ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ, ಇದಕ್ಕೆ ಇಲ್ಲದ ಕಥೆ, ಕಾರಣಗಳನ್ನು ತಳುಕು ಹಾಕಬೇಡಿ : ಶಾಸಕ ಜಮೀರ್ ಅಹ್ಮದ್ ಖಾನ್

ಶ್ರೀ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಅಲ್ಪಸಂಖ್ಯಾತರ ಜೀವನಮಟ್ಟ ಸುಧಾರಣೆಗೆ ಅಗತ್ಯ ಯೋಜನೆಗಳು, ಅನುದಾನವನ್ನು ನೀಡಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಲು ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ, ಇದಕ್ಕೆ ಇಲ್ಲದ ಕಥೆ, ಕಾರಣಗಳನ್ನು ತಳುಕು ಹಾಕಬೇಡಿ : ಶಾಸಕ ಜಮೀರ್ ಅಹ್ಮದ್ ಖಾನ್

ನನ್ನ ಹೇಳಿಕೆಗಳನ್ನು ತಿರುಚಲಾಗುತ್ತಿದೆ. ಶ್ರೀ ಸಿದ್ದರಾಮಯ್ಯ ಅವರು 2013 ರಿಂದ 2018 ರಲ್ಲಿ ಮುಖ್ಯಮಂತ್ರಿಗಳಾಗಿದ್ದಾಗ, ಅಲ್ಪಸಂಖ್ಯಾತರಿಗೆ ಹಿಂದೆಂದೂ, ಯಾರೂ ನೀಡಿರದ ಹೆಚ್ಚಿನ ಅನುದಾನ ನೀಡಿದರು ಮತ್ತು ಅವರ ಜೀವನಮಟ್ಟ ಸುಧಾರಣೆಗೆ ಅಗತ್ಯ ಯೋಜನೆಗಳನ್ನು ತಂದರು. ಅವರ ಸೇವೆಯನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರ ಖುಣ ತೀರಿಸಲು ಇದೊಂದು ಸದವಕಾಶ. ಅಲ್ಪಸಂಖ್ಯಾತರ ವತಿಯಿಂದ ಅವರಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ದಯವಿಟ್ಟು ಇದಕ್ಕೆ ಇಲ್ಲದ ಕಥೆ, ಕಾರಣಗಳನ್ನು ತಳುಕು ಹಾಕಬೇಡಿ ಎಂದು ಚಾಮರಾಜಪೇಟೆ ಶಾಸಕರು ಹಾಗೂ ಮಾಜಿ ಸಚಿವರಾದ ಶ್ರೀ ಬಿ ಜೆಡ್ ಜಮೀರ್ ಅಹ್ಮದ್ ಖಾನ್ ಅವರು ಪ್ರತಿಕ್ರಿಯಿಸಿದ್ದಾರೆ.

ಆಗಸ್ಟ್ ತಿಂಗಳಲ್ಲಿ ನಡೆಯಲಿರುವ ಶ್ರೀ ಸಿದ್ದರಾಮಯ್ಯ ಅವರ 75ನೇ ಜನ್ಮದಿನದ ಅಮೃತ ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರು ಭಾಗವಹಿಸುವಂತೆ ಮನವಿ ಮಾಡಲು, ಬೆಳಗಾವಿ, ಹುಬ್ಬಳ್ಳಿ – ಧಾರವಾಡ, ಹಾವೇರಿ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿ ಅಲ್ಪಸಂಖ್ಯಾತರು, ಜಿಲ್ಲಾ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಪೂರ್ವ ಭಾವಿ ಸಭೆ ನಡೆಸಿ ವಿಚಾರ ವಿನಿಮಯ ಮಾಡಿಕೊಂಡಿರುವ ಅವರು, ಪ್ರವಾಸದ ಕೊನೆಯ ದಿನವಾದ ಇಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ಇದೇ ವೇಳೆ, ರಾಜ್ಯದ ಸರ್ವತೋಮುಖ ಅಭಿವೃದ್ಧಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮಾತ್ರ ಸಾಧ್ಯ ಎಂದು ಹೇಳುವುದನ್ನು ಶಾಸಕ ಜಮೀರ್ ಅಹ್ಮದ್ ಖಾನ್ ಅವರು ಮರೆಯಲಿಲ್ಲ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ನಕಲಿ ರಸಗೊಬ್ಬರ ಮಾರಾಟ : ಅಂಗಡಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರವೇ ಆಗ್ರಹ

Wed Jul 27 , 2022
ಸುರಪುರ ತಾಲೂಕಿನ ಬಾದ್ಯಾಪೂರ ಗ್ರಾಮದ ಶ್ರೀ ಮಂಜುನಾಥ ಕೃಷಿ ಕೇಂದ್ರದಲ್ಲಿ ನಕಲಿ ರಸಗೊಬ್ಬರ ಮಾಡುತ್ತಿರುವದನ್ನು ಖಂಡಿಸಿ ಕ.ರ.ವೇ ಗ್ರಾಮ ಘಟಕದ ವತಿಯಿಂದ ರಸಗೊಬ್ಬರ ಮಳಿಗೆಯ ಮುಂದೆ ಪ್ರತಿಭಟನೆ ನಡೆಸಿದರು. ಮಾಚಗುಂಡಾಳ ಗ್ರಾಮದ ರೈತ ಶಿವಪ್ಪ ನಾಗನಟಿಗಿ ಎಂಬುವರು ಕಳೆದ ಮೂರು ದಿನಗಳ ಹಿಂದೆ ಬಾದ್ಯಾಪೂರ ಗ್ರಾಮದ ಶ್ರೀ ಮಂಜುನಾಥ ಕೃಷಿ ಕೇಂದ್ರದಲ್ಲಿ 10- 26 -26 ಹಾಗೂ 17 -17 – 17 ರಸ ಗೊಬ್ಬರವನ್ನು ಪ್ರತಿ ಚೀಲಕ್ಕೆ 1450 […]

Advertisement

Wordpress Social Share Plugin powered by Ultimatelysocial