ಮೂರು ದಿನಗಳ ಕಾಲ ಭಾರಿ ಮಳೆ

ರಾಜ್ಯದ ಕರಾವಳಿ ಭಾಗದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುನ್ಸೂಚನೆಯ ಪ್ರಕಾರ, ಜಿಲ್ಲೆಗೆ 100 ಮಿ.ಮೀ ನಿಂದ 115 ಮಿ.ಮೀ ಮಳೆಯಾಗುವ ಸಾಧ್ಯತೆಯಿದೆ. ಜಿಲ್ಲಾ ಮತ್ತು ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರಬೇಕು. ನದಿಗಳು ಅಥವಾ ಸಮುದ್ರಕ್ಕೆ ಹೋಗದಂತೆ ನಾಗರಿಕರು ಕಾಳಜಿ ವಹಿಸಬೇಕು. ಅಪಾಯಕಾರಿ ವಿದ್ಯುತ್ ಕಂಬಗಳು, ಕಟ್ಟಡಗಳು ಮತ್ತು ಮರಗಳಿಂದ ದೂರವಿರಬೇಕು, ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯಬೇಕು ಎಂದು ತಿಳಿಸಲಾಗಿದೆ. ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ತಿಳಿಸಿದೆ.ಮತ್ತು ಕರಾವಾಳಿ ಭಾಗದ ಉಡುಪಿ,ಮಂಗಳೂರು ಭಾಗಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ

 

Please follow and like us:

Leave a Reply

Your email address will not be published. Required fields are marked *

Next Post

23 ಅಂಗಡಿಗಳ ಮಾಲೀಕರ ವಿರುದ್ಧ ಎಫ್‌ಐಆರ್

Sun Jun 28 , 2020
ರಾಯಚೂರು ಜಿಲ್ಲೆಯಲ್ಲಿ ಕೊರೊನಾ ವೈರಸ್ ನ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ಜೂನ್ 26ರಂದು ನಿಯಮ ಉಲ್ಲಂಘಿಸಿದ 12 ಅಂಗಡಿ ಮಾಲೀಕರ ವಿರುದ್ಧ ಕೇಸ್ ದಾಖಲಾಗಿತ್ತು ಮತ್ತು ಜೂನ್ 27ರಂದು ಮತ್ತೆ 8 ಅಂಗಡಿ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಅಂಗಡಿಗಳ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನಿರ್ಲಕ್ಷ್ಯ ವಹಿಸಲಾಗಿದೆ ಅಲ್ಲದೇ ಮಾಸ್ಕ್ ಧರಿಸದೇ ವ್ಯಾಪಾರ ನಡೆಸಿದ್ದಾರೆ. ಎಂಬ ಆರೋಪದ ಮೇಲೆ ಒಟ್ಟು 23 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. […]

Advertisement

Wordpress Social Share Plugin powered by Ultimatelysocial