ಮೃಣಾಲ್ ಠಾಕೂರ್ ‘ಜೆರ್ಸಿ’ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದರು. ಆದರೆ ಸಿನಿಮಾ ಮಾತ್ರ ಗೆಲ್ಲಲಿಲ್ಲ: ಎಂದ ಶಾಹಿದ್ ಕಪೂರ್

ಸೌತ್ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡ್ತಿದೆ. ಇತ್ತ ಬಾಲಿವುಡ್ ಮಂದಿ ಸೌತ್ ಸಿನಿಮಾಗಳನ್ನು ರೀಮೆಕ್ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಸಕ್ಸಸ್ ಮಾತ್ರ ಸಿಗುತ್ತಿಲ್ಲ. ಇತ್ತೀಚೆಗೆ ಬಾಲಿವುಡ್‌ಗೆ ರೀಮೆಕ್ ಆದ ಸಿನಿಮಾಗಳೆಲ್ಲಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿವೆ.

ಆ ಸಾಲಿಗೆ ಅಕ್ಷಯ್ ಕುಮಾರ್ ನಟನೆಯ ‘ಸೆಲ್ಫಿ’ ಕೂಡ ಸೇರಿಕೊಂಡಿದೆ. ಇದು ಬಾಲಿವುಡ್‌ಗೆ ದೊಡ್ಡ ತಲೆ ನೋವಾಗಿದೆ.

‘ವಿಕ್ರಂ ವೇದ’, ‘ಹಿಟ್’, ‘ಜೆರ್ಸಿ’, ‘ಷೆಹಜಾದಾ'(ಅಲಾ ವೈಕುಂಠಪುರಂಲೊ), ‘ಡ್ರೈವಿಂಗ್ ಲೈಸೆನ್ಸ್'(ಸೆಲ್ಫಿ) ಹೀಗೆ ಕಳೆದೊಂದು ವರ್ಷದಲ್ಲಿ ಸೌತ್‌ನಿಂದ ಬಾಲಿವುಡ್‌ಗೆ ರೀಮೆಕ್ ಆದ ಸಿನಿಮಾಗಳೆಲ್ಲಾ ಮುಗ್ಗರಿಸಿವೆ. ಇಲ್ಲಿ ಹಿಟ್ ಆದ ಸಿನಿಮಾಗಳು ಅಲ್ಲಿ ಯಾಕೆ ಸೋಲುತ್ತಿದೆ ಎನ್ನುವದು ಗೊತ್ತಾಗುತ್ತಿಲ್ಲ. ‘ಲವ್ ಟುಡೇ’, ‘ಸುರರೈ ಪೋಟ್ರು’, ‘ಎಫ್‌- 2’, ‘ಬ್ರೋಚೆವಾರೆವರುರಾ’, ‘ಖೈದಿ’, ‘ಕತ್ತಿ’, ‘ಅಯ್ಯಪ್ಪನುಂ ಕೋಶಿಯುಂ’ ಹೀಗೆ ಸಾಲು ಸಾಲು ಸಿನಿಮಾಗಳು ರೀಮೆಕ್ ಆಗುತ್ತಿವೆ. ಇವುಗಳ ಭವಿಷ್ಯ ಏನು ಎನ್ನುವುದು ಗೊತ್ತಿಲ್ಲ.

ಹಿಂದಿ ಪ್ರೇಕ್ಷಕರಿಗೆ ಸೌತ್ ಸಿನಿಮಾಗಳು ಇಷ್ಟ ಆಗ್ತಿದೆ. ಆದರೆ ಒರಿಜಿನಲ್ ಸಿನಿಮಾ ನೋಡ್ತಿದ್ದಾರೆ. ರೀಮೆಕ್ ಮಾಡಿದ್ರೆ ನೋಡುತ್ತಿಲ್ಲ. ಆದರೆ ಒಳ್ಳೆ ಸಿನಿಮಾಗಳನ್ನು ಒಪ್ಪದೇ ಇರುವುದದನ್ನು ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ನಟ ಶಾಹಿದ್ ಕಪೂರ್ ಹೇಳಿದ್ದಾರೆ. ತೆಲುಗಿನಲ್ಲಿ ನಾನಿ ನಟಿಸಿದ ‘ಜೆರ್ಸಿ’ ಸಿನಿಮಾ ಹಿಟ್ ಆಗಿತ್ತು. ಇದೇ ಚಿತ್ರವನ್ನು ಶಾಹಿದ್ ಕಪೂರ್ ಹಿಂದಿಗೆ ಅದೇ ಟೈಟಲ್‌ನಲ್ಲಿ ರೀಮೆಕ್ ಮಾಡಿದ್ದರು. ಕೋವಿಡ್ ಕಾರಣದಿಂದ ರಿಲೀಸ್ ತಡವಾಗಿತ್ತು. ಆದರೆ ಪ್ರೇಕ್ಷಕರು ಸಿನಿಮಾ ನೋಡಲಿಲ್ಲ.

‘ಜೆರ್ಸಿ’ ಸೋಲಿನ ಬಗ್ಗೆ ಮಾತನಾಡಿರುವ ನಟ ಶಾಹಿದ್ ಕಪೂರ್ “ನನ್ನ ಹೃದಯವೇ ಒಡೆದು ಹೋಗಿತ್ತು. ಬಹಳ ಒಳ್ಳೆಯ ಸಿನಿಮಾ ಅದು. ಆದರೆ ಪ್ರಪಂಚ ನಮ್ಮ ಮೇಲೆ ಕರುಣೆ ತೋರಲಿಲ್ಲ. ಸಾಂಗ್ಸ್ ರಿಲೀಸ್ ಆದ ಮೇಲೆ ಸಿನಿಮಾ ರಿಲೀಸ್ 4 ತಿಂಗಳು ತಡವಾಯಿತು. ಪ್ರೇಕ್ಷಕರು ನಮ್ಮ ಕೈ ಹಿಡಿಯಲಿಲ್ಲ. ‘ಜೆರ್ಸಿ’ ಸಿನಿಮಾದಿಂದ ನನಗೆ ಒಂದು ಅರ್ಥವಾಯಿತು. ಸಿನಿಮಾ ಅನ್ನೋದು ಫಾಸ್ಟ್‌ಫುಡ್, ಬೇಗ ರಿಲೀಸ್ ಆಗಬೇಕು. ಇಲ್ಲದಿದ್ದರೆ ಮಜಾ ಹೋಗಿಬಿಡುತ್ತೆ”

“ಪ್ಯಾಂಡಮಿಕ್ ಸಮಯದಲ್ಲಿ ಏನು, ಎತ್ತ ಎನ್ನುವುದು ಗೊತ್ತಾಗಲಿಲ್ಲ. ಆದರೆ ಕೊನೆಗೆ ನಮ್ಮ ಸಿನಿಮಾ ಸೋಲುವಂತಾಯಿತು. ಚಿತ್ರಕ್ಕೆ ನಾವು ನ್ಯಾಯ ಸಲ್ಲಿಸಲಿಲ್ಲ ಎಂದು ನನಗೆ ಅನ್ನಿಸುತ್ತದೆ. ಕೆಲ ಉತ್ತಮ ಆಯ್ಕೆಗಳು ನಮ್ಮ ಮುಂದಿತ್ತು. ನನಗೂ ಗೊತ್ತಿಲ್ಲ. ಕೆಲವೊಮ್ಮೆ ಹೀಗೆ ಆಗುತ್ತದೆ. ಎಲ್ಲವೂ ನಮ್ಮ ಹಿಡಿತದಲ್ಲಿ ಇದ್ದರು. ಕೆಲವೊಮ್ಮೆ ಏನು ಇರುವುದಿಲ್ಲ” ಎಂದು ಶಾಹಿದ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. 2019ರಲ್ಲಿ ‘ಜೆರ್ಸಿ’ ಸಿನಿಮಾ ತೆಲುಗಿನಲ್ಲಿ ತೆರೆಕಂಡು ಹಿಟ್ ಆಗಿತ್ತು. ತೆಲುಗು ಚಿತ್ರವನ್ನು ನಿರ್ದೇಶನ ಮಾಡಿದ್ದ ಗೌತಮ್ ತಿನ್ನನೂರು ಹಿಂದಿಯಲ್ಲೂ ಚಿತ್ರವನ್ನು ಕಟ್ಟಿಕೊಟ್ಟಿದ್ದರು.

ಮೃಣಾಲ್ ಠಾಕೂರ್ ‘ಜೆರ್ಸಿ’ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದರು. ಆದರೆ ಸಿನಿಮಾ ಮಾತ್ರ ಗೆಲ್ಲಲಿಲ್ಲ. ಸದ್ಯ ‘ಫರ್ಝಿ’ ವೆಬ್ ಸೀರಿಸ್‌ನಲ್ಲಿ ನಟ ಶಾಹಿದ್ ಕಪೂರ್ ನಟಿಸಿದ್ದಾರೆ. ಅದಕ್ಕೆ ಒಳ್ಳೆ ರೆಸ್ಪಾನ್ಸ್ ಸಿಗುತ್ತಿದೆ. ಇದರ ಮುಂದುವರೆದ ಭಾಗದ ಬಗ್ಗೆಯೂ ಶಾಹಿದ್ ಕಪೂರ್ ಸುಳಿವು ನೀಡಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ವಿಜಯಪುರ ಮಹಾನಗರ ಪಾಲಿಕೆಗೆ ಬೀಗ ಹಾಕಿ ಪ್ರತಿಭಟನೆ.

Thu Mar 2 , 2023
  ರಾಜ್ಯ ಸರಕಾರಿ ನೌಕರರ ಸಂಘದ ಮುಷ್ಕರ  ವಿಜಯಪುರದಲ್ಲೂ ನೌಕರರ ಮುಷ್ಕರ ವಿಜಯಪುರ ಮಹಾನಗರ ಪಾಲಿಕೆಗೆ ಬೀಗ ಹಾಕಿ ಪ್ರತಿಭಟನೆ ಜಿಲ್ಲಾ ಘಟಕದಿಂದ ಪ್ರತಿಭಟನೆ ಜಿಲ್ಲಾಧ್ಯಕ್ಷ ಸುರೇಶ ಶೇಡಶ್ಯಾಳ ನೇತೃತ್ವದಲ್ಲಿ ಬೀಗ ಹಾಕಿ ಪ್ರತಿಭಟನೆ ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿ ಬೇಡಿಕೆ ಈಡೇರಿಕೆಗೆ ಆಗ್ರಹ ಮುಷ್ಕರಕ್ಕೆ ಪಾಲಿಕೆ ಸಫಾಯಿ ಕರ್ಮಚಾರಿಗಳು ಸಾಥ್ ರಾಜ್ಯ ಸರ್ಕಾರಿ ನೌಕರರ ಬೇಡಿಕೆಗೆ ಸ್ಪಂದಿಸಬೇಕೆಂದು ಜಿಲ್ಲಾಧ್ಯಕ್ಷ ಸುರೇಶ ಶೇಡಶ್ಯಾಳ್ ಆಗ್ರಹ.   ಇತ್ತೀಚಿನ ಸುದ್ದಿಗಳಿಗಾಗಿ […]

Advertisement

Wordpress Social Share Plugin powered by Ultimatelysocial