ಮೈಸೂರಲ್ಲಿ ಕೊರಗಜ್ಜ ದೈವದ ಹೆಸರಲ್ಲಿ ದಂಧೆ; ದೈವಸ್ಥಾನದ ಟ್ರಸ್ಟ್​ ಸದಸ್ಯರಲ್ಲಿಯೇ ಹಣಕ್ಕಾಗಿ ಕಿತ್ತಾಟ

 

 

ಮೈಸೂರು: ಆರ್.ಟಿ.ನಗರದಲ್ಲಿ ಮಂಗಳೂರಿನ ದೈವಗಳು ಗುಡಿಗಳು ತಲೆ ಎತ್ತಿದ್ದು, ಜನರ ನಂಬಿಕೆಯಾದ ಕೊರಗಜ್ಜ ದೈವದ ಹೆಸರಿನಲ್ಲಿ ದಂಧೆ ನಡೆಯುತ್ತಿದ್ದೆಯಾ ಎಂಬ ಅನುಮಾನ ಇದೀಗ ಸಾರ್ವಜನಿಕ ವಲಯದಲ್ಲಿ ಮೂಡಿದೆ.

ಲಕ್ಷಾಂತರ ರೂಪಾಯಿ ಆದಾಯ ಬರುತ್ತಿರುವ ಕೊರಗಜ್ಜನ ದೈವಸ್ಥಾನದ ಪಕ್ಕದಲ್ಲಿಯೇ, ಇದೀಗ ದೈವ ರಾಜ ಗುಳಿಗ ಹೆಸರಿನಲ್ಲಿ ಮತ್ತೊಂದು ದೈವಸ್ಥಾನ ನಿರ್ಮಾಣವಾಗಿದೆ.

 

ಇದಲ್ಲದೆ ದೈವಸ್ಥಾನದ ಟ್ರಸ್ಟ್​ ಸದಸ್ಯರಲ್ಲಿಯೇ ಹಣಕ್ಕಾಗಿ ಕಿತ್ತಾಟ ಆರಂಭವಾಗಿದ್ದು, ದೈವಸ್ಥಾನದ ಅರ್ಚಕ ಹುಂಡಿಯನ್ನು ತನ್ನ ಮನೆಗೆ ಕೊಂಡೊಯ್ದಿರುವ ಘಟನೆ ನಡೆದಿದೆ. ಅಲ್ಲದೆ, ದೈವಸ್ಥಾನದ ಅರ್ಚಕ ಹಾಗೂ ಟ್ರಸ್ಟ್ ಅಧ್ಯಕ್ಷನ ನಡುವೆ ಕಿತ್ತಾಟ ನಡೆದಿದ್ದು, ಅರ್ಚಕ ತೇಜುಕುಮಾರ್​ಗೆ ಅಧ್ಯಕ್ಷ ಬಂಗಾರಪ್ಪ ಬೆದರಿಕೆ ಹಾಕಿದ ಆರೋಪ ಕೇಳಿ ಬಂದಿದೆ.

ಸದ್ಯ ಅರ್ಚಕ ಮತ್ತು ಟ್ರಸ್ಟ್​​ನ ಅಧ್ಯಕ್ಷನ ನಡುವಿನ ಗಲಾಟೆಯಿಂದ ಬೇಸತ್ತ ಅರ್ಚಕನ ಪತ್ನಿ ಆತ್ಮಹತ್ಯೆಗೆ ಯತ್ನಿಸಿ, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಖ್ಯವಾದ ವಿಚಾರವೆಂದರೆ ದೈವಸ್ಥಾನದ ಹಣಕ್ಕಾಗಿ ಕಿತ್ತಾಡಿಕೊಂಡಿರುವ ಇವರೆಲ್ಲರೂ ಸಂಬಂಧಿಕರೇ. ಇಷ್ಟಾಗಿಯೂ ಘಟನೆಯ ಸಂಬಂಧ ಈವರೆಗೆ ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲ ಎಂದು ವರದಿಯಾಗಿದೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಹಿಳೆಯರ ಪಾತ್ರ ಕಲಿಯುಗದಲ್ಲಿ ಮಾತ್ರವಲ್ಲ.ಅನಾದಿ ಕಾಲದಿಂದಲೂ ಇದೆ

Wed Feb 15 , 2023
  ಮಹಿಳೆಯರ ಪಾತ್ರ ಕಲಿಯುಗದಲ್ಲಿ ಮಾತ್ರವಲ್ಲ.ಅನಾದಿ ಕಾಲದಿಂದಲೂ ಸಾಮರ್ಥ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ. ದಾಸಿಯಿಂದ ಹಿಡಿದು ರಾಜ್ಯವಾಳುವ ರಾನೀಯವರೆಗೆ ಮಹಿಳೆಯ ಪಾತ್ರ ಅಷ್ಟೇ ಮುಖ್ಯವಾದದ್ದು. ಆರಂಭಿಕ-ಆಧುನಿಕ ಭಾರತದಲ್ಲಿ ಮರಾಠ ಸಾಮ್ರಾಜ್ಯದ ಉದಾತ್ತ ರಾಣಿ ಎಂದೇ ಹೆಸರು ಪಡೆದ ಅಹಲ್ಯಾ ಬಾಯಿ ಹೋಳ್ಕರ್ ಇಡೀ ವಿಶ್ವಕ್ಕೆ ಭಾರತದ ಅಪರೂಪದ ವಸ್ತುವನ್ನು ಪರಿಚಯಮಾಡಿಕೊಟ್ಟಿದ್ದಾರೆ.   ಭಾರತದ ಹೆಸರನ್ನು ಜಗತ್ತಿಗೆ ಪರಿಚಯಿಸುವುದಷ್ಟೇ ಅಲ್ಲದೆ ದೇಶದಲ್ಲಿ ನೂರಾರು ದೇವಾಲಯಗಳು ಮತ್ತು ಧರ್ಮಶಾಲೆಗಳನ್ನು ನಿರ್ಮಿಸಿದ ಮಹಾನ್ ಪ್ರವರ್ತಕಿ. ಮೊಘಲ್ […]

Advertisement

Wordpress Social Share Plugin powered by Ultimatelysocial