರಿಸಿದನು. 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಿದ್ಧಲಿಂಗಯ್ಯ

Sun Mar 13 , 2022
ಸಿದ್ಧಲಿಂಗಯ್ಯನವರು ಕನ್ನಡ ಚಿತ್ರರಂಗದಲ್ಲಿ ಅತ್ಯದ್ಭುತ ಚಿತ್ರಗಳನ್ನು ಕೊಟ್ಟವರು. ಇಂದು ಅವರ ಸಂಸ್ಮರಣೆ ದಿನ. ಸಿದ್ಧಲಿಂಗಯ್ಯನವರು 1936ರ ಡಿಸೆಂಬರ್ 15ರಂದು ಜನಿಸಿದರು. ನವಜ್ಯೋತಿ ಸ್ಟುಡಿಯೋದಲ್ಲಿ ಲೈಟ್ ಬಾಯ್ ಆಗಿ ಸೇರಿದ ಸಿದ್ಧಲಿಂಗಯ್ಯನವರು ಬೆಳೆದು ಬಂದ ಹಾದಿ ಮಹತ್ವಪೂರ್ಣವಾದುದು. ಮುಂದೆ ಶಂಕರ ಸಿಂಗ್ ಅವರ ಬಳಿ ಸಹಾಯಕ ನಿರ್ದೇಶಕರಾದರು. ಕನ್ನಡವಲ್ಲದೆ ತಮಿಳು, ತೆಲುಗು ಭಾಷೆಗಳನ್ನೂ ಕಲಿತರು. ವಿಠ್ಠಲಾಚಾರ್ಯ ಅವರ ಸಿನಿಮಾದಲ್ಲಿ ನಟರಾಗ ಹೋಗಿದ್ದರು. ಹಾಸ್ಯನಟ ಬಾಲಕೃಷ್ಣ ಅವರ ಪ್ರೋತ್ಸಾಹದಿಂದ ನಿರ್ದೇಶಕರಾಗಿ ಕೆಲಸ ಮಾಡಿದರು. […]

Advertisement

Wordpress Social Share Plugin powered by Ultimatelysocial