PM Modi Birthday: ರಾಷ್ಟ್ರಪತಿ ಮುರ್ಮು, ಖರ್ಗೆ ಸೇರಿ ಗಣ್ಯರಿಂದ ಮೋದಿಗೆ ಶುಭಾಶಯಗಳ ಸುರಿಮಳೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 73ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ದೇಶಾದ್ಯಂತ ಬಿಜೆಪಿಯು ಹಲವು ಸೇವಾ ಕಾರ್ಯಕ್ರಮಗಳ ಮೂಲಕ ಮೋದಿ ಜನ್ಮದಿನವನ್ನು ಆಚರಿಸುತ್ತಿದೆ. ಮಕ್ಕಳು, ಕಲಾವಿದರು ಕೂಡ ಪ್ರಧಾನಿ ಜನ್ಮದಿನ ಆಚರಿಸಿದ್ದಾರೆ. ಇದರ ಬೆನ್ನಲ್ಲೇ ರಾಷ್ಟ್ರಪತಿ ದ್ರೌಪದಿ ಮುರ್ಮು, ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕ ರಾಹುಲ್‌ ಗಾಂಧಿ, ಕೇಂದ್ರ ಸಚಿವ ಅಮಿತ್‌ ಶಾ ಸೇರಿ ಹಲವು ಗಣ್ಯರು ಪ್ರಧಾನಿಗೆ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ.

‘ನರೇಂದ್ರ ಮೋದಿ ಅವರಿಗೆ ಜನ್ಮದಿನದ ಶುಭಾಶಯಗಳು. ನಿಮ್ಮ ನಾಯಕತ್ವ ಹಾಗೂ ದೂರದೃಷ್ಟಿಯಿಂದ ದೇಶವು ಇನ್ನಷ್ಟು ಅಭಿವೃದ್ಧಿ ಹೊಂದಲಿ. ಅಭಿವೃದ್ಧಿಯ ಅಮೃತಕಾಲ ತಲುಪಲಿ. ನಿಮ್ಮ ನಾಯಕತ್ವದಲ್ಲಿ ದೇಶದ ಜನರಿಗೆ ಮತ್ತಷ್ಟು ಮಗದಷ್ಟು ಒಳಿತಾಗಲಿ’ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ಎಕ್ಸ್‌ ಪೋಸ್ಟ್‌ ಮೂಲಕ ಮೋದಿ ಅವರಿಗೆ ಶುಭ ಕೋರಿದ್ದಾರೆ. ‘ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನ್ಮದಿನದ ಶುಭಕಾಮನೆಗಳು. ಉತ್ತಮ ಆರೋಗ್ಯ, ಆಯಸ್ಸು ನಿಮ್ಮದಾಗಲಿ ಎಂಬುದಾಗಿ ಪ್ರಾರ್ಥಿಸುತ್ತೇನೆ’ ಎಂದಿದ್ದಾರೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು, ‘ಪಿಎಂ ಮೋದಿ ಅವರಿಗೆ ಜನ್ಮದಿನದ ಶುಭಾಶಯ’ ಎಂದು ಪೋಸ್ಟ್‌ ಮಾಡಿದ್ದಾರೆ.

ನಾಯಕತ್ವ ಬಣ್ಣಿಸಿದ ಅಮಿತ್‌ ಶಾ

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ನರೇಂದ್ರ ಮೋದಿ ಅವರಿಗೆ ಜನ್ಮದಿನದ ಶುಭಾಶಯ ತಿಳಿಸುವ ಜತೆಗೆ ಅವರ ನಾಯಕತ್ವವನ್ನು ಬಣ್ಣಿಸಿದ್ದಾರೆ. ‘ನಾಯಕತ್ವ, ಸೂಕ್ಷ್ಮದರ್ಶಿತ್ವ ಹಾಗೂ ಪರಿಶ್ರಮದ ವಿರಳ ಸಮ್ಮಿಳಿತವೇ ನರೇಂದ್ರ ಮೋದಿ. ಇವರು ದೇಶದ ಅಭಿವೃದ್ಧಿಯ ದಿಸೆ, ಲೆಕ್ಕಾಚಾರ, ದೃಷ್ಟಿಕೋನವನ್ನೇ ಬದಲಾಯಿಸಿದ್ದಾರೆ’ ಎಂದು ಅಮಿತ್‌ ಶಾ ಪೋಸ್ಟ್‌ ಮಾಡಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಶುಭಾಶಯ ತಿಳಿಸುವ ಜತೆಗೆ ಮೋದಿ ಅವರನ್ನು ‘ಜಗತ್ತಿನ ಜನಪ್ರಿಯ ನಾಯಕ’ ಎಂದಿದ್ದಾರೆ. ಹಾಗೆಯೇ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಪಾಕಿಸ್ತಾನ ಮಾಜಿ ಕ್ರಿಕೆಟಿಗ ದನೀಶ್‌ ಕನೇರಿಯಾ, ಭಾರತದ ಕ್ರಿಕೆಟಿಗ ಚೇತೇಶ್ವರ ಪೂಜಾರ ಸೇರಿ ಎಲ್ಲ ಕ್ಷೇತ್ರಗಳ ಗಣ್ಯರು ಮೋದಿ ಅವರಿಗೆ ಶುಭಾಶಯ ಕೋರಿದ್ದಾರೆ.

The post PM Modi Birthday: ರಾಷ್ಟ್ರಪತಿ ಮುರ್ಮು, ಖರ್ಗೆ ಸೇರಿ ಗಣ್ಯರಿಂದ ಮೋದಿಗೆ ಶುಭಾಶಯಗಳ ಸುರಿಮಳೆ

Please follow and like us:

tmadmin

Leave a Reply

Your email address will not be published. Required fields are marked *

Next Post

ಪ್ರಯಾಣಿಕರಿಗೆ ಗುಡ್ ನ್ಯೂಸ್: ವಂದೇ ಭಾರತ್ ಸ್ಲೀಪರ್ ಕೋಚ್, ಮೆಟ್ರೋ ರೈಲು ಶೀಘ್ರ ಆರಂಭ

Sun Sep 17 , 2023
ನವದೆಹಲಿ: ಈಗಾಗಲೇ ದೇಶದ 25 ಮಾರ್ಗಗಳಲ್ಲಿ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸಂಚಾರ ಆರಂಭವಾಗಿದೆ. ಇದರ ಬೆನ್ನಲ್ಲೇ ವಂದೇ ಭಾರತ್ ಸ್ಲೀಪರ್ ಕೋಚ್ ಹಾಗೂ ವಂದೇ ಭರತ್ ಮೆಟ್ರೋ ರೈಲು ಕೂಡ ಶೀಘ್ರದಲ್ಲಿ ಆರಂಭವಾಗಲಿದೆ. ವಂದೇ ಭಾರತ್ ಸ್ಲೀಪರ್ ಕೋಚ್ ಹಾಗೂ ಮೆಟ್ರೋ ರೈಲು ಆರಂಭಿಸುವ ಬಗ್ಗೆ ಭಾರತೀಯ ರೈಲ್ವೆ ಇಲಾಖೆ ನಿರ್ಧರಿಸಿದೆ. ಈ ಬಗ್ಗೆ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯ ಜನರಲ್ ಮ್ಯಾನೇಜರ್ ಬಿ.ಜಿ.ಮಲ್ಯ ಮಾಹಿತಿ ನೀಡಿದ್ದಾರೆ. ಈಗಾಗಲೇ ವಂದೇ […]

Advertisement

Wordpress Social Share Plugin powered by Ultimatelysocial