ಮೃತರ ಕುಟುಂಬಕ್ಕೆ 30 ಲಕ್ಷ ಚೆಕ್

ಕರ್ತವ್ಯ ನಿರತದಲ್ಲಿದ್ದಾಗ ಕಿಲ್ಲರ್ ಕೊರೊನಾ ಸೋಂಕು ತಗುಲಿ ಮೃತಪಟ್ಟವರಿಗೆ ಪೋಲಿಸ್ ಇಲಾಖೆಯು 30 ಲಕ್ಷ ರೂಪಾಯಿಗಳ ಧನಸಹಾಯವನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದೆ. ಕಲಾಸಿಪಾಳ್ಯ ಠಾಣೆಯ ಹೆಚ್ ಸಿ ಬೇಲೂರಯ್ಯ,ವಿವಿ ಪುರಂ ಠಾಣೆಯ ಎ ಎಸ್ ಐ ಶಿವಣ್ಣ, ಹಾಗೂ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯ ಕಲ್ಕಯ್ಯ ಹಿರೇಮಠ್ ಮೃತಪಟ್ಟ ಪೋಲಿಸ್ ಸಿಬ್ಬಂದಿಗಳು. ಈ ಸಂಧರ್ಭದಲ್ಲಿ ಗೃಹ ಸಚಿವರು ಮತ್ತು ಪೋಲಿಸ್ ಇಲಾಖೆ ಮುಖ್ಯಸ್ಥರಾದ ಡಿಜಿ ಅಂಡ್ ಐಜಿಪಿ ಶ್ರೀ ಪ್ರವೀಣ್ ಸೂದ್ ಮತ್ತು ಪೊಲೀಸ್ ಕಮಿಷನರ್ ಶ್ರೀ ಭಾಸ್ಕರ್ ರಾವ್ ರವರು ಉಪಸ್ಥಿತರಿದ್ದರು. ಹಾಗೆಯೇ ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡ್ತಿರೋ ಪೊಲೀಸ್ ಸಿಬ್ಬಂದಿಗಳಿಗೆ ಯಾರೂ ಕೂಡ ದೃತಿಗೆಡಬೇಡಿ ಧೈರ್ಯದಿಂದಿರಿ ಎಂದು ಗೃಹ ಸಚಿವರು ಹೇಳಿದ್ದಾರೆ.  ಅಲ್ಲದೇ  ಬೇರೆ ರಾಜ್ಯಗಳಿಗೆ ಹೋಲಿಸಿಕೊಂಡರೆ ಕರ್ನಾಟಕ ಪೊಲೀಸರು ಯಶ್ವಿಯಾಗಿದ್ದಾರೆ ನಾವು ಯಾವೊಬ್ಬ  ಪೊಲೀಸರನ್ನು ಕೂಡ ಬಿಡೋದಿಲ್ಲ ಎಲ್ಲರ ಮೇಲೂ ನಾವು ಜವಾಬ್ದಾರಿ ಹೊಂದಿದ್ದೇವೆ ಎಂದು ಹೇಳಿದ್ದಾರೆ

 

 

 

 

 

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರಿಗರೇ ಚಿಂತೆ ಬಿಡಿ

Fri Jun 26 , 2020
ಇನ್ಮುಂದೆ ಬೆಂಗಳೂರಿಗರು ಚಿಂತಿಸುವ ಅಗತ್ಯವಿಲ್ಲ ಪ್ರತೀ ಎರಡು ವಾರ್ಡ್ ಗಳಿಗೆ ಒಂದೊಂದು ಆ್ಯಂಬುಲೆನ್ಸ್ ಗಳನ್ನು ಮೀಸಲಿಡಲಾಗಿದೆ ಎಂದು ಸಚಿವ ಆರ್ ಅಶೋಕ್ ಹೇಳಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ದಿನಕಳೆದಂತೆ ಕೊರೋನಾ ಆರ್ಭಟ ಹೆಚ್ಚಾಗಿದ್ದು, ಸಮಯಕ್ಕೆ ಸರಿಯಾಗಿ ಆ್ಯಂಬುಲೆನ್ಸ್ ಸಿಗದೇ ರೋಗಿಗಳು ಪರದಾಡುತ್ತಿರುವ ಸುದ್ದಿಗಳ ನಡುವೆಯೇ ಕಂದಾಯ ಸಚಿವ ಈ ಸಂಬಂಧ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಕೋವಿಡ್‌ ದೃಢಪಟ್ಟ ರೋಗಿಗಳು ಕಾಯುವ ಸ್ಥಿತಿ ಬರಬಾರದೆಂದು ಹೇಳಿದ್ದಾರೆ. ಹಾಗೂ ತಪಾಸಣಾ ವರದಿ ಬಂದ 6–8 […]

Advertisement

Wordpress Social Share Plugin powered by Ultimatelysocial