ಜೋಳದ ರೊಟ್ಟಿ ತಿಂದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಕ್ಕಿ ತಿಂದವ ಹಕ್ಕಿ, ಜೋಳ ತಿಂದವ ತೋಳ’ ಎಂಬ ಮಾತೇ ಇದೆ. ಉತ್ತರ ಕರ್ನಾಟಕದ ಮಂದಿಯನ್ನು ನೋಡುವಾಗ ಈ ಮಾತು ಸತ್ಯ ಅನಿಸುವುದು. ತೆಳ್ಳಗೆ ಗಟ್ಟಿಮುಟ್ಟಾಗಿರುವ ಅವರ ಆರೋಗ್ಯದ ರಹಸ್ಯವೇ ಜೋಳದ ರೊಟ್ಟಿ, ಕಡಕ್‌ ರೊಟ್ಟಿ ಎಂದರೆ ತಪ್ಪಾಗಲಾರದು.ಜೋಳದ ರೊಟ್ಟಿ ತಿಂದಿಲ್ಲ ಎಂದರೆ ಅವರಿಗೆ ಆಹಾರ ಸೇವಿಸಿದಂತೆ ಆಗುವುದೇ ಇಲ್ಲ, ಜೋಳದ ರೊಟ್ಟಿ ಬದನೆಕಾಯಿಪಲ್ಯ ಕಾಂಬಿನೇಷನ್‌ ಅಂತೂ ತುಂಬಾನೇ ಸೂಪರ್ ಆಗಿರುತ್ತದೆ.ಉತ್ತರ ಕರ್ನಾಟದ ಪ್ರಸಿದ್ಧ ಆಹಾರವಾಗಿರುವ ಜೋಳದ ರೊಟ್ಟಿ ತಿಂದರೆ ಈ ಪ್ರಮುಖ ಪ್ರಯೋಜನಗಳಿವೆ ನೋಡಿ:

ಜೋಳದ ರೊಟ್ಟಿ ಗ್ಲುಟೀನ್ ಮುಕ್ತ ಆಹಾರಜೋಳದ ರೊಟ್ಟಿ ಮಧುಮೇಹಿಗಳಿಗೂ ಅತ್ಯುತ್ತಮವಾದ ಆಹಾರವಾಗಿದೆ. ಇದರಲ್ಲಿ ನಾರಿನಂಶ ಅಧಿಕವಾಗಿರುತ್ತದೆ, ಆದ್ದರಿಂದ ಜೀರ್ಣಕ್ರಿಯೆಗೂ ಒಳ್ಳೆಯದು. ಜೋಳ ತಿನ್ನುವುದರಿಂದ ದೇಹದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ಸಹಕಾರಿ ಹಾಗೂ ಕೊಲೆಸ್ಟ್ರಾಲ್ ಕೂಡ ಕಡಿಮೆ ಮಾಡುತ್ತದೆ.ಕಿಡ್ನಿ ಲಿವರ್‌ನ ಆರೋಗ್ಯಕ್ಕೆ ಒಳ್ಳೆಯದುಪ್ರತಿನಿತ್ಯ ಜೋಳದ ರೊಟ್ಟಿ ತಿನ್ನುವುದರಿಂದ ದೇಹದಲ್ಲಿ ರೋಗ ನಿರೋಧ ಶಕ್ತಿ ಹೆಚ್ಚುವುದು. ಜೀರ್ಣಕ್ರಿಯೆ ಚೆನ್ನಾಗಿ ಆಗುವುದರಿಂದ ಕಿಡ್ನಿ ಹಾಗೂ ಲಿವರ್‌ನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಗ್ಯಾಸ್ಟ್ರಿಕ್, ಮಲಬದ್ಧತೆ ಸಮಸ್ಯೆ ತಡೆಗಟ್ಟಲು ಸಹಕಾರಿಯಾರಿಗೆ ಗ್ಯಾಸ್ಟ್ರಿಕ್‌ ಸಮಸ್ಯೆ ಇದೆಯೋ ಅವರು ಜೋಳದ ರೊಟ್ಟಿಯ ಆಹಾರ ಪದ್ಧತಿಗೆ ಬದಲಾಗಿ ನೋಡಿ ಗ್ಯಾಸ್ಟ್ರಿಕ್ ಸಮಸ್ಯೆ ಕಡಿಮೆಯಾಗುವುದು ಅಲ್ಲದೆ ಮಲಬದ್ಧತೆ ಸಮಸ್ಯೆ ಹೋಗಲಾಡಿಸಲು ಕೂಡ ಸಹಕಾರಿ. ಅತಿಯಾದ ಅಸಿಡಿಟಿ, ಹೊಟ್ಟೆ ಉಬ್ಬುವುದು ಈ ಬಗೆಯ ಸಮಸ್ಯೆ ಕೂಡ ಇರುವುದಿಲ್ಲ.

ಜೋಳದ ರೊಟ್ಟಿ ತಿಂದಾಗ ದೊರೆಯುವ ಪೋಷಕಾಂಶಗಳುಜೋಳದ ರೊಟ್ಟಿಯಲ್ಲಿ ವಿಟಮಿನ್‌ ಎ, ಸಿ, ಕೆ ಮತ್ತು ಬಿ ವಿಟಮಿನ್‌ಗಳಿವೆ ಅಲ್ಲದೆ ಇದರಲ್ಲಿ ಕಬ್ಬಿಣದಂಶ, ರಂಜಕ, ಆಯಂಟಿಆಕ್ಸಿಡೆಂಟ್‌ ಅಧಿಕವಿರುವುದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.

ಇನ್ನು ಜೋಳದ ರೊಟ್ಟಿ ಸವಿಯಲು ಶೇಂಗಾ ಬೀಜದ ಚ್ಟನಿ ಪುಡಿ, ತುಪ್ಪ, ತರಕಾರಿ ಪಲ್ಯ ಇವುಗಳನ್ನು ಬಳಸುತ್ತೇವೆ, ಇದರಿಂದಾಗಿ ತರಕಾರಿಯಲ್ಲಿರುವ ಪೋಷಕಾಂಶಗಳು ದೇಹವನ್ನು ಸೇರುತ್ತದೆ.

ಗರ್ಭಿಣಿಯರಿಗೆ ಒಳ್ಳೆಯದುಭ್ರೂಣದಲ್ಲಿರುವ ಮಗುವಿನ ಬೆಳವಣಿಗೆಗೆ ಜೋಳದ ರೊಟ್ಟಿ ತುಂಬಾ ಒಳ್ಳೆಯದು. ಹೆರಿಗೆಯ ಬಳಿಕ ಜೋಳದ ರೊಟ್ಟಿ ತಿನ್ನುವುದರಿಂದ ದೇಹಕ್ಕೆ ಅಗ್ಯತವಿರುವ ಪೋಷಕಾಂಶ ದೊರೆಯುತ್ತದೆ, ಮೈ ಬೊಜ್ಜು ಹೆಚ್ಚಾಗುವುದನ್ನು ತಡೆಗಟ್ಟಬಹುದು.ಥೈರಾಯ್ಡ್‌ ಗ್ರಂಥಿ ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಕಾರಿಇದರಲ್ಲಿ ಅತ್ಯಧಿಕ ಬೀಟಾಕೆರೋಟಿನ್‌ ಹಾಗೂ ಸೆಲೆನಿಯಮ್‌ ಇರುವುದರಿಂದ ಥೈರಾಯ್ಡ್‌ ಗ್ರಂಥಿ ಸರಿಯಾಗಿ ಕಾರ್ಯನಿರ್ವಹಿಸಲು ತುಂಬಾನೇ ಸಹಕಾರಿ.

ಜೋಳದ ರೊಟ್ಟಿ ಮಾಡುವುದು ಹೇಗೆ?

ಮೊದಲಿಗೆ ಸ್ವಲ್ಪ ನೀರಿಗೆ ಉಪ್ಪು ಹಾಕಿ ಕುದಿಸಬೇಕು, ನೀರು ಕುದಿ ಬರುವಾಗ ಜೋಳದ ಹಿಟ್ಟು ಹಾಕಿ ಕಲೆಸಬೇಕು, ಆಗ ಮುದ್ದೆ ರೀತಿಯಾಗುವುದು, ಅದು ಗಟ್ಟಿಯಾಗದಿರಲು ಸ್ವಲ್ಪ ನೀರು ಹಾಕಿ. ಅದಕ್ಕೆ ಜಿಗಟು ಅಂತಾರೆ.

* ಈಗ ಸ್ವಲ್ಪ ಜಿಗಟು ತೆಗೆದು ಅದಕ್ಕೆ ಜೋಳದ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು, ನಂತರ ಸ್ವಲ್ಪ ನೀರು ಸೇರಿಸಿ ಚಪಾತಿಗೆ ಕಲೆಸಿದಂತೆ ಕಲೆಸಿ, ನಂತರ ಸ್ವಲ್ಪ ಪುಡಿ ಉದುರಿಸಿ ರೊಟ್ಟಿ ತಟ್ಟಬೇಕು.

* ನಂತ ಹಂಚು ಬಿಸಿ ಮಾಡಿ ಅದಕ್ಕೆ ರೊಟ್ಟಿ ಹಾಕಿ, ಚಿಕ್ಕ ಬಟ್ಟೆಯನ್ನು ನೀರಿಗೆ ಅದ್ದಿ ರೊಟ್ಟಿ ಮೇಲೆ ಒತ್ತಬೇಕು. ಎರಡು ಬದಿ ಚೆನ್ನಾಗಿ ಬೆಂದರೆ ಜೋಳದ ರೊಟ್ಟಿ ರೆಡಿ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಫ್ರಾನ್ಸ್ ಫುಟ್‌ಬಾಲ್ ದಿಗ್ಗಜ ಜಸ್ಟ್ ಫಾಂಟೇನ್ ಇನ್ನಿಲ್ಲ,

Thu Mar 2 , 2023
ಪ್ಯಾರಿಸ್ (ಎಎಫ್‌ಪಿ): ಫ್ರಾನ್ಸ್ ಫುಟ್‌ಬಾಲ್ ತಂಡದ ದಿಗ್ಗಜ ಸ್ಟ್ರೈಕರ್ ಜಸ್ಟ್ ಲೂಯಿಸ್ ಫಾಂಟೇನ್ (89) ಬುಧವಾರ ನಿಧನರಾದರು.1958ರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಅವರು ಗಳಿಸಿದ್ದ 13 ಗೋಲುಗಳ ಸಾಧನೆ ಅವಿಸ್ಮರಣೀಯವಾಗಿದೆ. ಏಕೆಂದರೆ ಆರು ಪಂದ್ಯಗಳಲ್ಲಿ ಅವರು ಮಾಡಿದ್ದ ದಾಖಲೆಯನ್ನು ಮುರಿಯುವುದು ಬಹುಕಾಲದವರೆಗೆ ಸಾಧ್ಯವಾಗಿರಲಿಲ್ಲ. ಇದುವರೆಗೂ ಜಸ್ಟ್‌ ಅವರಿಗಿಂತ ಹೆಚ್ಚು ಗೋಲು ಗಳಿಸಿದವರು ಮೂವರು ಆಟಗಾರರು ಮಾತ್ರ. ಜರ್ಮನಿಯ ಮಿರೊಸ್ಲೋವ್ ಕ್ಲೋಸ್ (16), ಬ್ರೆಜಿಲ್‌ನ ರೊನಾಲ್ಡೊ (15) ಮತ್ತು ವೆಸ್ಟ್ ಜರ್ಮನಿಯ […]

Advertisement

Wordpress Social Share Plugin powered by Ultimatelysocial