ರೆಹನಾ ಹೇ ತೆರೆ ದಿಲ್ ಮೇ’ ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟ ನಟಿ ದಿಯಾ ಮಿರ್ಜಾ!

‘ರೆಹನಾ ಹೇ ತೆರೆ ದಿಲ್ ಮೇ’ ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟ ನಟಿ ದಿಯಾ ಮಿರ್ಜಾ ವೃತ್ತಿಯುದ್ದಕ್ಕೂ ಸೌಮ್ಯ ನಾಯಕಿಯ ಪಾತ್ರಗಳಲ್ಲೇ ನಟಿಸಿದ್ದು ಹೆಚ್ಚು. ಆದರೆ ತಮ್ಮ ಪಾತ್ರಗಳಂತೆ ಮೃದು ಅವರಲ್ಲ. ಬಹಳ ಗಟ್ಟಿಗಿತ್ತಿ ದಿಯಾ ಮಿರ್ಜಾ.

ಸಿನಿಮಾಗಳಲ್ಲಿ ಅವಕಾಶಗಳು ತುಸು ಕಡಿಮೆ ಆಗುತ್ತಿದ್ದಂತೆ ನಿರ್ಮಾಪಕಿ ಸ್ಥಾನಕ್ಕೆ ತನಗೆ ತಾನೇ ಬಡ್ತಿ ಪಡೆದುಕೊಂಡ ದಿಯಾ ಮಿರ್ಜಾ ಕೆಲವು ಒಳ್ಳೆಯ ಮಹಿಳಾ ಪ್ರಧಾನ ಸಿನಿಮಾಗಳಿಗೆ ಬಂಡವಾಳ ಹೂಡಿದ್ದಾರೆ.

ಕಳೆದ ವರ್ಷ ಎರಡನೇ ಬಾರಿ ವಿವಾಹವಾದ ಈ ಮುದ್ದು ಮುಖದ ನಟಿ ಒಂದು ಮಗುವಿನ ತಾಯಿಯೂ ಹೌದು. ಮದುವೆಗೆ ಮುನ್ನವೇ ದಿಯಾ ಮಿರ್ಜಾ ಗರ್ಭಿಣಿ ಆಗಿದ್ದರು ಎಂಬ ಮಾತುಗಳು ಅವರು ಮದುವೆಯಾದಾಗ ಕೇಳಿ ಬಂದಿತ್ತು. ಇದೀಗ ನಟಿ ದಿಯಾ ಮಿರ್ಜಾ ವಿವಾಹ ಪೂರ್ವ ಲೈಂಗಿಕತೆಯ ಬಗ್ಗೆ ಮಾತನಾಡಿದ್ದಾರೆ.

ವಿವಾಹ ಪೂರ್ವ ಲೈಂಗಿಕತೆ ಬಗ್ಗೆ ದಿಯಾ ಮಾತುವಿವಾಹಪೂರ್ವ ಲೈಂಗಿಕತೆ ಅಪರಾಧವೆಂದೇ ಬಹುಪಾಲು ಭಾರತೀಯರು ಭಾವಿಸುತ್ತಾರೆ. ಈ ಬಗ್ಗೆ ಮಾತನಾಡಿರುವ ದಿಯಾ ಮಿರ್ಜಾ ವಿವಾಹಪೂರ್ವ ಲೈಂಗಿಕತೆ ವ್ಯಕ್ತಿಯ ವೈಯಕ್ತಿಕ ಆಯ್ಕೆ. ಆ ವ್ಯಕ್ತಿಗೆ ಅದು ಸರಿ ಎನಿಸಿದರೆ ಅದು ಸರಿಯಷ್ಟೆ, ಅದನ್ನು ಬೇರೆ ಅರ್ಥದಲ್ಲಿ ನೋಡುವ ಅವಶ್ಯಕತೆ ಇಲ್ಲ ಎಂಬರ್ಥದ ಮಾತುಗಳನ್ನು ಆಡಿದ್ದಾರೆ.

ಅಂದುಕೊಳ್ಳುವಷ್ಟು ನಾವು ಪ್ರಗತಿಪರರಲ್ಲ: ದಿಯಾ

”ವೈಯಕ್ತಿಕ ಆಯ್ಕೆ ಮತ್ತು ಆ ಆಯ್ಕೆಗೆ ಇರುವ ಶಕ್ತಿ ಮತ್ತು ನಂಬಿಕೆಯನ್ನು ವೈಯಕ್ತಿಕ ಆಯ್ಕೆ ಮಾಡುವವರು ಮಾತ್ರವೇ ಸಂಭ್ರಮಿಸಬಲ್ಲರು. ಯಾವುದೇ ಬೆದರಿಕೆಗಳಿಗೆ ಒಳಪಡದ, ಯಾವುದೇ ಅನ್ಯಜನರ ಬಗ್ಗೆ ಯೋಚಸದೇ ವೈಯಕ್ತಿಕ ಆಯ್ಕೆಯನ್ನು ಮಾಡುವುದು ಸಹ ಅತ್ಯಂತ ಅವಶ್ಯಕ” ಎಂದಿದ್ದಾರೆ ದಿಯಾ ಮಿರ್ಜಾ. ಅಲ್ಲದೆ, ನಾವು ಊಹಿಸಿರುವಂತೆ ಅಥವಾ ನಾವು ನಮ್ಮನ್ನು ನಾವು ಪರಿಗಣಿಸಿರುವಷ್ಟು ನಾವು ಪ್ರಗತಿಪರರು ಅಲ್ಲ ಎನಿಸುತ್ತದೆ” ಎಂದೂ ಸಹ ಹೇಳಿದ್ದಾರೆ ದಿಯಾ.

ಗರ್ಭಿಣಿ ಆದ ಬಳಿಕ ವಿವಾಹ!

ದಿಯಾ ಮಿರ್ಜಾ 2014 ರಲ್ಲಿ ಉದ್ಯಮಿ ಸಾಹಿಲ್ ಸಂಘಾ ಎಂಬುವರನ್ನು ಬಹು ಅದ್ದೂರಿಯಾಗಿ ವಿವಾಹವಾದರು. ಆ ಬಳಿಕ 2019ರಲ್ಲಿ ಅವರಿಂದ ದೂರಾದರು. ಆ ಬಳಿಕ 2021 ರ ಫೆಬ್ರವರಿಯಲ್ಲಿ ಉದ್ಯಮಿ ವೈಭವ್ ರೇಖಿ ಎಂಬುವರೊಡನೆ ವಿವಾಹವಾದರು. ಅದಾದ ಕೆಲವೇ ದಿನಗಳಲ್ಲಿ ತಾವು ತಾಯಿಯಾಗುತ್ತಿರುವ ವಿಷಯ ಬಹಿರಂಗಪಡಿಸಿದರು. ಹಾಗೂ ಮದುವೆಯಾದ ಆರು ತಿಂಗಳ ಬಳಿಕ ಮೊದಲ ಮಗುವಿಗೆ ಜನ್ಮ ನೀಡಿದರು. ಮೊದಲ ಪತಿಯಿಂದ ದಿಯಾ ಮಗು ಪಡೆದಿರಲಿಲ್ಲ.

ದಿಯಾ ವಿರುದ್ಧ ಟೀಕೆ ವ್ಯಕ್ತವಾಗಿತ್ತು

ದಿಯಾ ಮಿರ್ಜಾ, ತಾವು ತಾಯಿಯಾಗುತ್ತಿರುವ ವಿಷಯ ಘೋಷಿಸಿದಾಗ ಹಲವರು ಟೀಕೆ ವ್ಯಕ್ತಪಡಿಸಿದ್ದರು. ಗರ್ಭಿಣಿ ಆಗಿರುವ ಕಾರಣಕ್ಕೆ ದಿಯಾ ಮಿರ್ಜಾ ಮದುವೆಯಾಗಿದ್ದಾರೆ ಎಂದಿದ್ದರು. ಆಗ ಹೆಚ್ಚೇನು ಮಾತನಾಡದೇ ಇದ್ದ ದಿಯಾ ಮಿರ್ಜಾ ಈಗ ವಿವಾಹ ಪೂರ್ವ ಲೈಂಗಿಕತೆ ಅವರವರ ವೈಯಕ್ತಿಕ ಆಯ್ಕೆಗೆ ಬಿಟ್ಟಿದ್ದು ಎಂದಿದ್ದಾರೆ. ಇದೀಗ ‘ಬೀಡ್’ ಹೆಸರಿನ ಸಿನಿಮಾದಲ್ಲಿ ದಿಯಾ ಮಿರ್ಜಾ ನಟಿಸಿದ್ದು ಆ ಸಿನಿಮಾ ಇನ್ನಷ್ಟೆ ಬಿಡುಗಡೆ ಆಗಬೇಕಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ಇನ್ನೊಮ್ಮೆ ನಮ್ಮ ಮನೆಗೆ ಬರಬೇಡ'ಎಂದ ನಟಿ ಕಿಯಾರಾ ಅಡ್ವಾಣಿ ?

Mon Jul 4 , 2022
‘ನೀವೆಂದರೆ ನನಗೆ ಎಷ್ಟು ಇಷ್ಟ ಅಂತ ತೋರಿಸಲು ಹೀಗೆ ಮಾಡಿದೆ’ ಎಂದು ಆತ ಉತ್ತರಿಸಿದ್ದ. ‘ಇನ್ನೊಮ್ಮೆ ನಮ್ಮ ಮನೆಗೆ ಬರಬೇಡ’ ಎಂದು ವಾರ್ನಿಂಗ್​ ನೀಡಿ ಆತನನ್ನು ಕಳಿಸಿದ್ದರು ಕಿಯಾರಾ ಅಡ್ವಾಣಿ.ನಟಿ ಕಿಯಾರಾ ಅಡ್ವಾಣಿ ಅವರು ಗೆಲುವಿನ ಖುಷಿಯಲ್ಲಿ ತೇಲುತ್ತಿದ್ದಾರೆ. ಅವರು ನಟಿಸಿದ ಸಿನಿಮಾಗಳು ಬ್ಯಾಕ್​ ಟು ಬ್ಯಾಕ್​ ಯಶಸ್ಸು ಕಾಣುತ್ತಿವೆ. ‘ಶೇರ್ಷಾ’, ‘ಭೂಲ್​ ಭುಲಯ್ಯ 2’  ಹಾಗೂ ‘ಜುಗ್​ಜುಗ್​ ಜಿಯೋ’ ಸಿನಿಮಾದಿಂದ ಅವರಿಗೆ ಹ್ಯಾಟ್ರಿಕ್​ ಗೆಲುವು ಸಿಕ್ಕಿದೆ. ‘ಜುಗ್​ಜುಗ್​ ಜಿಯೋ’ ಚಿತ್ರ ವಿಶ್ವಾದ್ಯಂತ […]

Advertisement

Wordpress Social Share Plugin powered by Ultimatelysocial