ಬಿಜೆಪಿ ಕಾರ್ಯಕಾರಣಿ ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿದ್ದು,

ಬೆಂಗಳೂರು: ಬಿಜೆಪಿ ಕಾರ್ಯಕಾರಣಿ ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿದ್ದು, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮಾಜಿ ಪ್ರಧಾನಿ ದೇವೇಗೌಡರ ಮಕ್ಕಳ (ಕುಮಾರಸ್ವಾಮಿ, ರೇವಣ್ಣ ) ವಿರುದ್ಧ ವಾಗ್ದಾಳಿ ನಡೆಸಿದರು. ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಜೋಶಿ, ‘ಪಂಚರತ್ನ ಅಂತಾ ಯಾಕೆ ಹೆಸರು ಇಟ್ಟವ್ರೋ ಅಂತಾ ಗೊತ್ತಿಲ್ಲ.

ದೇವೇಗೌಡರಿಗೆ, ಇಬ್ಬರು ಮಕ್ಕಳು. ಆ ಇಬ್ಬರಿಗೆ ಇಬ್ರು ಹೆಂಡಂದಿರು. ಅವರ ಮಕ್ಕಳಲ್ಲಿ ಒಬ್ಬ ಎಂಎಲ್ಸಿ, ಮತ್ತೊಬ್ಬ ಎಂಪಿ, ಇನ್ನೊಬ್ಬ ಚುನಾವಣೆ ಯಲ್ಲಿ ಸ್ಪರ್ಧೆ ಮಾಡ್ತಾವ್ನೆ. ಒಟ್ಟು 9 ಜನರು, ಇವ್ರು ಪಂಚರತ್ನ ಅಲ್ಲ, ಇವ್ರು ನವಗ್ರಹ ಯಾತ್ರೆ ಅಂತಾ ಮಾಡಬೇಕಿತ್ತು’ ಎಂದು ಜೆಡಿಎಸ್ ಕುಟುಂಬ ರಾಜಕಾರಣ ವಿರುದ್ಧ ವ್ಯಂಗ್ಯ ಮಾಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಇವರು, ‘ಅವರ ಮನೆಯಲ್ಲೇ ಬಡಿದಾಟ ಇದೆ. ಕೊನೆಗೆ ನಮ್ಮ ಹೈಕಮಾಂಡ್ ಇದೆ ತೀರ್ಮಾನ ಮಾಡ್ತಾರೆ ಅಂತಾರೆ. ಹೈಕಮಾಂಡ್ ಎಲ್ಲಿರೋದು ಅಡುಗೆ ಮನೇಲಾ..? ಕುಟುಂಬದಲ್ಲಿ ಒಟ್ಟಿಗೆ ಇರಲು ಇವರಿಗೆ ಯೋಗ್ಯತೆ ಇಲ್ಲ. ಕುಟುಂಬ ಸರಿಯಾಗಿ ಇಲ್ಲದವ್ರು ಇವ್ರು ರಾಜ್ಯ ಉದ್ಧಾರ ಮಾಡ್ತಾರಾ..?’ ಎಂದು ಜೆಡಿಎಸ್ ನಾಯಕರಿಗೆ ಟಾಂಗ್ ಕೊಟ್ಟರು.

ಇನ್ನು ಕಾಂಗ್ರೆಸ್ ವಿರುದ್ಧ ಮಾತಾನ್ನಾಡಿದ ಕೇಂದ್ರ ಸಚಿವ ಜೋಶಿ, ‘ಕಾಂಗ್ರೆಸ್ ನವರದ್ದು ಪ್ರಜಾಧ್ವನಿ ಯಾತ್ರೆ. , ತುರ್ತು ಪರಿಸ್ಥಿತಿಯಲ್ಲಿ ಕತ್ತು ಹಿಸುಕಿದವರು ಇಂದು ಪ್ರಜಾಧ್ವನಿ ಮಾಡ್ತಿದ್ದಾರೆ. ಇದು ಸಿದ್ದರಾಮಯ್ಯನವರಿಗೆ ಕ್ಷೇತ್ರ ಹುಡುಕುವ ಭಾಗ್ಯ ಯಾತ್ರೆ. ಸಿಎಂ ಆಗಿದ್ದವರಿಗೆ ಸ್ವಂತ ಕ್ಷೇತ್ರದಲ್ಲಿ ನಿಂತು ಗೆಲ್ಲುವ ಯೋಗ್ಯತೆ ಇಲ್ಲ. ಹಿಂದೆ ಪರಮೇಶ್ವರ್ ರನ್ನು ಸಿದ್ದರಾಮಯ್ಯ ಸೋಲಿಸಿದ್ರು. ಇವಾಗ ಕೆ ಎಚ್ ಮುನಿಯಪ್ಪ ಮುಗಿಸಲು ಹೊರಟಿದ್ದಾರೆ. ಇವರಿಂದ ದಲಿತರ ರಕ್ಷಣೆ ಸಾಧ್ಯನಾ..?’ ಎಂದು ಕಾಂಗ್ರೆಸ್ ನಾಯಕರ ವಿರುದ್ದವೂ ವಾಗ್ದಾಳಿ ನಡೆಸಿದರು.

ದೇಶದಲ್ಲಿ ನಿಜವಾದ ಅಮೃತಕಾಲದ ಲಕ್ಷಣಗಳು ಕಾಣಿಸ್ತಾ ಇವೆ. ಚುನಾವಣೆಯಲ್ಲಿ ನಾವು ಕೃಷ್ಣ ಸಾರಥ್ಯವನ್ನು ವಹಿಸಬೇಕಾಗಿದೆ. ಕಾಂಗ್ರೆಸ್ ನವರು ಬೇಕಾದ್ದು ಸುಳ್ಳು ಹೇಳಿಕೊಂಡು ಹೋಗುತ್ತಾರೆ. 200 ಯುನಿಟ್ ಕರೆಂಟ್ ಫ್ರೀ ಕೊಡುತ್ತಾರೆ ಅಂತೆ, ಕೊಡುವುದಾದರೆ ಸಿದ್ದರಾಮಯ್ಯ ಸರ್ಕಾರದ ಕಾಲದಲ್ಲಿ ಯಾಕೆ ಕೊಡಲಿಲ್ಲ? ಡಿಕೆ ಶಿವಕುಮಾರ್ ಇಂಧನ ಮಂತ್ರಿ ಆಗಿದ್ರು. ಇವರ ಕಾಲದಲ್ಲಿ ಸುಳ್ಯದಲ್ಲಿ ಕರೆಂಟ್ ಕೇಳಿದ್ದಕ್ಕೆ ಯುವಕನನ್ನು ಜೈಲಿಗೆ ಹಾಕಿದ್ದರು. 2012 ರಲ್ಲಿ 3 ದಿನ ಇಡೀ ಉತ್ತರ ಭಾರತ ಕತ್ತಲೆಯಲ್ಲಿ ಇತ್ತು. ಇಂತಹವರು ಇಂದು ಫ್ರೀ ವಿದ್ಯುತ್ ಕೊಡುತ್ತಾರಂತೆ ಎಂದರು.

ನಂತರ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ನಮ್ಮ ಪಕ್ಷದ ಶಾಸಕರು ಇರುವ ಕ್ಷೇತ್ರಗಳಿಗೆ ಹೋದ್ರೆ ಒಂದೊಂದು ಸಾವಿರ ಕೋಟಿಗೂ ಹೆಚ್ಚು ಅನುದಾನ ಬಂದಿದೆ. ದೇಶದಲ್ಲಿ ಮೊದಲ ಬಾರಿಗೆ ಬಂಜಾರ ಸಮುದಾಯಕ್ಕೆ ಹಕ್ಕು ಪತ್ರ ವಿತರಣೆ ಮಾಡಿರುವ ಸರ್ಕಾರ ಅಂದರೆ ಕರ್ನಾಟಕ ಸರ್ಕಾರ. ಡಬಲ್ ಇಂಜಿನ್ ಸರ್ಕಾರಗಳಿಂದ ಬಹಳ ಅದ್ಭುತವಾದ ಕೆಲಸ ನಡೆಯುತ್ತಿದೆ. ಆದರೆ ಈಗ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಹೋರಾಟ ನಡೆಯುತ್ತಿದೆ. ಒಬ್ಬರು ಸಿಎಂ ಆಗಿದ್ದಂತವ್ರು ಇನ್ನೂ ಅವರಿಗೆ ಒಂದು ಕ್ಷೇತ್ರ ಸಿಕ್ಕಿಲ್ಲ. ಇನ್ನೊಬ್ಬರು ಕೆಪಿಸಿಸಿ ಅಧ್ಯಕ್ಷರು. ಇಬ್ಬರು ಪ್ರತ್ಯೇಕ ಶುರುವಾಗ್ತಿದ್ದಂತೆ ಪರಮೇಶ್ವರ್ ರಿಂದ ಕಾಂಗ್ರೆಸ್ ಜಗಳ ಬೀದಿಗೆ ಬಂದಿದೆ. ಕಾಂಗ್ರೆಸ್ ನಲ್ಲಿ ಪರಮೇಶ್ವರ್ ಜಗಳದಿಂದ ಮೂರು ಬಣವಾಗಿದೆ. ಜೆಡಿಎಸ್ ನ ಪಂಚರತ್ನ ಯಾತ್ರೆ ಬಸ್ಸು, ಬ್ರೇಕ್ ಫೇಲೂರ್ ಆಗಿ ಹಾಸನದ ಮನೆಯಲ್ಲೇ ನಿಂತಿದೆ ಎಂದು ಲೇವಡಿ ಮಾಡಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸೋಶಿಯಲ್​ ಮೀಡಿಯಾದಲ್ಲಿ ಫೇಮಸ್​ ಆಗಿರೋ ಅಯ್ಯೋ ಶ್ರದ್ಧಾ ಓದಿದ್ದೇನು ನೋಡಿ.

Sat Feb 4 , 2023
ಅಯ್ಯೋ ಶ್ರದ್ಧಾಪ್ರಸಿದ್ಧ ಹಾಸ್ಯನಟಿಯಾಗಿ ಸೋಶಿಯಲ್​ ಮೀಡಿಯಾದಲ್ಲಿ ತುಂಬಾ ಹೆಸರು ಮಾಡಿದ್ದಾರೆ. ಅವರ ಎಲ್ಲಾ ವಿಡಿಯೋಗಳನ್ನೂ ಸಹ ಜನರು ಇಷ್ಟಪಟ್ಟು ನೋಡ್ತಾರೆ. RJ ಮತ್ತು ದೂರದರ್ಶನ ನಿರೂಪಕಿ ಆಗಿ ಕೂಡಾ ಇವರು ಕಾರ್ಯನಿರ್ವಹಿಸಿದ್ದಾರೆ. ಸದ್ಯ ಕಂಪನಿ ಉದ್ಯೋಗಿಗಳನ್ನು ವಜಾಗೊಳಿಸುವಿಕೆಯ ಕುರಿತು ವೀಡಿಯೊವನ್ನು ಮಾಡಿದ್ದಾರೆ. ಅದು ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ವೈರಲ್​ ಆಗಿರುವ ವಿಡಿಯೋ ಆಗಿದೆ. ಅವರ ಶಿಕ್ಷಣ ಹಾಗೂ ವೃತ್ತಿ ಜೀವನ ಎರಡೂ ಕೂಡಾ ತುಂಬ ಉತ್ತಮವಾಗಿದೆ. ಹಾಗಾದ್ರೆ ಅವರು ಮಾಡಿರೋ […]

Advertisement

Wordpress Social Share Plugin powered by Ultimatelysocial