ಸೋಶಿಯಲ್​ ಮೀಡಿಯಾದಲ್ಲಿ ಫೇಮಸ್​ ಆಗಿರೋ ಅಯ್ಯೋ ಶ್ರದ್ಧಾ ಓದಿದ್ದೇನು ನೋಡಿ.

ಅಯ್ಯೋ ಶ್ರದ್ಧಾಪ್ರಸಿದ್ಧ ಹಾಸ್ಯನಟಿಯಾಗಿ ಸೋಶಿಯಲ್​ ಮೀಡಿಯಾದಲ್ಲಿ ತುಂಬಾ ಹೆಸರು ಮಾಡಿದ್ದಾರೆ.

ಅವರ ಎಲ್ಲಾ ವಿಡಿಯೋಗಳನ್ನೂ ಸಹ ಜನರು ಇಷ್ಟಪಟ್ಟು ನೋಡ್ತಾರೆ. RJ ಮತ್ತು ದೂರದರ್ಶನ ನಿರೂಪಕಿ ಆಗಿ ಕೂಡಾ ಇವರು ಕಾರ್ಯನಿರ್ವಹಿಸಿದ್ದಾರೆ.

ಸದ್ಯ ಕಂಪನಿ ಉದ್ಯೋಗಿಗಳನ್ನು ವಜಾಗೊಳಿಸುವಿಕೆಯ ಕುರಿತು ವೀಡಿಯೊವನ್ನು ಮಾಡಿದ್ದಾರೆ. ಅದು ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ವೈರಲ್​ ಆಗಿರುವ ವಿಡಿಯೋ ಆಗಿದೆ. ಅವರ ಶಿಕ್ಷಣ ಹಾಗೂ ವೃತ್ತಿ ಜೀವನ ಎರಡೂ ಕೂಡಾ ತುಂಬ ಉತ್ತಮವಾಗಿದೆ.

ಹಾಗಾದ್ರೆ ಅವರು ಮಾಡಿರೋ ಕೋರ್ಸ್​ ಯಾವ್ದು?ಶಿಕ್ಷಣಿಕ ಅರ್ಹತೆ ಏನು ಎಂದು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ಇದನ್ನು ಪೂರ್ತಿಯಾಗಿ . ಇವರು ತುಳು, ಕನ್ನಡ, ಹಿಂದಿ, ಮರಾಠಿ ಮತ್ತು ಇಂಗ್ಲಿಷ್ ಸೇರಿದಂತೆ 5 ಭಾಷೆಗಳಲ್ಲಿ ವೀಡಿಯೊಗಳನ್ನು ಪೋಸ್ಟ್ ಮಾಡುತ್ತಾರೆ.ಇವರು ಐಟಿ ಉದ್ಯೋಗದಿಂದ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ್ದಾರೆ. 2008 ರಲ್ಲಿ ಅವಳು ತನ್ನ ಕೆಲಸವನ್ನು ಬಿಟ್ಟು ಫೀವರ್ 104 FM ನಲ್ಲಿ ರೇಡಿಯೋ ಜಾಕಿಯಾಗಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ್ದಾರೆ. ಅವರು ಒಂಬತ್ತು ವರ್ಷಗಳಿಗೂ ಹೆಚ್ಚು ಕಾಲ ರೇಡಿಯೋ ಜಾಕಿಯಾಗಿ ಕೆಲಸ ಮಾಡಿದ್ದಾರೆ.

ಅವರು ಅಕುಲ್ ಬಾಲಾಜಿ ಅವರೊಂದಿಗೆ ಕನ್ನಡ ಡ್ಯಾನ್ಸ್ ರಿಯಾಲಿಟಿ ಶೋ ‘ಡ್ಯಾನ್ಸಿಂಗ್ ಸ್ಟಾರ್’ ಅನ್ನು ಸಹ ನಡೆಸಿಕೊಟ್ಟಿದ್ದರು. 2017 ರಲ್ಲಿ, ಅವರು ಅಮೆಜಾನ್ ಪ್ರೈಮ್‌ನ ‘ಪುಷ್ಪವಲ್ಲಿ’ ವೆಬ್ ಸರಣಿಯಲ್ಲಿ ಇನ್ನಷ್ಟು ಜನರಿಗೆ ಹತ್ತಿರವಾದ್ರು.

ಇವರು ಉತ್ತಮವಾಧ ಶಿಕ್ಷಣವನ್ನು ಹೊಂದಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಸಹ ಪೂರ್ಣಗೊಳಿಸಿದ್ದಾರೆ. ತಮ್ಮ ಶಿಕ್ಷಣವನ್ನು ಮಂಗಳೂರು ಹಾಗೂ ಮುಂಬೈನಲ್ಲಿ ಪಡೆದಿದ್ದಾರೆ. ಪ್ರಾಥಮಿಕ ಹಂತದಲ್ಲಿ ಮಂಗಳೂರಿನಲ್ಲಿ ವಾಸವಿದ್ದರು ನಂತರ ಮುಂಬೈಗೆ ತೆರಳಿದ್ದಾರೆ.

ಇಂಜಿನಿಯರಿಂಗ್​ ದ ಇವರು ಸ್ವಲ್ಪ ವರ್ಷ ಇಂಜಿನಿಯರ್​ ಆಗಿ ತಮ್ಮ ಕಾರ್ಯಾನುಭವ ಹೊಂದಿದ್ದಾರೆ. ನಂತರ ಇವರು ಆರ್​ಜೆ ಯಾಗಿ ತಮ್ಮ ವೃತ್ತಿ ಜೀವನವನ್ನು ಮುಂದುವರೆಸಿದ್ದಾರೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಖರ್ಜೂರ ಬಹಳ ಪೌಷ್ಟಿಕ ಹಣ್ಣು.

Sat Feb 4 , 2023
ಖರ್ಜೂರ ಬಹಳ ಪೌಷ್ಟಿಕ ಹಣ್ಣು. ಪ್ರತಿನಿತ್ಯ ಇದನ್ನು ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಖರ್ಜೂರವನ್ನು ತಿನ್ನುವುದರಿಂದ ದೇಹಕ್ಕೆ ಕಾರ್ಬೋಹೈಡ್ರೇಟ್ ದೊರೆಯುತ್ತದೆ. ಇದರಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಅನೇಕ ರೋಗಗಳ ವಿರುದ್ಧ ಹೋರಾಡುತ್ತವೆ ಮತ್ತು ನಮ್ಮ ದೇಹವನ್ನು ರಕ್ಷಿಸುತ್ತವೆ. ಇದು ಕ್ಯಾಲೋರಿಗಳು, ಫೈಬರ್, ವಿಟಮಿನ್ ಬಿ 6, ಕಬ್ಬಿಣ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ತಾಮ್ರದಿಂದ ಸಮೃದ್ಧವಾಗಿದೆ. ರಕ್ತಹೀನತೆ ಮತ್ತು ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ಜನರಿಗೆ ಇದು ಪ್ರಯೋಜನಕಾರಿಯಾಗಿದೆ. ಆದರೆ ಕೆಲವರು ಈ ಖರ್ಜೂರವನ್ನು […]

Advertisement

Wordpress Social Share Plugin powered by Ultimatelysocial